7:04 PM Wednesday31 - December 2025
ಬ್ರೇಕಿಂಗ್ ನ್ಯೂಸ್
ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:…

ಇತ್ತೀಚಿನ ಸುದ್ದಿ

ಬೀದಿ ನಾಯಿಗಳಿಗೆ ಶೆಲ್ಟರ್: ದ.ಕ. ಜಿಲ್ಲಾ ಪ್ರಾಣಿ ದಯಾ ಸಂಘದಿಂದ ಜ.4ರಂದು ಪ್ರತಿಭಟನೆ

31/12/2025, 17:58

ಮಂಗಳೂರು(reporterkarnataka.com): ಬೀದಿ ನಾಯಿಗಳನ್ನು ಶೆಲ್ಟರ್ ಮಾಡುವಂತೆ ಆದೇಶ ಹೊರಡಿಸಿರುವ ಬೆನ್ನಲ್ಲಿಯೇ ಪ್ರಾಣಿ ಪ್ರೇಮಿಗಳು ರಾಜ್ಯಾಧ್ಯಂತ ಜ.4ರಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮುಷ್ಕರ ನಡೆಸಲಿದ್ದು, ದ.ಕ. ಜಿಲ್ಲಾ ಪ್ರಾಣಿ ದಯಾ ಸಂಘದ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎನಿಮಲ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ನ್ಯಾಯವಾದಿ ಸುಮಾ ನಾಯಕ್ ಹೇಳಿದರು.


ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಸರಿಯಾದ ಎಬಿಸಿ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, 2006 ರಿಂದ ಬೀದಿ ನಾಯಿಗಳಿಗೆ ಪರಿಣಾಮಕಾರಿಯಾಗಿ ಸಂತಾನಹರಣ ಚಿಕಿತ್ಸೆ ನೀಡುತ್ತಿದೆ. ಮಾತ್ರವಲ್ಲ 500 ಜನರು ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ. ಕಳೆದ 20 ವರ್ಷದಿಂದ ಸರ್ಕಾರಕ್ಕೆ ಎಬಿಸಿಯನ್ನು ಸ್ಥಾಪಿಸಲು ಹೇಳಿದಾಗ ಹಣ ಇಲ್ಲದಿರುವುದು ನಾಯಿಗಳನ್ನು ಶೆಲ್ಟರ್ ಮಾಡಲು ಮಾತ್ರ ಹಣವಿದಿಯೇ ಎಂದು ಪ್ರಶ್ನಿಸಿದರು.
ಸುಪ್ರಿಂಕೋರ್ಟ್ ಏಕಾಏಕಿ ಆದೇಶವನ್ನು ಹೊರಡಿಸಿದ್ದು, ಎಡಬ್ಲೂಬಿಐನ ಎಸ್‌ಒಪಿಯಲ್ಲಿರುವ ಅನೇಕ ಅಂಶಗಳು ಇರುವುದಿಲ್ಲ. ಎಸ್‌ಒಪಿಯಲ್ಲಿ ಹೆದ್ದಾರಿಯಲ್ಲಿ ಇರುವ ಜಾನುವಾರುಗಳನ್ನೂ ಒಂದು ಗೂಡಿನಲ್ಲಿ ಇರಿಸಬೇಕು ಎಂದು ಇದೆ. ಆದರೆ ಸುಪ್ರಿಂ ಕೋರ್ಟ್ ಇದನ್ನು ಬಿಟ್ಟು ಕೇವಲ ನಾಯಿಗಳನ್ನು ಮಾತ್ರ ಗೂಡಿನಲ್ಲಿ ಗೂರಿಸಲು ಹೊರಟಿದ್ದಾರೆ. ನಾಯಿಗಳು ಭಾವನಾತ್ಮಕವಾಗಿ ಮನುಷ್ಯರೊಂದಿಗೆ ಬೆರೆಯುತ್ತವೆ. ಅವುಗಳನ್ನು ದಿನವಿಡಿ ಗೂಡಿನಲ್ಲಿ ಕೂರಿಸಿದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತವೆ ಎಂದರು.
ಸುಪ್ರಿಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕೇಸನ್ನು ತೆಗೆದುಕೊಂಡು ನ.7ರಂದು ಆದೇಶ ಹೊರಡಿಸಿದ್ದು, ನಾವು ನಮ್ಮ ವಾದವನ್ನು ಆಲಿಸುವಂತೆ ಕೋರ್ಟ್‌ಗೆ 2 ಲಕ್ಷ ಹಣವನ್ನು ಕಟ್ಟಿ ಅವಕಾಶ ಮಾಡಿಕೊಡಲು ಕೇಳಿದಾಗ ಕೋರ್ಟ್ ರಜೆಯ ಕೊನೆಯ ದಿನ ಡಿ.31ಕ್ಕೆ ನಿಗದಿಯಾಗಿದ್ದು, ಅದನ್ನು ಏಕಾಏಕಿ ಜ. 7ಕ್ಕೆ ಮುಂದೂಡಲಾಗಿದ್ದು, ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಆದುದರಿಂದ ನಾವು ಈ ಪ್ರತಿಭಟನೆಯ ಮೂಲಕ ಸುಪ್ರಿಂಕೋರ್ಟ್‌ಗೆ ನಮ್ಮ ವಾದ ಕೇಳಲಿ ಎಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾವು ಈಗಗಲೇ ಸ್ಥಳೀಯ ಆಡಳಿತ ಜತೆ ಮಾತನಾಡಿದ್ದು, ಮಂಗಳೂರಿನ ಮನಪಾದ ಪ್ರತೀ ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಆಹಾರ ನೀಡಲು ತಾಣಗಳನ್ನು ಗುರುತಿಸುವಂತೆ ಮನವಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸ್ಪಂದನೆ ಸಿಕ್ಕಿದೆ ಎಂದ ಅವರು, ನ್ಯಾಯಾಲಯ ಆದೇಶ ಮಾಡಿದರೆ ಸಾಕಾಗುವುದಿಲ್ಲ. ಸರ್ಕಾರವೂ ಸಂತಾನಹರಣಕ್ಕೆ ಕ್ರಮ ಹಾಗೂ ರೇಬೀಸ್ ಲಸಿಕೆಯನ್ನು ಸರಿಯಾದ ರೀತಿಯಲ್ಲಿ ನೀಡುವಂತೆ ಮಾಡಬೇಕು ಎಂದರು.
ಬೀದಿ ನಾಯಿಗಳಿಗೆ ಆಹಾರ ಹಾಕುವುದರಿಂದ ಅವುಗಳು ಸ್ನೇಹವನ್ನು ಹೊಂದುತ್ತವೆ. ಇದರಿಂದಾಗಿ ನಾಯಿಗಳ ಸಂತಾನಹರಣ ಹಾಗೂ ಲಸಿಕೆ ನೀಡಲು ಸುಲಭವಾಗುತ್ತದೆ. ಸರ್ಕಾರ ಬೀದಿ ನಾಯಿಗಳಿಂದ ರೇಬೀಸ್ ಬರುತ್ತಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬೀದಿ ನಾಯಿಗಳಿಂದ ಯಾವುದೇ ರೇಬೀಸ್ ಬರುತ್ತಿಲ್ಲ. ಬದಲಾಗಿ ಮನೆಯಲ್ಲಿ ಸಾಕಿದ ನಾಯಿಯಿಂದ ಬರುತ್ತಿದೆ. ಮಾತ್ರವಲ್ಲ. ಬೆಕ್ಕು, ಇಲಿ ಕಚ್ಚಿದರೂ ರೇಬೀಸ್ ಕಾಯಿಲೆ ಬರುತ್ತಿದೆ. ಆದರೆ ಎಲ್ಲವನ್ನೂ ನಾಯಿ ಕಡಿತದಿಂದ ಬರುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದಿನೇಶ್ ಪೈ, ಹರೀಶ್ ರಾಜಕುಮಾರ, ಡಾ.ಯಶಸ್ವೀ ನಾರಾವಿ, ರಜನಿ ಶೆಟ್ಟಿ, ಡಾ. ಶೃತಿ, ಚಾಲ್ಸ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು