ಇತ್ತೀಚಿನ ಸುದ್ದಿ
Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ ಬಂಧನ
01/01/2026, 10:45
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸೋಮವಾರಪೇಟೆ ಮೀಸಲು ಅರಣ್ಯಕ್ಕೆ ಒಳಪಡುವ ಬಾಣಾವರ ಸಮೀಪದ ನಿಡ್ತಾ ರೇಂಜ್ ನಲ್ಲಿ ವನ್ಯಜೀವಿ ಬೇಟೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಡೂರು ಗ್ರಾಮದ ಭಾನುಪ್ರಕಾಶ್, ಚಿನ್ನಪ್ಪ ಮತ್ತು ಭರತ್ ಬಂಧಿತರಗಿದ್ದು, ಬಂಧಿತರಿಂದ ಮೂರು ಕೋವಿ, 13 ಕಾಡ ತೋಸು,ಹೆಡ್ ಟಾರ್ಚ್ ಮತ್ತು ಒಂದು ವಾಹನವನ್ನು ವಶಕ್ಕೆ ಪಡೆಯಲಾಗಿದೆ.












