3:12 PM Friday8 - May 2026
ಬ್ರೇಕಿಂಗ್ ನ್ಯೂಸ್
ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್

ಇತ್ತೀಚಿನ ಸುದ್ದಿ

ಲಾರಿ- ಬೈಕ್ ಡಿಕ್ಕಿ: ಗಾಯಾಳು ಬೈಕ್ ಸವಾರ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಸಾವು

05/01/2026, 23:57

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಪೊನ್ನoಪೇಟೆ ತಾಲ್ಲೂಕು ಹಾತೂರು ಸಮೀಪ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಸ್ವರೂಪಗಳ ಗಾಯಗಳು ಉಂಟಾಗಿ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತಪಟ್ಟಿದ್ದಾನೆ.
ಮೃತಪಟ್ಟ ಯುವಕ ಬೆಕ್ಕೆಸುಡ್ಲೂರು ನಿವಾಸಿ ಸುಳ್ಳಿಮಡ ಭಜನ್ ದೇವಯ್ಯ (27) ಎಂದು ಗುರುತಿಸಲಾಗಿದೆ.
ಕೊಡಗಿನಿಂದ ಕೇರಳಕ್ಕೆ ಕೊಡಗು ರೈಡರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ ಯಾತ್ರೆಯಲ್ಲಿ ಪಾಲ್ಗೊಂಡು ಕೇರಳದಿಂದ ವಾಪಸಾಗುತ್ತಿದ್ದಾಗ ಕಳೆದ ರಾತ್ರಿ 8:20ರ ಸಮಯದಲ್ಲಿ ಹಾತೂರಿನ ವನಭದ್ರಕಾಳಿ ದೇವಸ್ಥಾನದ ಸಮೀಪ ಕಾರು ಒಂದನ್ನು ಓವರ್ಟೇಕ್ ಮಾಡಿ ಮುನ್ನುಗುತ್ತಿದ್ದಾಗ ಮುಂಭಾಗದಲ್ಲಿ ಬಂದ ಲಾರಿಗೆ ಡಿಕ್ಕಿ ಪಡಿಸಿದ್ದಾನೆ ಎಂದು ಹೇಳಲಾಗಿದೆ.
ಮೃತ ಯುವಕನ ತಂದೆ ಕಳೆದ ಮೂರು ವರ್ಷಗಳ ಹಿಂದೆ ಬೆಕ್ಕೆಸುಡ್ಲೂರಿನಲ್ಲಿ ತನ್ನ ಮಗಳ ಮದುವೆಯ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ನಂತರ ಮೃತನ ತಾಯಿ ಕೂಡ ಗೋಣಿಕೊಪ್ಪಲಿನಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದರು.

ಯುವಕ ಅವಿವಿವಾಹಿತಾನಾಗಿದ್ದ ಇದೀಗ ಇವರ ಕುಟುಂಬದಲ್ಲಿ ವಿವಾಹವಾದ ಇಬ್ಬರು ಸಹೋದರಿಯರು ಮಾತ್ರವಿದ್ದಾರೆ. ಮೃತ ಯುವಕ ಬೆಕ್ಕೆ ಸುಡ್ಲೂರಿನಲ್ಲಿ 12 ಎಕರಿಗಿಂತಲೂ ಹೆಚ್ಚು ಕಾಫಿ ತೋಟ ಹಾಗೂ ಗದ್ದೆ ಹೊಂದಿದ್ದು, ಸ್ವತಹ ತಾನೆ ಮುಂದೆ ನಿಂತು ಅಂದಾಜು 60 ಎಕರೆ ಗದ್ದೆಯಲ್ಲಿ ಈ ಬಾರಿ ಬತ್ತವನ್ನು ಬೆಳೆದಿದ್ದನ್ನು ಎಂದು ಹೇಳಲಾಗಿದೆ.
ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಳಿ ದಾಖಲಿಸಿಕೊಂಡು, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು