ಇತ್ತೀಚಿನ ಸುದ್ದಿ
ಮದ್ಯದ ಅಮಲಿನಲ್ಲಿ ಮಗನಿಂದಲೇ ತಂದೆಯ ಹತ್ಯೆ: ತೋಟದ ಮಾಲೀಕ ಸಹಿತ 8 ಮಂದಿ ಬಂಧನ
17/01/2026, 16:23
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗಿನ ಕಟ್ಟೆಮಾಡುನಲ್ಲಿ ಮದ್ಯದ ಅಮಲಿನಲ್ಲಿ ಮಗನೇ ತಂದೆಯ ಹತ್ಯೆ ಮಾಡಿದ ಘಟನೆ ನಡೆದಿದೆ.



ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸಕೇರಿ ನಿವಾಸಿ ದೇವಯ್ಯ ಅವರ ಸಾಲು ಮನೆಯಲ್ಲಿ ವಾಸವಿದ್ದ ವಲಸಿಗ ಕಾರ್ಮಿಕರಾದ ಬುರೋ ಮುದ್ದಿ ಹಾಗೂ ಆತನ ಪುತ್ರ ಪ್ರಶಾಂತ್ ಮುದ್ದಿ ನಡುವೆ ಜಗಳ ನಡೆದಿದ್ದು, ಜಗಳ ವೇಳೆ ಪ್ರಶಾಂತ್ ಮುದ್ದಿ ತಂದೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಜನವರಿ 11 ರಂದು ಬುರೋ ಸ್ಥಳದಲ್ಲೇ ಸಾವನಪ್ಪಿದ ಹಿನ್ನಲೆಯಲ್ಲಿ ಸಾವನ್ನು ಮರೆ ಮಾಚುವ ಸಲುವಾಗಿ ತೋಟದ ಮಾಲೀಕ ದೇವಯ್ಯ ಮೂಲಕ ಮಡಿಕೇರಿಯ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿ ಸಾಕ್ಷಿ ನಾಶಪಡಿಸಿದ್ದರು. ಈ ಬಗ್ಗೆ ಮಾಹಿತಿ ದೊರೆತ ಪೊಲೀಸರು ಕೊಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಈ ಪ್ರಕರಣ ಸಂಬಂಧ A1 ಆರೋಪಿ ಪ್ರಶಾಂತ್ ನೀಡಿದ ಮಾಹಿತಿ ಮೇರೆಗೆ ಅದೇ ಕುಟುಂಬದ ಮೂಲತಃ ಪಶ್ಚಿಮ ಬಂಗಾಳದ ವರ್ಧಮಾನ್ ಜಿಲ್ಲೆಯ ಪ್ರಶಾಂತ್ ಮುದಿ, ಶ್ರೀಕಾಂತ್ ಮುದಿ, ಸುಧಾನ್ ಮುದಿ ಲಕ್ಷ್ಮೀ ಮುದಿ, ತನುಶ್ರೀ, ಬಸಂತಿ ಮುದಿ ಹಾಗೂ ತೋಟದ ಮಾಲೀಕರು ಆದ ಎಂ. ಎಸ್ ದೇವಯ್ಯ ಹಾಗೂ ಪತ್ನಿ ಭಾರತಿ ಯನ್ನು ಬಂಧಿಸಲಾಗಿದೆ.












