ಇತ್ತೀಚಿನ ಸುದ್ದಿ
ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ
23/01/2026, 18:35
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail com
ಕಾಫಿನಾಡು ಚಿಕ್ಕಮಗಳೂರಿನ ಹುಡ್ಗ ಚೀನಾದ ಹುಡ್ಗಿಯನ್ನು ಪ್ರೀತಿಸಿ ಗ್ರಹಸ್ಥಾಶ್ರಮ ಪ್ರವೇಶಿಸಿದ್ದಾರೆ.
ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಮದುವೆ ನೆರವೇರಿದೆ.
ಚೀನಾ ಮೂಲದ ಯುವತಿ ಜೇಡ್ (jade) ಅವರನ್ನು
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡಿನ ಯುವಕ ರೂಪಕ್ ವರಿಸಿದ್ದಾರೆ.







ಕಾಫಿನಾಡ ಹುಡುಗ ರೂಪಕ್ ಮತ್ತು ಚೀನಾದ ಬೆಡಗಿ ಜೇಡ್ ಅವರ ನಡುವೆ ಆಸ್ಟ್ರೇಲಿಯಾದಲ್ಲಿ ಓದುವಾಗ ಪ್ರೇಮಾಂಕುರವಾಗಿತ್ತು. ಚೀನಾದಿಂದ ಮಗಳನ್ನ ಕರೆತಂದು ಆಕೆಯ ಹೆತ್ತವರು ಕಾಫಿನಾಡ ಯುವಕನಿಗೆ ಧಾರೆ ಎರೆದು ಕೊಟ್ಟಿದ್ದಾರೆ. ಭಾರತ ಮತ್ತು ಚೀನಾ ಸಂಪ್ರದಾಯ ಎರಡು ಒಂದೇ ರೀತಿ ಎಂದು ಮಧು
ಖುಷಿ ಪಟ್ಟಿದ್ದಾರೆ. ವಧು- ವರರು ಆಸ್ಟ್ರೇಲಿಯಾದಲ್ಲೇ
ಸೆಟಲ್ ಆಗಿದ್ದಾರೆ. ಚಿಕ್ಕಮಗಳೂರಿನ ಸೌಂದರ್ಯ ಕಂಡು ಚೀನಾದ ಹುಡ್ಗಿ ಫಿದಾ ಆಗಿದ್ದಾರೆ. ಸಂಬಂಧಿಕರೆನ್ನೆಲ್ಲಾ ಕರೆದು ಅದ್ದೂರಿಯಾಗಿ ಮದುವೆ ನೆರವೇರಿದೆ.












