ಇತ್ತೀಚಿನ ಸುದ್ದಿ
Raichuru | ಮಸ್ಕಿ: ಅಂತರಗಂಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ; ಕಲಿಕಾ ಪ್ರದರ್ಶನ
25/01/2026, 11:41
ವಿರೂಪಾಕ್ಷಯ್ಯ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
2025-26ನೇ ಸಾಲಿನ ಮೆದಿಕಿನಾಳ ವಲಯದ “ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ” FLN ಕಲಿಕಾ ಹಬ್ಬ ಕಾರ್ಯಕ್ರಮ
ಮಸ್ಕಿ ಪಟ್ಟಣದ ಅಂತರಗಂಗ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ನಡೆಯಿತು.
1ರಿಂದ 5ನೇ ತರಗತಿಯ ಮಕ್ಕಳಿಗೆ ವಿಶೇಷವಾಗಿ “ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ” (FLN) ಚಟುವಟಿಕೆಗಳ ಬಲಬರ್ದನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕಾ ವಾತಾವರಣವನ್ನು ಪ್ರೇರೇಪಿಸುತ್ತದೆ. ಇದರಲ್ಲಿ ಒಟ್ಟು 11 ಚಟುವಟಿಕೆಗಳಿದ್ದು,7 ಆಯ್ದು ಚಟುವಟಿಕೆ ಮಾಡಿಸಲಾಯಿತು. 12 ಪ್ರಾಥಮಿಕ ಶಾಲೆಯ 1-5ನೇ ತರಗತಿಯ ಮಕ್ಕಳು ಖುಷಿಯಿಂದ ಪಾಲ್ಗೊಂಡಿದ್ದರು.
ಹಾಗೂ ಕಲಿಕಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಪ್ರಥಮ, ದ್ವಿತೀಯ, ತೃತೀಯ ಬಂದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಎಲ್ಲ ಮಕ್ಕಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಲಾಯಿತು.




ಮೆದಿಕಿನಾಳ ವಲಯದ CRP ಗಳಾದ ರಾಜು ವಾಲಿಕಾರ ರವರು ಸಂತೋಷದಾಯಕವಾಗಿ ಮತ್ತು ಚಟುವಟಿಕೆಗಳ ಮೂಲಕ ಮಕ್ಕಳು ತುಂಬಾ ಖುಷಿಯಿಂದ ಕಲಿಯುತ್ತಾರೆ. ಪಾಲಕರು ಮಕ್ಕಳ ಕಲಿಕೆಯ ಕೆಡೆ ಗಮನ ಹರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಎಸ್ಡಿಎಂಸಿ ಅಧ್ಯಕ್ಷ ರಾಯಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗಪ್ಪ, ಮುಖಂಡರಾದ ಗುರಪ್ಪ ಗೊಮರ್ಸಿ, ಗವಿಯಪ್ಪ ಗೌಡ, ಕನಕರಾಯ, ಮೌನೇಶ್ ವೆಂಕಾಪುರ, ಶಿಕ್ಷಕ ಈಶ್ವರಪ್ಪ, ಕರಿಬಸಮ್ಮ, ಗ್ರಾಮ ಪಂಚಾಯತಿ ಶರಣಬಸವ ನಂದಿಹಾಳ್, ರಮೇಶ್ ಸೇರಿದಂತೆ ಅನೇಕ ಶಿಕ್ಷಕರು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.












