ಇತ್ತೀಚಿನ ಸುದ್ದಿ
ಬಾಳೆಹೊನ್ನೂರಿನ ನಾಡಕಚೇರಿಯಲ್ಲಿ ಹಾರದ ತಿರಂಗ!: ಗಣ ರಾಜ್ಯೋತ್ಸವ ಆಚರಣೆಗೆ ಅಧಿಕಾರಿಗಳ ಅಸಡ್ಡೆ
26/01/2026, 12:44
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಗಣರಾಜ್ಯೋತ್ಸವ ಆಚರಿಸದೇ,ನಾಡಕಚೇರಿಗೆ ಅಧಿಕಾರಿಗಳು
ಬೀಗ ಹಾಕಿದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.


ಬಾಳೆಹೊನ್ನೂರಿನ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ತಾತ್ಕಾಲಿಕ ನೆಲೆಯಲ್ಲಿ ನಾಡಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಹೊಸ ನಾಡಕಚೇರಿ ಪ್ರಾರಂಭವಾಗಿದ್ದು,ಅಧಿಕಾರಿಗಳು ಗಣರಾಜ್ಯೋತ್ಸವ ಆಚರಿಸದ ಬೀಗ ಹಾಕಿದ್ದಾರೆ.
ಹಳೆಯದ್ದು-ಹೊಸದು ಎರಡರಲ್ಲಿ ಎಲ್ಲೂ ಅಧಿಕಾರಿಗಳು ಧ್ವಜಾರೋಹಣ ಮಾಡದೆ ಅಸಡ್ಡೆ ತೋರಿಸಿದ್ದಾರೆ. ಅಧಿಕಾರಿಗಳ ವರ್ತನೆ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.












