ಇತ್ತೀಚಿನ ಸುದ್ದಿ
ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ
19/12/2025, 22:46
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿಯ ಹೋಮ್ ಸ್ಟೇ ನಲ್ಲಿ ಮಂಡ್ಯದ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮಂಡ್ಯದ ಮಹಾದೇವ ಎಂಬಾತನನ್ನು ಮಡಿಕೇರಿಗೆ ಕರೆಸಿಕೊಂಡು ಕೊನೆಯೊಳಗೆ ಕೂಡಿಹಾಕಿ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಆಟೋ ಚಾಲಕ ತಲೆಮಾರೆಸಿಕೊಂಡಿದ್ದ, ಮಡಿಕೇರಿಯಲ್ಲಿ ಪೇಪರ್ ಹಾಕುವ ಕೆಲಸ ಸಹ ಮಾಡುತ್ತಿದ್ದ ರವಿ ಕಳೆದ ಶನಿವಾರ ಬಲವಂತವಾಗಿ ಆಟೋ ದಲ್ಲಿ ಬಲವಂತವಾಗಿ ಅಪಹರಣ ಯತ್ನ ನಡೆಸಿ ಇವನಿಗೆ ಸಾತ್ ನೀಡಿದ ದರ್ಶನ್ ರೈ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.













