ಇತ್ತೀಚಿನ ಸುದ್ದಿ
ದಾವಣಗೆರೆ: ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿಗೆ ಮಾಧ್ಯಮ ಕಾಯಕ ರತ್ನ ಪ್ರಶಸ್ತಿ ಪ್ರದಾನ
29/12/2025, 19:25
ದಾವಣಗೆರೆ(reporterkarnataka.com): ಪ್ರಜಾ ಪವರ್ ಟಿವಿ ವಾಹಿನಿಯ ವರದಿಗಾರ
ವಿರೂಪಾಕ್ಷಯ್ಯ ಸ್ವಾಮಿ ಸಾರಲಿಮಠ ಅಂತರಗಂಗೆ ಅವರಿಗೆ ಮಾಧ್ಯಮ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಾವಣಗೆರೆಯಲ್ಲಿ ವಿದ್ಯಾ ನಗರದ ಕನ್ನಡ ಕುವೆಂಪು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.



ವಿಶ್ವಧರ್ಮ ಭಾವೈಕ್ಯತೆ ಆರನೇ ಸಮ್ಮೇಳನ ಭವ್ಯ ಶರಣರ ದಿವ್ಯ ಸಾನಿಧ್ಯದಲ್ಲಿ ವಿಶ್ವದರ್ಶನ ಫೌಂಡೇಶನ್ ಅಧ್ಯಕ್ಷ ಡಾ. ಎಸ್. ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಅವರಿಗೆ ಮಾಧ್ಯಮ ರಾಷ್ಟ್ರೀಯ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಠಾಧೀಶರು ಮಾತನಾಡಿ ಸಮಾಜದಲ್ಲಿ ಪತ್ರಿಕಾರಂಗಕ್ಕೆ ದೊಡ್ಡ ಗೌರವವಿದೆ. ಅದನ್ನು ನಾವೆಲ್ಲರೂ ಕಾಪಾಡಿಕೊಂಡು ಹೋಗಬೇಕು. ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಎಂದು ದೊಡ್ಡ ಕಾರ್ಯ ಮಾಡುತ್ತಿರುವುದು ಸಂತೋಷದ ವಿಷಯ ಎಂದರು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ಮಂಜುನಾಥ್ ಮಾಡ್ಯಾಳ, ನಾಡಿನ ಮಠಾಧೀಶರು ಇನ್ನೂ ಅನೇಕ ಶರಣರು ಭಾಗವಹಿಸಿ ಪ್ರತಿಭಾ ಪುರಸ್ಕಾರ ಮಾಡಿ ಶುಭ ಹಾರೈಸಿದರು.












