ಇತ್ತೀಚಿನ ಸುದ್ದಿ
ಕುಡಿದು ವಾಹನ ಚಾಲನೆ: ಐವರು ಚಾಲಕರಿಗೆ ಬಿತ್ತು ಫೈನ್
08/01/2026, 11:27
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ನಶೆ ಏರಿಸಿ ವಾಹನ ಚಾಲನೆ ಮಾಡಿದ ಸೋಮವಾರಪೇಟೆಯ ಮೂವರು ಚಾಲಕರು ಮತ್ತು ಶನಿವಾರಸಂತೆಯ ಇಬ್ಬರು ಚಾಲಕರು ಪೊಲೀಸರ ತಪಾಸಣೆ ಸಂದರ್ಭ ಸಿಕ್ಕಿಬಿದ್ದು ದಂಡ ಕಕ್ಕಿದ್ದಾರೆ.
ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳ ವಿಚಾರಣೆ ನಡೆಸಿದ ಸೋಮವಾರಪೇಟೆಯ ಪ್ರಿನ್ಸಿಪಲ್ ಸಿವಿಲ್ & JMFC ನ್ಯಾಯಾಲಯದ ನ್ಯಾಯಾಧೀಶರು ಚರಣ್ ಬಿ.ಬಿ. ಎಂಬಾತನಿಗೆ ರೂ. 7500, ಜಿ.ಇ. ಕೃಷ್ಣಪ್ಪ ಎಂಬಾತನಿಗೆ ರೂ. 8000 ಮತ್ತು ಭುವನ ಕೆ.ಎಂ. ಎಂಬುವವನಿಗೆ ರೂ. 4000 ದಂಡ ವಿಧಿಸಿದ್ದಾರೆ.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳ ವಿಚಾರಣೆ ನಡೆಸಿದ ಸೋಮವಾರಪೇಟೆಯ ಪ್ರಿನ್ಸಿಪಲ್ ಸಿವಿಲ್ & JMFC ನ್ಯಾಯಾಲಯದ ನ್ಯಾಯಾಧೀಶರು ಸಂದೇಶ್ ಎಂಬಾತನಿಗೆ ರೂ. 10000 ಹಾಗೂ ಸುದರ್ಶನ್ ಎಸ್. ಎಂಬಾತನಿಗೆ ರೂ. 10000 ದಂಡ ವಿಧಿಸಿದ್ದಾರೆ.














