10:49 PM Monday22 - December 2025
ಬ್ರೇಕಿಂಗ್ ನ್ಯೂಸ್
ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ

ಇತ್ತೀಚಿನ ಸುದ್ದಿ

ಮಂಜೇಶ್ವರ ಸ್ನೇಹಾಲಯದಲ್ಲಿ ‘ಕ್ರಿಸ್‌ಮಸ್ ಸಂಭ್ರಮ 2025’ ಸಾಂಸ್ಕೃತಿಕ ಹಬ್ಬ: ಕ್ಯಾರೋಲ್ ಗಾಯನ, ನೃತ್ಯ ವೈವಿಧ್ಯ

22/12/2025, 22:46

ಕಾಸರಗೋಡು(reporterkarnataka.com): ಮಂಜೇಶ್ವರದಲ್ಲಿರುವ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ “ಕ್ರಿಸ್ಮಸ್ ಸಂಭ್ರಮ – 2025” ಅನ್ನು ಅತ್ಯಂತ ಭಕ್ತಿಭಾವ ಮತ್ತು ಹಬ್ಬದ ಉಲ್ಲಾಸದೊಂದಿಗೆ ಆಚರಿಸಲಾಯಿತು.
ಕ್ರಿಸ್‌ಮಸ್ ಅದರ ನಿಜವಾದ ಅರ್ಥದಲ್ಲಿ ಹೊಸತನದ ಜನನ, ಸಂತೋಷ, ಮಾನವಕುಲಕ್ಕೆ ಸೇವಾ ಮನೋಭಾವವನ್ನು ಈ ಸಮಾರಂಭ ಸಾರಿತು.
ಕ್ರಿಸ್‌ಮಸ್ ಸಂಭ್ರಮ – 2025.” ವು ಸಾಂಸ್ಕೃತಿಕ ಹಬ್ಬ, ವಿಶ್ವ ದಾಖಲೆ ಹೊಂದಿರುವ ರೆಮೋನಾ ಇವೆಟ್ ಪಿರೇರಾ ಅವರಿಂದ ಯೇಸುವಿನ ಜನನದ ಕಥೆಯನ್ನು ಅಭಿನಯಿಸುವ ಭರತನಾಟ್ಯ ಪ್ರದರ್ಶನ ಮತ್ತು ಪ್ರಸಿದ್ಧ ಗಾಯಕರಾದ ಜೋಶಲ್ ಮತ್ತು ಜೇಸನ್ ಅವರ ಸುಮಧುರ ಕ್ಯಾರೋಲ್ ಗಾಯನ, ಮಾಸ್ಟರ್ ಸಂಗೀತಗಾರ ಸಂಜಯ್ ರೊಡ್ರಿಗಸ್ ನಿರ್ದೇಶನ, ಹೊರಿಝೊನ್ ತಂಡ ಮತ್ತು ಅರ್ಬನ್ ಗ್ರೂವ್‌ ತಂಡಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳ ಸೂಪರ್ ಕಾಂಬೊ ಆಗಿತ್ತು.
ಅತೀ ವಂದನೀಯ ಬಿಷಪ್ ಹೇಮಚಂದ್ರ ಕುಮಾರ್, ಒಫ಼್ ಚರ್ಚ್ ಒಫ಼್ ಸೌತ್ ಇಂಡಿಯಾ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ, ಆಚರಣೆಗೆ ಮುನ್ನ ಕ್ಯಾಂಪಸ್‌ಗೆ ಭೇಟಿ ನೀಡಿದರು, ಅವರು ನಿವಾಸಿಗಳನ್ನು ಆಶೀರ್ವದಿಸಿದರು ಮತ್ತು ಪ್ರೀತಿ, ಕರುಣೆ ಮತ್ತು ಮಾನವೀಯ ಕಾರ್ಯಗಳ ಅದ್ಭುತ ಸಂದೇಶವನ್ನು ನೀಡಿದರು ಮತ್ತು ನಾವು ಏನೇ ಮಾಡಿದರೂ ಕ್ರಿಸ್ತರು ಕಲಿಸಿದ ಮೌಲ್ಯಗಳನ್ನು ಅನುಸರಿಸಲು ಕರೆ ನೀಡಿದರು.
ಗೌರವಾನ್ವಿತ ಅತಿಥಿಗಳಾಗಿ ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ವಸಂತ್ ಶೆಟ್ಟಿ ಉಪಸ್ಥಿತಿ ಇದ್ದು, ಕ್ರಿಸ್ತ ಮತ್ತು ಕೃಷ್ಣರನ್ನು ಹೋಲಿಸುವ ಅದ್ಭುತ ಸಂದೇಶದೊಂದಿಗೆ ಸಭಿಕರ ಹೃದಯಗಳನ್ನು ಮುಟ್ಟಿದರು. ಎಲ್ಲಾ ಧರ್ಮಗಳ ನಡುವಿನ ಸಮಾನತೆ ಹಾಗು ಬ್ರದರ್ ಜೋಸೆಫ್ ಕ್ರಾಸ್ತಾ ಅವರ ಸೇವೆಯನ್ನು ಶ್ಲಾಘಿಸಿದರು.
ನೂತನವಾಗಿ ಆಯ್ಕೆಯಾದ ಕಾಸರಗೋಡು ಜಿಲ್ಲಾ ಪಂಚಾಯತ ಸದಸ್ಯರಾದ ಹರ್ಷದ್ ವರ್ಕಾಡಿ ಅಂದೇ ಪ್ರಮಾಣ ವಚನ ಮತ್ತು ಅಧಿಕಾರ ಸ್ವೀಕಾರ ಮಾಡಿ ಸಂಭ್ರಮದಲ್ಲಿ ಪಾಲ್ಗೊಂಡು ಜೋಸೆಫ್ ಹಾಗೂ ಅವರ ಮಿಷನ್‌ನ ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡರು ಮತ್ತು ವಿನಮ್ರ ಕೆಲಸವನ್ನು ಹೇಗೆ ಆಶೀರ್ವದಿಸಲಾಗುತ್ತಿದೆ ಎಂಬುದನ್ನು ಉದಾಹರಣೆಯಾಗಿ ನೀಡಿದರು.
ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು