ಇತ್ತೀಚಿನ ಸುದ್ದಿ
ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ
27/12/2025, 09:24
ಮಂಗಳೂರು(reporterkarnataka com): ಕರಾವಳಿ ಡೇಟಾ ಸೆಂಟರ್ ಕೇಂದ್ರದಲ್ಲಿ 98.56% ವಿದ್ಯುಚ್ಛಕ್ತಿ ಬೆಂಬಲ ಹೊಂದಿದ್ದು, ಭಾರತದ ಅತ್ಯಂತ ವೆಚ್ಚ-ದಕ್ಷ ಕರಾವಳಿ ಡೇಟಾ ಸೆಂಟರ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಸಿಲಿಕಾನ್ ಬೀಚ್ ಪ್ರೋಗ್ರಾಂ (ಎಸ್‌ಬಿಪಿ), ಡೆಲಾಯ್ಟ್ ಇಂಡಿಯಾ ಜೊತೆಗಿನ ಪಾಲುದಾರಿಕೆಯಲ್ಲಿ ನಡೆಸಿದ ಮಂಗಳೂರು ಡೇಟಾ ಸೆಂಟರ್ ಫೀಸಿಬಿಲಿಟಿ ಸ್ಟಡಿ 2025 ಎಂಬ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.
ಅಧ್ಯಯನ ವರದಿಯು ಭೂಮಿ ವೆಚ್ಚ 5 ಪಟ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ ಮತ್ತು 1 ಜಿಡಬ್ಲ್ಯೂವರೆಗಿನ ಕರಾವಳಿ ಎಐ ಇನ್ ಫ್ರಾ ಸ್ಟ್ರಕ್ಚರ್ ಕ್ಲಸ್ಟರ್ ಗೆ ಸ್ಪಷ್ಟ ಮಾರ್ಗಸೂಚಿಯನ್ನು ತಿಳಿಸಿದೆ.
ಈ ಅಧ್ಯಯನವನ್ನು ಕ್ಲೌಡ್, ಎಐ ಮತ್ತು ಮಿಷನ್-ಕ್ರಿಟಿಕಲ್ ವರ್ಕ್‌ಲೋಡ್‌ಗಳಿಗಾಗಿ ಭಾರತದ ಡಿಜಿಟಲ್ ಕ್ಷೇತ್ರವನ್ನು ಬಲಪಡಿಸಲು ಮಂಗಳೂರಿನ ಪಾತ್ರವನ್ನು ಮೌಲ್ಯಮಾಪನ ಮಾಡಲು ನಡೆಸಿದ್ದು, ಇದೀಗ ವರದಿ ಬಿಡುಗಡೆಯಾಗಿದೆ.
ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಡೆಸಿರುವ ಈ ಅಧ್ಯಯನವು ಮಂಗಳೂರನ್ನು ಭಾರತದ ಅತ್ಯಂತ ವೆಚ್ಚ-ದಕ್ಷ ಮತ್ತು ವಿಸ್ತರಣೆ ಮಾಡಬಹುದಾದ ಕರಾವಳಿ ತಾಣಗಳಲ್ಲಿ ಒಂದೆಂದು ತಿಳಿಸಿದೆ. ಈ ಪ್ರದೇಶದಲ್ಲಿ ತಿಂಗಳಿಗೆ ಪ್ರತೀ ಚದರ ಅಡಿಗೆ ₹7.69 ರಷ್ಟು ಭೂಮಿ ಬಾಡಿಗೆಗೆ ದೊರೆಯುತ್ತದೆ. ಮುಂಬೈಗೆ ಹೋಲಿಸಿದರೆ ಇದು 4–5 ಪಟ್ಟು ಮತ್ತು ಚೆನ್ನೈಗೆ ಹೋಲಿಸಿದರೆ 95% ವರೆಗೆ ವೆಚ್ಚ ಉಳಿತಾಯ ಸಾದ್ಯವಾಗುತ್ತದೆ (ಜೋನ್ ಮತ್ತು ಅಸೆಟ್ ಕ್ಲಾಸ್ ಮೇಲೆ ಅವಲಂಬಿತವಾಗಿ). ಚೆನ್ನೈಯ ₹7.50 ಗೆ ಹೋಲಿಸಿದರೆ ₹5.95–6.60/ ಕೆಡಬ್ಲ್ಯೂಎಚ್ ರಷ್ಟು ವಿದ್ಯುತ್ ದರಗಳಿದ್ದು, ಹೆಚ್ಚಿನ ಪ್ರಯೋಜನ ಲಭ್ಯವಾಗಲಿದೆ.
ಈ ಮೂಲಭೂತ ಅಂಶಗಳ ಜೊತೆಗೆ ಹೆಚ್ಚಿನ ಗ್ರಿಡ್ ವಿಶ್ವಾಸಾರ್ಹತೆ ಮತ್ತು ಖಾತರಿಪಡಿಸಿದ ಕೈಗಾರಿಕಾ ನೀರಿನ ಲಭ್ಯತೆಯೂ ದೊರಕುತ್ತಿದ್ದು, ಇದರಿಂದ ಮುಂದಿನ ತಲೆಮಾರಿನ ಕಂಪ್ಯೂಟಿಂಗ್ ಮೂಲಸೌಕರ್ಯಕ್ಕೆ ಉತ್ತಮವಾದ ಮತ್ತು ವಿಸ್ತರಣೆಗೆ ಸಾಧ್ಯವಾದ ಅಡಿಪಾಯ ದೊರಕಲಿದೆ.
2030ರೊಳಗೆ 10–12 ಜಿಡಬ್ಲ್ಯೂ ರಾಷ್ಟ್ರೀಯ ಡೇಟಾ ಸೆಂಟರ್ ಸಾಮರ್ಥ್ಯ ಹೊಂದಲು ಭಾರತ ಮುಂದುವರಿಯುತ್ತಿರುವಂತೆ, ಈ ಅಧ್ಯಯನ ವರದಿಯು ಮಂಗಳೂರನ್ನು ಬೆಂಗಳೂರು-ನೇತೃತ್ವದ ಹಬ್-ಆಂಡ್-ಸ್ಪೋಕ್ ಆರ್ಕಿಟೆಕ್ಚರ್ ನಲ್ಲಿ ಪ್ರಮುಖ ಸ್ಥಾನದಲ್ಲಿ ಇರಿಸಿದೆ. ವಿಶೇಷವಾಗಿ ವಿಕೇಂದ್ರೀಕೃತ ಕಂಪ್ಯೂಟ್ ಮತ್ತು ಲೋ-ಲೇಟೆನ್ಸಿ ವರ್ಕ್‌ಲೋಡ್‌ಗಳನ್ನು ಸಾಧ್ಯವಾಗಿಸುವುದ ಜೊತೆಗೆ ಈ ಪ್ರದೇಶವು ಪ್ರಕೃತಿವಿಕೋಪದಿಂದ ಚೇತರಿಸಿಕೊಳ್ಳುವ ಮತ್ತು ನಿರಂತರ ವ್ಯಾಪಾರ ಮಾಡಬಹುದಾದ ಸಾಮರ್ಥ್ಯ ಹೊಂದಿದೆ.
ಈ ಕುರಿತು ಮಾತನಾಡಿರುವ ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಅವರು, “ಮೂಲಸೌಕರ್ಯವು ಡಿಜಿಟಲ್ ಕ್ಷೇತ್ರದ ಬೆನ್ನೆಲುಬಾಗಿದೆ. ಈ ಅಧ್ಯಯನ ವರದಿಯು ಮಂಗಳೂರು ಭಾರತದ ಮುಂದಿನ ದಶಕದ ಎಐ ಮತ್ತು ಕ್ಲೌಡ್-ನೇತೃತ್ವದ ಬೆಳವಣಿಗೆಗೆ ಬೆಂಬಲಿಸುವ ಉತ್ತಮ ಸಾಮರ್ಥ್ಯ, ನಿಯಂತ್ರಣ ಮತ್ತು ಕಡಿಮೆ ವೆಚ್ಚದ ಪ್ರಯೋಜನವನ್ನು ಒದಗಿಸುತ್ತದೆ ಎಂಬುದನ್ನು ದೃಢಪಡಿಸುತ್ತದೆ. ಉದ್ಯಮ-ಪ್ರಮುಖ ಆರ್ಥಿಕತೆ, ದೃಢವಾದ ಗ್ರಿಡ್ ಮತ್ತು ಅತ್ಯುತ್ತಮ ಪ್ರತಿಭಾ ಸಂಪನ್ಮೂಲ ಹೊಂದಿರುವ ಮಂಗಳೂರು ಮಿಷನ್-ಕ್ರಿಟಿಕಲ್ ವರ್ಕ್‌ಲೋಡ್‌ಗಳನ್ನು ನಿಭಾಯಿಸಲು ಸಿದ್ಧವಾಗಿದೆ, ಭಾರತದ ಡಿಜಿಟಲ್ ನರಮಂಡಲ ಎಂಬ ಸ್ಥಾನ ಎಂಬ ಹೆಸರಾಗಿರುವ ಬೆಂಗಳೂರಿನ ನಂತರ ನಿಲ್ಲಲಿದೆ” ಎಂದರು.
ಕೆಡಿಇಎಂ ಮತ್ತು ಸಿಲಿಕಾನ್ ಬೀಚ್ ಪ್ರೋಗ್ರಾಂ (ಎಸ್‌ಬಿಪಿ) ನ ಸ್ಥಾಪಕ ಸದಸ್ಯ ಹಾಗೂ ಮಂಗಳೂರು ಕ್ಲಸ್ಟರ್‌ನ ಪ್ರಮುಖ ಉದ್ಯಮಪತಿ ಆಗಿರುವ ರೋಹಿತ್ ಭಟ್ ಅವರು, “ಮಂಗಳೂರು ಕರಾವಳಿ ಭೌಗೋಳಿಕತೆಯಿಂದ ಹಿಡಿದು ಗ್ರಿಡ್ ಸ್ಥಿರತೆ, ಪ್ರತಿಭಾ ಸಂಪನ್ಮೂಲ ಮತ್ತು ಬಹುಮಾದರಿ ಸಂಪರ್ಕದವರೆಗೆ ಅದ್ಭುತ ಸಾಮರ್ಥ್ಯದ, ಭವಿಷ್ಯ-ಸಿದ್ಧ ಡೇಟಾ ಸೆಂಟರ್ ಸ್ಥಾಪನೆಗೆ ಅಗತ್ಯವಾದ ಎಲ್ಲಾ ಮೂಲಭೂತ ಅಂಶಗಳನ್ನು ಹೊಂದಿದೆ. ಕೆಡಿಇಎಂನ ನಾಯಕತ್ವ, ಸಿಲಿಕಾನ್ ಬೀಚ್ ಪ್ರೋಗ್ರಾಂನ ಪರಿಸರ ಅಭಿವೃದ್ಧಿ ಮತ್ತು ಡೆಲಾಯ್ಟ್ ನ ಒಳನೋಟಗಳೊಂದಿಗೆ ಸಿದ್ಧಗೊಂಡಿರುವ ಈ ಅಧ್ಯಯನ ವರದಿಯು 1 ಜಿಡಬ್ಲ್ಯೂ ಸುಸ್ಥಿರ, ಎಐ-ಸಿದ್ಧ ಡೇಟಾ ಸೆಂಟರ್ ಸ್ಥಾಪನೆಗೆ ಅನುವು ಮಾಡಿಕೊಡುವ ಮಾರ್ಗಸೂಚಿಯನ್ನು ಒದಗಿಸುತ್ತದೆ. ಇದು ಕರ್ನಾಟಕದ ಬಿಯಾಂಡ್ ಬೆಂಗಳೂರು ಅಭಿವೃದ್ಧಿ ಕಥನದ ಜೊತೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಮತ್ತು ರಾಜ್ಯಾದ್ಯಂತ ಭವಿಷ್ಯ-ಸಿದ್ಧ ತಂತ್ರಜ್ಞಾನ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಪೂರಕವಾಗಿ ಮೂಡಿಬಂದಿದೆ” ಎಂದರು.
