11:49 AM Friday2 - January 2026
ಬ್ರೇಕಿಂಗ್ ನ್ಯೂಸ್
6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಮಾರಣಾಂತಿಕ ಹಲ್ಲೆಗೊಳದ ವ್ಯಕ್ತಿ ಸಾವು ಪ್ರಕರಣ: 5 ಮಂದಿ ಪೊಲೀಸ್ ವಶಕ್ಕೆ; ಅನೈತಿಕ ಸಂಬಂಧ ಹತ್ಯೆಗೆ ಕಾರಣ?

02/01/2026, 10:58

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಪೊನ್ನoಪೇಟೆ ತಾಲೂಕು ಹಾತೂರು ಕುದ್ದಾರಸ್ತೆಯಲ್ಲಿ ಮರಣಾಂತಿಕ ಹಲ್ಲೆಯಲ್ಲಿ ಮೃತಪಟ್ಟ ಡ್ರೈವರ್ ನವಾಜ್ ಎಂಬುವನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋಣಿಕೊಪ್ಪಲು ಪೊಲೀಸರು ನಾಲ್ಕರಿಂದ ಐದು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಹಾತುರು ಕುಂದ ರಸ್ತೆಯಲ್ಲಿರುವ ಕಾಫಿ ಕ್ಯೂರಿಂಗ್ ಘಟಕದ ಲಾರಿ ಡ್ರೈವರ್ ರವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೃತಪಟ್ಟ ನವಾಜ್ ಗೆ ಇವನು ಸಹೋದ್ಯೋಗಿ ಡ್ರೈವರ್ ರವರ ಪತ್ನಿಯೊಂದಿಗೆ ಸಂಬಂಧವಿರೋ ಬಗೆ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಈ ಸಂಬಂಧ ಕಲಹ ಏರ್ಪಟ್ಟು ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿತ್ತು. ಆದರೆ ನವಾಜ್ ತನ್ನ ಚಾಳಿಯನ್ನು ಮುಂದುವರಿಸಿದ್ದು ಡಿಸೆಂಬರ್ 31ರ ರಾತ್ರಿ ಕುಶಾಲನಗರದ ಮೂಲದ ಪ್ರಸ್ತುತ ಕಾಫಿ ಕ್ಯೂರಿಂಗ್ ವರ್ಕ್‌ ಆವರಣದಲ್ಲಿ ವಾಸಿವಿರುವ ಡ್ರೈವರ್ ಪೂರ್ಣಚಂದ್ರ ತೇಜಸ್ವಿ ಹಾಗೂ ಇತರರು ನವಾಜ್ ಕಾರಿನಲ್ಲಿ ಆಗಮಿಸಿದಾಗ ಆತನನ್ನು ಸೆರೆ ಹಿಡಿದು ರಾಡುಗಳಲ್ಲಿ ಆತನನ್ನು ಥಳಿಸಿ ರಸ್ತೆ ಸಮೀಪ ಬಿಟ್ಟು ಹೋಗಿದ್ದರು ಎಂದು ಆರೋಪಿಸಲಾಗಿದೆ. ನಂತರ ಪೊಲೀಸರಿಗೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಆತನನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿದಾಗ ಕೆಲವೇ ಕ್ಷಣಗಳಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.


ಘಟನೆ ಸಂಬಂಧ ಗೋಣಿಕೊಪ್ಪಲು ಪೊಲೀಸರು ಇದೀಗ ಐವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳೆಲ್ಲರೂ ಪೂರ್ಣಚಂದ್ರ ತೇಜಸ್ವಿ ಡ್ರೈವರ್ ಹಾಗೂ ಆತನ ಸ್ನೇಹಿತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಮೃತಪಟ್ಟ ನವಾಜ್ ಅನೈತಿಕ ಚಟುವಟಿಕೆಯಲ್ಲಿ ಹಲವು ವರ್ಷಗಳಿಂದ ತೊಡಗಿ ಕೊಂಡಿದ್ದು, ಪೊಲೀಸ್ ಠಾಣೆಯಲ್ಲಿ ಇವನ ವಿರುದ್ಧ ಹಲವು ದೂರುಗಳು ಕೂಡ ಬಂದಿತ್ತು, ಕೆಲವೊಂದು ದೂರುಗಳಲ್ಲಿ ಈತನನ್ನು ಕರೆಸಿ ಇತ್ಯರ್ಥ ಕೂಡ ಮಾಡಿಸಲಾಗಿತ್ತು. ಈತ ಇದೇ ರೀತಿಯ ಚಾಳಿ ಮುಂದುವರಿಸಿ ಇದೀಗ ಹತ್ಯೆಗಿಡಾಗಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಯಾವುದೇ ರೀತಿಯ ಪೂರ್ವಗ್ರಹ ಅಥವಾ ರಾಜಕೀಯ ಧರ್ಮ ಲೇಪಿತವಾಗದಿದ್ದರೂ, ಎಸ್‍.ಡಿ.ಪಿ.ಐ ಘಟಕದ ವ್ಯಕ್ತಿ ಒಬ್ಬರು ನೀಡಿರುವ ಹೇಳಿಕೆ ಇದೀಗ ಗೊಂದಲ ಹಾಗೂ ಸಂಶಯಕ್ಕೆ ಎಡೆಮಾಡಿದೆ.
ಅನೈತಿಕ ಸಂಬಂಧದ ಚಾಳಿಯಿಂದ ಈತ ಮೃತಪಟ್ಟಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪೊಲೀಸರ ಸಮಗ್ರ ತನಿಖೆಯಿಂದ ಸತ್ಯ ಸತ್ಯತೆ ಹೊರಬೀಳಬೇಕಾಗಿದೆ.
ಮೃತಪಟ್ಟ ನವಾಜ್ ಗೋಣಿಕೊಪ್ಪಲಿನ ಖಾಸಗಿ ಸಂಸ್ಥೆಯಲ್ಲಿ ಡ್ರೈವರ್ ಆಗಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದನು. ಉಳಿದ ಸಮಯದಲ್ಲಿ ತನ್ನ ಸ್ವಂತ ಆಟೋ ಓಡಿಸುತ್ತಿದ್ದನು. ಆದರೆ ಈತ ಯಾವುದೇ ಆಟೋ ಡ್ರೈವರ್ ಹಾಗೂ ಮಾಲೀಕರ ಸಂಘ ಸಂಸ್ಥೆಗಳಲ್ಲಿ ಸದಸ್ಯನಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು