ಇತ್ತೀಚಿನ ಸುದ್ದಿ
ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರೆ ಅಧಿಕಾರಿಗಳಿಗೆ ಕಿವಿ ಕೇಳೋದಿಲ್ಲ: ಮಾಜಿ ಗೃಹ ಸಚಿವ ಆರಗ ಆಕ್ರೋಶ
02/01/2026, 18:24
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಹೊರಗಡೆ ಪ್ರತಿಭಟನೆ ಮಾಡಿದರೆ ಕೆಲವರಿಗೆ ಕಿವಿ ಕೇಳುವುದಿಲ್ಲ ಎಂದು ತಾಲೂಕು ಕಚೇರಿಯ ಒಳಗೆ ಬಂದು ಪ್ರತಿಭಟನೆ ಮಾಡುತ್ತಿದ್ದೇವೆ. ನಿಮ್ಮ ರಂಪಾಟದಲ್ಲಿ ನಾನೊಬ್ಬ ಶಾಸಕನಾಗಿ ತಲೆ ಎತ್ತಿಕೊಂಡು ತಿರುಗಾಡಲು ಆಗುತ್ತಿಲ್ಲ. ಬಡವರಿಗೆ ಒಂದು ಬಲಾಢ್ಯ ರಿಗೆ ಒಂದು ಮಾಡುತ್ತಿದ್ದೀರಾ ಎಂದು ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ತಾಲೂಕು ಕಚೇರಿ ಅಧಿಕಾರಿಗಳ ವಿರುದ್ಧ ಕಚೇರಿ ಒಳಗೆ ಪ್ರತಿಭಟನೆ ನಡೆಸಿದ ಅವರು ಇಲ್ಲಿ ಬ್ರೋಕರ್ ಗಳೇ ಆಡಳಿತ ನಡೆಸುತ್ತಿದ್ದಾರೆ. ಎಷ್ಟು ಕಿರುಕುಳ ನೀಡುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ನೀವು ಬ್ರೋಕರ್ ಸೇರಿ ತಾಲೂಕು ಕಚೇರಿ ಕೆಲಸ ಮಾಡುವ ಬದಲು ಬೇರೆ ಎಲ್ಲಾದರೂ ಹೋಗಿ
ನಿಮಗೆ ಹೊಟ್ಟೆಗೆ ತಿನ್ನಲು ಕೆಲಸ ಇಲ್ಲದಿದ್ದರೆ ಕಲೆಕ್ಷನ್ ಮಾಡಿಕೊಡುತ್ತೇನೆ. ನಿಮಗೆ ಮಾನ ಮರ್ಯಾದೆ ಇಲ್ವಾ?
ತಾಲೂಕು ಕಚೇರಿಯಿಂದ ರೆಕಾರ್ಡ್ ಗಳನ್ನು ಕದಿಯುತ್ತಿದ್ದೀರಿ, ಯಾರೆಲ್ಲ ಬ್ರೋಕರ್ಗಳು ಇದ್ದಾರೆ ಎಂದು ನಾನು ಪತ್ರಿಕಾ ಪ್ರಕಟಣೆ ನೀಡುತ್ತೇನೆ. ಮೊದಲು ತಾಲೂಕು ಕಚೇರಿ ಖಾಲಿ ಮಾಡಿ ಎಂದು ತೀವ್ರ ವಾಗ್ದಾಳಿ ನಡೆಸಿದರು..
ನಾನೇ ಸ್ವತಃ ಎಂಎಲ್ಎ ಆಗಿ ಒಂದು ಅರ್ಜಿ ಕೊಟ್ಟಿದ್ದೇನೆ ಕೊಟ್ಟು ಮೂರು ತಿಂಗಳಾಗಿದೆ. ಇದುವರೆಗೂ ಯಾವುದೇ ಅರ್ಜಿಯ ಬಗ್ಗೆ ಕ್ರಮ ಆಗಿಲ್ಲ. ನಕಲಿ ದಾಖಲೆ ಪತ್ರ ಸೃಷ್ಟಿಸಿದ್ದಾರೆ ಏನು ಮಾಡುತ್ತ ಇದ್ದೀರಾ? ಯಾರೋ ದೂರು ನೀಡಿದ್ರು ಅಂತ
ಹೂವಪ್ಪನನ್ನು ಎತ್ತಾಕಿಕೊಂಡು ಹೋಗುತ್ತೇನೆ ಎಂದು ಪೊಲೀಸರು ಹೇಳಿದ್ದಾರಂತೆ ನೋಡೋಣ ಎತ್ತಿಕೊಂಡು ಹೋಗಿ ನಾನು ಬರುತ್ತೇನೆ ನಾನು ಒಮ್ಮೆ ನೋಡಬೇಕು ಅದನ್ನು ಹೇಗೆ ಮಾಡುತ್ತೀರಾ/ ಎಂದು, ಕೊಲೆಗಡುಕ, ಕ್ರಿಮಿನಲ್ ಗಳನ್ನು ಠಾಣೆಗೆ ಕರೆದುಕೊಂಡು ಬರಲು ಆಗುವುದಿಲ್ಲ. ಕಾಂಗ್ರೆಸ್ ನವರು ಈ ರಾಜ್ಯವನ್ನು ಎಷ್ಟೆಷ್ಟು ವರ್ಷ ಆಳುತ್ತಾರೆ ನಾನು ನೋಡುತ್ತೇನೆ. ಅವರು ಹೇಳಿದ ಹಾಗೆ ಕೇಳುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಐದು ಬಾರಿ ಗೆದ್ದವನು ನನಗೆ ಗೊತ್ತಿದೆ. ನಾನು ಪ್ರತಿಭಟನೆ ಮಾಡಿಕೊಂಡೆ ಬಂದವನು, ಜನರು ನನಗೆ ಹತ್ತಿರ ಆಗಿದ್ದೆ ಅಥವಾ ನನ್ನ ಗೆಲ್ಲಿಸಿದ್ದೆ ಈ ಕಾರಣದಿಂದ, ಯಾರೋ ಹೇಳಿದ್ರು ಎಂದು ತೆರವು ಮಾಡುವುದು, ಅವರನ್ನು ಬೆದರಿಸುವ ಕೆಲಸ ಯಾವುದೇ ಅಧಿಕಾರಿಗಳು ಮಾಡಿದರು ನಾನು ಸುಮ್ಮನೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ಸಾಲೆ ಕೊಪ್ಪ ರಾಮಚಂದ್ರ, ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್, ರಕ್ಷಿತ್ ಮೇಗರವಳ್ಳಿ, ಜ್ಯೋತಿ ಮೋಹನ್, ಪೂರ್ಣೇಶ್ ಪೂಜಾರಿ, ಗಂಗಾಧರ್ ತಲವಡಕ, ಪ್ರಮೋದ್ ಪೂಜಾರಿ, ನಂದನ್ ಹಸಿರು ಮನೆ, ಅಶೋಕ್ ಮುರ್ತಿ, ಯಶಸ್ವಿ ಕಡ್ತೂರು, ಮುರುಳಿ ನಾಂಬಳ, ಚಂದುವಳ್ಳಿ ಸೋಮಶೇಖರ್, ಜ್ಯೋತಿ ದಿಲೀಪ್, ಅಣ್ಣಪ್ಪ ಮೇಲಿನ ಕುರುವಳ್ಳಿ, ವಿನುತ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.













