ಇತ್ತೀಚಿನ ಸುದ್ದಿ
ತುಳುನಾಡಿನ ಅಸ್ಮಿತೆ ಕಂಬಳಕ್ಕೆ ಧನಸಹಾಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ
27/12/2025, 22:45
ಮಂಗಳೂರು(reporterkarnataka.com): ಕಂಬಳ ಎಂಬುದು ಒಂದು ಗ್ರಾಮೀಣ ಕ್ರೀಡೆಯಲ್ಲ; ಕಂಬಳ ಎಂಬುದು ತುಳುನಾಡಿನ ಅಸ್ಮಿತೆ. ಜಾನಪದ ಕ್ರೀಡೆ ಎನಿಸಿದ ಕಂಬಳವು ರಾಜ್ಯದ ಯಾವುದೇ ಭಾಗದಲ್ಲಿ ನಡೆದರೂ ಅದಕ್ಕೆ ಧನಸಹಾಯವನ್ನು ಸರಕಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ ಸಿಟಿಯಲ್ಲಿ ಆಯೋಜಿಸಿದ 9ನೇ ವರ್ಷದ ಮಂಗಳೂರು ಕಂಬಳದಲ್ಲಿ ಅವರು ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕರಾವಳಿಯಲ್ಲಿ ಎಲ್ಲೇ ಕಂಬಳ ನಡೆದರೂ 5 ಲಕ್ಷ ಸಹಾಯಧನ ಕೊಡುವ ಪುಣ್ಯದ ಕೆಲಸ ಮಾಡಿದ್ದರು. ಕರಾವಳಿ ಬಗ್ಗೆ ಅವರಿಗೆ ವಿಶೇಷ ಮಮತೆ ಇತ್ತು ಎಂದು ತಿಳಿಸಿದರು.
ಇವತ್ತಿನ ರಾಜಕೀಯ ವ್ಯವಸ್ಥೆಯಡಿ ಕಂಬಳಕ್ಕೆ ಕೂಡ ರಾಜಕೀಯವನ್ನು ಥಳಕು ಹಾಕುತ್ತಿರುವುದು ದುರ್ದೈವ ಎಂದು ಹೇಳಿದರು.
ಕಂಬಳಕ್ಕೆ ಪ್ರೀತಿಯಿಂದ ಕರೆದು ಪ್ರಕಾಶ್ ಶೆಟ್ಟಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಶಾಸಕ ಮಿತ್ರರು ನನಗೂ ನಾಲ್ಕು ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಕಂಬಳದ ಪ್ರಾಯೋಜಕರಿಗೆ ಧನ್ಯವಾದಗಳು ಮತ್ತು ಅಭಿನಂದನೆ ತಿಳಿಸುವುದಾಗಿ ಹೇಳಿದರು.



ಕರಾವಳಿ ಭಾಗದ ಎಲ್ಲ ತಂದೆ, ತಾಯಂದಿರು, ಯುವ ಮಿತ್ರರಿಗೆ ಶುಭಾಶಯ ಕೋರಿದರು. ಕಂಬಳವನ್ನು ತಾವೆಲ್ಲರೂ ಸಂತೋಷದಿಂದ ನೋಡಿ ಆನಂದಿಸಿ ಎಂದು ತಿಳಿಸಿದರು. ಸಾಧಕರನ್ನು ಕರೆಸಿ ಅವರಿಗೆ ಸನ್ಮಾನ ಮಾಡಿದ ಕುರಿತು ಸಂತಸ ವ್ಯಕ್ತಪಡಿಸಿದರು.
ಜನ್ಮ ನೀಡಿದ ತುಳುನಾಡಿಗೆ ವಾಪಸ್ ಅವರು ಕೊಡುಗೆ ನೀಡಬೇಕೆಂಬ ಸದುದ್ದೇಶ ಇದರ ಹಿಂದಿದೆ ಎಂದು ಅಭಿಪ್ರಾಯಪಟ್ಟರು.