ಕೆಡಿಇಎಂ-ಎಸ್‌ಬಿಪಿ-ಡೆಲಾಯ್ಟ್ ಅಧ್ಯಯನದ ಮುಖ್ಯ ಫಲಿತಾಂಶಗಳು
ಹೂಡಿಕೆದಾರರ ಮೇಲಿನ ಪರಿಣಾಮ ಹೂಡಿಕೆದಾರರು ಮತ್ತು ಆಪರೇಟರ್‌ಗಳಿಗೆ, ಈ ಪ್ರದೇಶವು ಒಟ್ಟು ಒಡೆತನ ವೆಚ್ಚವನ್ನು (ಟಿಸಿಓ) ಗಣನೀಯವಾಗಿ ಕಡಿಮೆ ಮಾಡುತ್ತವೆ. ಬ್ರೇಕ್‌ಈವನ್ ಸಮಯವನ್ನು ಬಹಳ ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲೀನ ಹೂಡಿಕೆ ರಿಟರ್ನ್ ಗೆ ಉತ್ತಮ ನೆರವು ಒದಗಿಸುತ್ತದೆ. ಜೊತೆಗೆ ವಿಶೇಷವಾಗಿ ದೊಡ್ಡ-ಪ್ರಮಾಣದ, ಎಐ-ಪ್ರಧಾನ ಡೇಟಾ ಸೆಂಟರ್ ನಿಯೋಜನೆಗಳಿಗೆ ಅನುವು ಮಾಡಿಕೊಡುತ್ತದೆ.
ಪ್ರಮಾಣ ಮತ್ತು ಸಾರ್ವಭೌಮತ್ವಕ್ಕೆ ನೆರವಾಗುವ ಕಡಿಮೆ ವೆಚ್ಚ
ಅಧ್ಯಯನ ವರದಿಯಲ್ಲಿ ವಿವರಿಸಿದಂತೆ, ಇಲ್ಲಿ ಭೂಮಿ ಬಾಡಿಗೆ ತಿಂಗಳಿಗೆ ಪ್ರತೀ ಚದರ ಅಡಿಗೆ ₹7.69 ರಷ್ಟಿದ್ದು, ಬಹಳ ಕಡಿಮೆ ವೆಚ್ಚ ಇದೆ ಮತ್ತು ಪ್ರತೀ ಕೆಡಬ್ಲ್ಯೂಎಚ್ ಗೆ ₹5.95–6.60 ನಷ್ಟು ವಿದ್ಯುತ್ ದರಗಳಿದ್ದು ಗಣನೀಯವಾಗಿ ಒಟ್ಟು ಒಡೆತನ ವೆಚ್ಚವನ್ನು (ಟಿಸಿಓ) ಕಡಿಮೆ ಮಾಡುತ್ತವೆ. ಇದರಿಂದ ಆಪರೇಟರ್‌ಗಳು ವೇಗವಾಗಿ ಬ್ರೇಕ್‌ಈವನ್ ಸಾಧಿಸಲು ಮತ್ತು ಮೆಟ್ರೋ-ಭಾರೀ ನಿಯೋಜನೆಗಳಿಗೆ ಹೋಲಿಸಿದರೆ ಹೆಚ್ಚಿನ ದೀರ್ಘಕಾಲೀನ ರಿಟರ್ನ್‌ಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.
•ತಿಂಗಳಿಗೆ ₹7.69/ಚದರ ಅಡಿ ಭೂಮಿಯ ಬಾಡಿಗೆ, ಮುಂಬೈಗೆ ಹೋಲಿಸಿದರೆ 4–5 ಪಟ್ಟು ಕಡಿಮೆ ಇದೆ ಮತ್ತು ಚೆನ್ನೈಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆ ಭೂಮಿ ವೆಚ್ಚ (ಜೋನ್ ಮತ್ತು ಅಸೆಟ್ ಕ್ಲಾಸ್ ಮೇಲೆ ಅವಲಂಬಿತ) ಹೊಂದಿದೆ.
•₹5.95–6.60/ ಕೆಡಬ್ಲ್ಯೂಎಚ್ ವಿದ್ಯುತ್ ದರಗಳು, ಜಿಪಿಯು-ಭಾರೀ ಎಐ ವರ್ಕ್‌ಲೋಡ್‌ಗಳು ಮತ್ತು ನಿಯಂತ್ರಿತ ಉದ್ಯಮಗಳಿಗೆ ವೆಚ್ಚ-ದಕ್ಷ ವಿಸ್ತರಣೆಗೆ ಬೆಂಬಲ ಒದಗಿಸುತ್ತದೆ.
