ಇತ್ತೀಚಿನ ಸುದ್ದಿ
ಹೊಸ ವರ್ಷಾಚರಣೆ | ಗೋವಾ ಮತ್ತು ಹೊರರಾಜ್ಯಗಳಿಂದ ತೆರಿಗೆ ರಹಿತ ಮಧ್ಯಗಳಿಗೆ ಅವಕಾಶ ನೀಡಬೇಡಿ: ಅಬಕಾರಿ ಉಪ ಅಧಿಕ್ಷಕ
26/12/2025, 11:10
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹೊಸವರ್ಷಾ ಚರಣೆ ಹಿನ್ನಲೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ ಗಳಿಗೆ ಪ್ರವಾಸಿಗರು ಹೆಚ್ಚಿಗೆ ಆಗಮಿಸುತ್ತಿದ್ದು ಮಧ್ಯ ಇತರೆ ಪಾರ್ಟಿಗಳನ್ನು ಆಯೋಜಿಸಿದರೆ ದೊಡ್ಡ ಮಟ್ಟದ ಡಿಜೆ ಬಳಸಿದಲ್ಲಿ ಸಿ.ಎಲ್.೫ ಪರವಾನಗೆಯನ್ನು ಖಡ್ಡಾಯವಾಗಿ ಹೊಂದಿರಬೇಕು. ಎಂದು ಅಬಕಾರಿ ಉಪ ಅಧಿಕ್ಷಕ ಕೀರ್ತಿಕುಮಾರ್ ಟಿ. ಹೇಳಿದ್ದಾರೆ.
ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಸವರ್ಷ ಆಚರಣೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್‌ನಲ್ಲಿ ಮದ್ಯದ ಪಾರ್ಟಿ ಆಯೋಜಿಸಿಕೊಂಡಲ್ಲಿ ಗೋವಾ ಮತ್ತು ಹೊರರಾಜ್ಯಗಳಿಂದ ತೆರಿಗೆ ರಹಿತ ಮದ್ಯಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.


ಆಕಸ್ಮಿಕವಾಗಿ ಅಲ್ಲಿಗೆ ಬಂದಾಗ ಅಂತಹ ಮದ್ಯಗಳು ಕಂಡು ಬಂದಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು. ಅದಕ್ಕೆ ಅವಕಾಶ ನೀಡದೆ ಕಾನೂನಿನ ನಿಯಮದ ರೀತಿಯಲ್ಲಿ ನಡೆದು ಕೊಳ್ಳುವಂತೆ ಮನವಿಗೊಂಡರು.
ಹೊಸ ವರ್ಷಾಚರಣೆ ಯಲ್ಲಿ ೧೦೦-೨೦೦ ಜನ ಡಿಜೆ ಪಾರ್ಟಿಗೆ ಸೇರಿದರೆ ಒಂದು ದಿನಕ್ಕೆ ೧೧೫೦೦ ರೂ ಕಟ್ಟಿದಲ್ಲಿ ಪರವಾನಗೆ ನೀಡುತ್ತೇವೆ. ಅದನ್ನು ಒಂದೆರಡು ದಿನ ಮುಂಚಿತವಾಗಿ ಪಡೆಯಬಹುದು ಎಂದರು. ಇತ್ತೀಚಿನ ದಿನಗಳಲ್ಲಿ ಗಾಂಜಾ ,ಅಫಿಮಿನಂತ ಮಾದಕ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅದನು ಸಂಪೂರ್ಣ ನಿರ್ಭಂಧಿಸುವಂತೆ ಪ್ರವಾಸಿಗರ ಕೈಉಲಿ ಅಂಥಹ ಮಾದಕ ವಸ್ತುಗಳು ಕಂಡು ಬಂದರೆ ನೀವು ಅವರುಗಳಿಗೆ ಏನು ಮಾಡಲು ಹೋಗಬೇಡಿ ಏಕೆಂದರೆ ಅವರು ನಿಮಗೆ ಅಪಾಯ ಮಾಡುವ ಸಾಧ್ಯತೆಗಳೆ ಅಧಿಕವಾಗಿರುತ್ತದೆ. ನಮ್ಮ ಖಾಸಗಿ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ನಮ್ಮ ತಂಡ ಬಂದು ಅವರನ್ನು ವಶಕ್ಕೆ ತೆಗೆದುಕೊಳ್ಳುವುದಾಗಿ ಮತ್ತು ಹೋಂ ಸ್ಟೇ ಮತ್ತು ರೆಸಾರ್ಟ್ ಹಾಗೂ ಮಾಲೀಕರ ಹೆಸರುಗಳನ್ನು ಗೌಪ್ಯವಾಗಿರಿಸಲಾಗುವುದು ಎಂದರು.
ಇನ್ಸಪೆಕ್ಟರ್ ನಾರಾಯಣ್, ಹೋಂ ಸ್ಟೇ ಮತ್ತು ರೆಸಾರ್ಟ್ ಸಂಘದ ಅಧ್ಯಕ್ಷರಾದ ಜಿ.ಎಂ. ಜಗದೀಶ್ ಗುತ್ತಿ, ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಕೊಟ್ಟಿಗೆಹಾರ ಸಂಜಯ್, ಬಲಿಗೆ ಪ್ರಶಾಂತ್, ಕಾರ್ತಿಕ್ ಪಟ್ಟದೂರು, ದೀಕ್ಷಿತ್ ಚಿತ್ರಗುತ್ತಿ, ಪವಿತ್ರ ಸೇರಿದಂತೆ ಇತರೆ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರುಗಳು ಉಪಸ್ಥಿತರಿದ್ದರು.












