ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಮೈದಳೆದ ಶ್ವೇತ ಸುಂದರಿ: ಹೆದ್ದಾರಿ ಇಕ್ಕೆಲಗಳಲ್ಲಿ ಅರಳಿ ನಿಂತ ಕ್ರಿಸ್ಮಸ್ ಹೂ
23/12/2025, 21:47
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗಿನಲ್ಲಿ ಚಳಿ ತೀವ್ರತೆ ಪಡೆಯುತ್ತಿದೆ, ಮೈ ಕೊರೆಯುವ ಚಳಿಯ ನಡುವೆಯೂ ಚಳಿಗಾಲದ ಸುಂದರಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸುವ ಪ್ರವಾಸಿಗರಿಗೆ ಸ್ವಾಗತ ಕೋರುತ್ತಿವೆ.
ಹೌದು, ಡಿಸೆಂಬರ್ ತಿಂಗಳಿನಲ್ಲಿ ಮಾತ್ರ ಕಾರಣ ಸಿಗುವ ಶ್ವೇತ ವರ್ಣದ ಈ ಸುಂದರಿ ರಸ್ತೆಯ ಇಕ್ಕೆಲಗಳಲ್ಲಿ ಕಂಗೊಳಿಸುತ್ತಿವೆ.


ಮಡಿಕೇರಿ ಮಂಗಳೂರು ಹಾಗೂ ಮಡಿಕೇರಿ ಸುಂಟಿಕೊಪ್ಪ ನಡುವಿನ ರಾಷ್ಟ್ರೀಯ ಹೆದ್ದಾರಿ ಮತ್ತು ಚೆಟ್ಟಳ್ಳಿ ಭಾಗದಲ್ಲಿ ಈ ಹೂವುಗಳು ಅರಳಿ ನಿಂತಿದೆ. ಈ ಹೂವುಗಳಿಗೆ ನಿರ್ದಿಷ್ಟ ಹೆಸರು ಇಲ್ಲದಿದ್ದರೂ ಡಿಸೆಂಬರ್ ಆದ ಕಾರಣ ಕ್ರಿಸ್ಮಸ್ ಹೂ ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಕೊಡಗಿನಲ್ಲಿ ಹೆಚ್ಚಾಗಿ ಕಾಣ ಸಿಗುವ ಈ ಹೂವುಗಳಿಗೆ ಆಂಗ್ಲ ಭಾಷೆಯಲ್ಲಿ ಕೋಟ್ ಬಟನ್ಸ್ ಎಂದು ಕರೆಯುವುದು ಇದೆ. ಸಾಮಾನ್ಯವಾಗಿ ಇವು ಅರಣ್ಯದ ಕಳೆ ಗಿಡಗಳ ಪೈಕಿ ಒಂದಾಗಿದ್ದು, ಇದರ ಎಲೆಗಳು ಗಾಯಗಳ ಉಪಶಮನಕ್ಕೆ ಔಷದಿಯಾಗಿಯೂ ಬಳಸಲಾಗುತ್ತದೆ. ಒಟ್ಟಿನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಚರಣೆಗೆ ಆಗಮಿಸುತ್ತಿರುವ ಪ್ರವಾಸಿಗರಿಗೆ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರಿಗೆ ರಸ್ತೆ ಬದಿಯಲ್ಲಿ ಆಹ್ವಾನ ನೀಡುತ್ತಿರುವುದoತು ಸತ್ಯ.