•ಕರ್ನಾಟಕ ಭಾರತದ ಒಟ್ಟು ಡೇಟಾ ಸೆಂಟರ್ ಸಾಮರ್ಥ್ಯದ ಸುಮಾರು 8% ಅನ್ನು ಕೊಡುಗೆಯಾಗಿ ನೀಡುತ್ತಿದ್ದು, ಈ ಅಧ್ಯಯನವು ಮಂಗಳೂರನ್ನು ರಾಜ್ಯದ ವಿಕೇಂದ್ರೀಕೃತ, ಬೆಂಗಳೂರು-ನೇತೃತ್ವದ ಹಬ್-ಆಂಡ್-ಸ್ಪೋಕ್ ಮೂಲಸೌಕರ್ಯ ಮಾದರಿಯನ್ನು ಬೆಂಬಲಿಸುವ ಉತ್ಕೃಷ್ಟ ಕರಾವಳಿ ಕೇಂದ್ರ ಎಂದು ಸೂಚಿಸಿದೆ.
ಸಾರಿಗೆ, ಎಐ ವರ್ಕ್‌ಲೋಡ್‌ಗಳು ಮತ್ತು ಬಿಎಫ್ಎಸ್ಐ ಡಿಜಿಟಲೈಸೇಶನ್ ಆಧರಿತ ಬೇಡಿಕೆ
ಈ ಸೂಚಕಗಳು ಡಿಜಿಟಲ್ ಬಳಕೆಯ ರಚನಾತ್ಮಕ ಬೆಳವಣಿಗೆ, ನಿಯಂತ್ರಿತ ಹಣಕಾಸು ಸೇವೆಗಳು ಮತ್ತು ಎಐ-ನೇತೃತ್ವದ ಎಂಟರ್‌ಪ್ರೈಸ್ ವರ್ಕ್‌ಲೋಡ್‌ಗಳಿಂದ ಚಾಲಿತವಾದ ವಿಕೇಂದ್ರೀಕೃತ ಕಂಪ್ಯೂಟ್ ಮೂಲಸೌಕರ್ಯಕ್ಕೆ ಇರುವ ನಿರಂತರವಾದ ಬೇಡಿಕೆಯನ್ನು ಸೂಚಿಸುತ್ತವೆ.
•ದಕ್ಷಿಣ ಭಾರತ 2030 ರೊಳಗೆ 31.4 ಕೋಟಿ ಮೊಬೈಲ್ ಚಂದಾದಾರರನ್ನು ತಲುಪುವ ನಿರೀಕ್ಷೆಯಿದ್ದು, ಲೇಟೆನ್ಸಿ-ಸೆನ್ಸಿಟಿವ್ ಡಿಜಿಟಲ್ ಸೇವೆಗಳಿಗೆ ಆಧಾರ ವಿಸ್ತರಣೆ ಹೊಂದಲಿದೆ.
•ತಿಂಗಳ ಡೇಟಾ ಬಳಕೆಯು ಸುಮಾರು ದ್ವಿಗುಣಗೊಂಡು 14,889 ಪಿಬಿಗೆ ಏರುವ ನಿರೀಕ್ಷೆ ಇದ್ದು, ವಿಕೇಂದ್ರೀಕೃತ ಡೇಟಾ ಪ್ರೊಸೆಸಿಂಗ್ ಮತ್ತು ಎಡ್ಜ್ ಸಾಮರ್ಥ್ಯಕ್ಕೆ ಬೇಡಿಕೆ ಹೆಚ್ಚಾಗಲಿದೆ.
•ಬಿಎಫ್ಎಸ್ಐ, ರಿಜಿಸ್ಟರ್ ಟೆಕ್ ಮತ್ತು ಫಿನ್ ಟೆಕ್ ವಿಭಾಗದಾದ್ಯಂತ ನ್ಯಾನೋ-ಜಿಸಿಸಿ ಬೆಳವಣಿಗೆಯಿಂದ ಆಧರಿತವಾದ $240 ಮಿಲಿಯನ್ ಜಿಸಿಸಿ ಸ್ವಾಧೀನಗಳು, ದೀರ್ಘಬಾಳಿಕೆಯ ಎಂಟರ್‌ಪ್ರೈಸ್-ನೇತೃತ್ವದ ಕಂಪ್ಯೂಟ್ ಬೇಡಿಕೆಯನ್ನು ಸೂಚಿಸುತ್ತವೆ.
