ಇತ್ತೀಚಿನ ಸುದ್ದಿ
ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ ಗ್ರಾಪಂ ಅಧ್ಯಕ್ಷ
26/01/2026, 20:17
ಗಿರಿಧರ್ ಕೊಂಪುಳಿರ ಮಡಿಕೇರಿ.
info.reporterkarnataka@gmail.com
ಸೋಮವಾರಪೇಟೆ ಸಮೀಪದ ಕಾಜೂರು ಗ್ರಾಮದ ನಿವಾಸಿ ಪುಷ್ಪ ಎಂಬುವವರ ಮನೆಗೆ ಮಧ್ಯರಾತ್ರಿ ಸುಮಾರು 11:40ಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಮನೆ ಸಂಪೂರ್ಣ ಭಸ್ಮವಾಗಿದೆ.
ಪುಷ್ಪ ಅವರು ತಮ್ಮ ಮೊಮ್ಮಗ ಹರ್ಷಿತ್‌ನೊಂದಿಗೆ ಗಾಢ ನಿದ್ರೆಯಲ್ಲಿದ್ದಾಗ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚರಗೊಂಡ ಪುಷ್ಪ ಅವರು ಅಕ್ಕಪಕ್ಕದವರ ಗಮನಕ್ಕೆ ತಂದಿದ್ದಾರೆ. ಪಕ್ಕದ ಮನೆಯವರಾದ ಐಗೂರು ಗ್ರಾ.ಪಂ. ಅಧ್ಯಕ್ಷರಾದ ವಿನೋದ್ ಅವರು, ಮನೆಯೊಳಗೆ ಮಲಗಿದ್ದ ಬಾಲಕ ಹರ್ಷಿತ್‌ನನ್ನು ಹೊರತಂದರು.
ಸ್ಥಳೀಯರು ಬೆಂಕಿ ನಂದಿಸಲು ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಕರೆ ಸ್ವೀಕರಿಸಿದ ಕೇವಲ 20 ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು.
ಈ ಬೆಂಕಿ ಅವಘಡದಿಂದಾಗಿ ಮನೆಯಲ್ಲಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಅಪಾರ ನಷ್ಟ ಸಂಭವಿಸಿದೆ.













