ಇತ್ತೀಚಿನ ಸುದ್ದಿ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ ಇಲಾಖೆಗೆ ಪ್ರಶಸ್ತಿ
18/01/2026, 21:50
ಬೆಂಗಳೂರು(reporterkarnataka.com): ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನ ದೊರೆತಿದೆ. ದೊಡ್ಡ ರಾಜ್ಯಗಳ ಪೈಕಿ ಯೋಜನೆ ಅನುಷ್ಠಾನದಲ್ಲಿ ಒಟ್ಟಾರೆ ಪ್ರಗತಿಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಕೃಷಿ ಇಲಾಖೆಗೆ ಪ್ರಶಸ್ತಿ ಸಂದಿದೆ.
27,04,166 ರೈತರು ನೋಂದಣೆ ಪೈಕಿ 11,85,642 ರೈತರು ರೂ. 2094 ಕೋಟಿ ಕ್ಲೇಮ್ ಮಾಡಿದಾರೆ.
2024 -25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಭಾರತ ಸರ್ಕಾರ ಇವರು ಪ್ರಶಂಸನ ಪತ್ರವನ್ನು ನೀಡಿರುತ್ತಾರೆ . ಕೃಷಿ ಇಲಾಖೆಯ ಆಯುಕ್ತರು ಹಾಗೂ ಕೃಷಿ ನಿರ್ದೇಶಕರು ಭಾನುವಾರ ಬೆಂಗಳೂರಿನಲ್ಲಿ ನಡೆದ 13ನೆಯ ರಾಷ್ಟ್ರೀಯ ಸಮ್ಮೇಳನದಂದು ಕಾರ್ಯದರ್ಶಿಗಳು ಸಹಕಾರ ಸಚಿವಾಲಯ ಭಾರತ ಸರ್ಕಾರ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.