•ಮಂಗಳೂರು ಭಾರತದ ಟಾಪ್ ಎಂಟು ಉದಯೋನ್ಮುಖ ಜಿಸಿಸಿ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದ್ದು, ಪ್ರಾದೇಶಿಕ ಮತ್ತು ಮಿಷನ್-ಕ್ರಿಟಿಕಲ್ ವರ್ಕ್‌ಲೋಡ್‌ಗಳಿಗೆ ಸ್ಥಿರ ಬೇಡಿಕೆ ಕೇಂದ್ರವಾಗಿದೆ.
ಹೆಚ್ಚಿನ ಲಭ್ಯತೆ ಮತ್ತು ಕಡಿಮೆ ಅಪಾಯದ ಮೂಲಸೌಕರ್ಯ ವ್ಯವಸ್ಥೆಗಳು
•ನ್ಯೂ ಮಂಗಳೂರು ಪೋರ್ಟ್ ಬಳಿ 36 ಮಿಲಿಯನ್ ಚದರ ಅಡಿ ಭೂಮಿ ಲಭ್ಯ.
•ಬಳ್ಕುಂಜೆಯಲ್ಲಿ 1,000 ಎಕರೆ ಮತ್ತು ಎಂಎಸ್ಇಝಡ್ ನಲ್ಲಿ ₹50/ ಚದರ ಅಡಿ ಬಾಡಿಗೆಯಲ್ಲಿ 164 ಎಕರೆ ಹೈಪರ್‌ಸ್ಕೇಲ್-ಸಿದ್ಧ ಆಯ್ಕೆಗಳು ಲಭ್ಯ.
•ಸೀಸ್ಮಿಕ್ ಜೋನ್ III ಮತ್ತು 20–50 ಮೀ ಎತ್ತರವು ಹವಾಮಾನ ಮತ್ತು ಭೂಕಂಪ ಅಪಾಯವನ್ನು ಕಡಿಮೆ ಮಾಡುತ್ತದೆ.
•107 ಸಬ್‌ಸ್ಟೇಷನ್‌ಗಳು (66–400 ಕೆವಿ) ಮತ್ತು ಉತ್ತಮ ಸೌಕರ್ಯ ಲಭ್ಯ.
•ಕರ್ನಾಟಕ ಗ್ರಿಡ್‌ಗೆ ಸೇರಿಸಲಾಗುತ್ತಿರುವ 2,639 ಎಂಡಬ್ಲ್ಯೂ ನವೀಕರಿಸಲಾಗುವ ಶಕ್ತಿ ಪ್ರಯೋಜನ.
ದೀರ್ಘಕಾಲೀನ ಬೆಳವಣಿಗೆಗೆ ನೆರವಾಗುವ ಪ್ರತಿಭಾ ಸಂಪನ್ಮೂಲ ಮತ್ತು ಸಂಪರ್ಕ
•ಮಂಗಳೂರು–ಉಡುಪಿ ಬೆಲ್ಟ್ ನಲ್ಲಿ 25,000 ಐಟಿ ವೃತ್ತಿಪರರು.
•ಡೇಟಾ, ಕ್ಲೌಡ್ ಮತ್ತು ಎಂಜಿನಿಯರಿಂಗ್ ಹುದ್ದೆಗಳಿಗೆ ಪ್ರತೀ ವರ್ಷ 20,000+ ಸ್ಟೆಮ್ ಗ್ರಾಜುಯೇಟ್ ಗಳು.
•ವಿಮಾನ ನಿಲ್ದಾಣ ಟ್ರಾಫಿಕ್‌ನಲ್ಲಿ ವರ್ಷದಿಂದ ವರ್ಷಕ್ಕೆ 15.34% ಬೆಳವಣಿಗೆ ಇದ್ದು, ಎಂಟರ್‌ಪ್ರೈಸ್ ಮತ್ತು ನಿರಂತರ ಕಾರ್ಯಾಚರಣೆಯನ್ನು ಹೆಚ್ಚಿಸುತ್ತದೆ.
• ಪೋರ್ಟ್, ರಾಷ್ಟ್ರೀಯ ಹೆದ್ದಾರಿಗಳು ಮತ್ತು ವಾಯು ಮಾರ್ಗಗಳ ಮೂಲಕ ಬಹುಮಾದರಿ ಸಂಪರ್ಕ.
1 ಜಿಡಬ್ಲ್ಯೂ ಕರಾವಳಿ ಡೇಟಾ ಸೆಂಟರ್ ಕ್ಲಸ್ಟರ್ ನಿರ್ಮಿಸಲು ಶಿಫಾರಸು
ಅಲ್ಪಾವಧಿ (0–3 ವರ್ಷಗಳು)
•10–50 ಎಂಡಬ್ಲ್ಯೂ ಎಡ್ಜ್ ಡೇಟಾ ಸೆಂಟರ್‌ಗಳನ್ನು ಆಕರ್ಷಿಸಲಿದ್ದು; 4–5 ಆಪರೇಟರ್‌ಗಳಾದ್ಯಂತ ಸಂಚಿತ 200 ಎಂಡಬ್ಲ್ಯೂ ಲಭ್ಯ.
•ನೀತಿ ನೆರವು: 15% ಭೂಮಿ ಸಬ್ಸಿಡಿ (₹5 ಕೋಟಿ ಮಿತಿ), ಟೈರ್ಡ್ ಇನ್‌ಸೆಂಟಿವ್ ಸ್ಟ್ರಕ್ಚರ್ ಮೂಲಕ 20% ಬಂಡವಾಳ ಸಹಾಯ.
•ಕೇಬಲ್ ಲ್ಯಾಂಡಿಂಗ್ ಸ್ಟೇಷನ್ (ಸಿ ಎಲ್ ಎಸ್) ಗೆ ಫೀಸಿಬಿಲಿಟಿ ಮೌಲ್ಯಮಾಪನವನ್ನು ಪ್ರಾರಂಭಿಸಿದ್ದು, ಫೀಸಿಬಿಲಿಟಿ ಫಲಿತಾಂಶಗಳಿಗೆ ಒಳಪಟ್ಟು, ಜಾಗತಿಕ ರೌಟಿಂಗ್ ಪ್ರದರ್ಶನ ಮತ್ತು ಅಂತರರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ದೀರ್ಘಾವಧಿ (5–10 ವರ್ಷಗಳು)
•30–45 ದಿನಗಳಲ್ಲಿ ಅನುಮೋದನೆಗಳನ್ನು ಒದಗಿಸುವ ನೋಡಲ್ ಏಜೆನ್ಸಿಯನ್ನು ಸ್ಥಾಪಿಸಿ.
•ಪಾರದರ್ಶಕ ಹೂಡಿಕೆದಾರ ಅನುಕೂಲಕ್ಕಾಗಿ ಜಿಐಎಶ್-ಆಧಾರಿತ ಭೂಮಿ ಮತ್ತು ಯುಟಿಲಿಟಿ ಪೋರ್ಟಲ್ ನಿಯೋಜಿಸಿ.
•ಪ್ರಸ್ತಾಪಿತ ಸಿಎಲ್ಎಸ್ ಗೆ 25% ಕ್ಯಾಪೆಕ್ಸ್ ಬೆಂಬಲ (₹25 ಕೋಟಿ ಮಿತಿ) ಒದಗಿಸಿ.
•1 ಜಿಡಬ್ಲ್ಯೂ ಕರಾವಳಿ ಕ್ಲಸ್ಟರ್ ಕಡೆಗೆ ವಿಸ್ತರಣೆ, ರಾಷ್ಟ್ರೀಯ ಪ್ರಮಾಣದಲ್ಲಿ ಎಐ-ಯುಗದ ಮೂಲಸೌಕರ್ಯವನ್ನು ಒದಗಿಸಿ.
ಪೂರ್ಣ ಅಧ್ಯಯನವನ್ನು ಓದಲು: ಮಂಗಳೂರು ಡೇಟಾ ಸೆಂಟರ್ ಫೀಸಿಬಿಲಿಟಿ ಸ್ಟಡಿ 2025












