11:15 AM Saturday23 - August 2025
ಬ್ರೇಕಿಂಗ್ ನ್ಯೂಸ್
ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು…

ಇತ್ತೀಚಿನ ಸುದ್ದಿ

90+ ಮೈ ಟ್ಯೂಷನ್ ಆ್ಯಪ್‌ನಿಂದ ಹೈಬ್ರಿಡ್ ಬೋಧನಾ ತರಗತಿಗಳು ಪ್ರಾರಂಭ

31/05/2022, 23:20

*90+ ಮೈ ಟ್ಯೂಷನ್ ಆ್ಯಪ್ ಶಿಕ್ಷಕರೊಂದಿಗೆ ನೇರ ದೃಶ್ಯ ಕಲಿಕಾ ಅನುಭವ ಒದಗಿಸುವ ಗುರಿ ಹೊಂದಿದೆ.

* 2022-23ರ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಬೋಧನಾ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ.

ಹೊಸದಿಲ್ಲಿ(reporterkarnataka.com): 90+ ಮೈ ಟ್ಯೂಷನ್ ಆ್ಯಪ್, ಇಂಡಿಯನ್ ಎಜುಟೆಕ್ ಸ್ಟಾರ್ಟ್ಅಪ್ ಜೊತೆಗೂಡಿ ನೇರವಾಗಿ ಶಿಕ್ಷಕರ ಸಹಾಯದ ಜೊತೆ ದೃಶ್ಯ ಕಲಿಕಾ ಅನುಭವ ಒದಗಿಸಲು ಕೇರಳ ಮತ್ತು ಬೆಂಗಳೂರಿನಲ್ಲಿ ಹೈಬ್ರಿಡ್ ಬೋಧನಾ ತರಗತಿಗಳನ್ನು ಆರಂಭಿಸುವುದಾಗಿ ಪ್ರಕಟಿಸಿದೆ. 

ಈ ಹೈಬ್ರಿಡ್ ತರಗತಿಗಳಲ್ಲಿ ವಿದ್ಯಾರ್ಥಿಗಳು ಆ್ಯನಿಮೇಟೆಡ್ ವೀಡಿಯೊ ತರಗತಿಗಳನ್ನು ವೀಕ್ಷಿಸುವ ಮೂಲಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿದೆ ಮತ್ತು ನೇರವಾಗಿ ಶಿಕ್ಷಕರ ಸಹಾಯದಿಂದ ತಮ್ಮ ಅನುಮಾನಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗಲಿದೆ. 

ಈ ಸೇವೆಯು ಸದ್ಯಕ್ಕೆ ಕೇರಳ ಮತ್ತು ಬೆಂಗಳೂರಿನಲ್ಲಿ ಸುಮಾರು 100 ಹೈಬ್ರಿಡ್ ಬೋಧನಾ ಕೇಂದ್ರಗಳಲ್ಲಿ ಲಭ್ಯವಾಗುತ್ತಿದೆ. 2023-24ರ ಆರ್ಥಿಕ ವರ್ಷದೊಳಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದೆಹಲಿಯನ್ನು ಕೇಂದ್ರೀಕರಿಸಿ ದೇಶದಾದ್ಯಂತ ಈ ಸೇವೆಯನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯ ಮತ್ತು ಸಿಬಿಎಸ್‌ಇ ಮಂಡಳಿಗಳ ವಿದ್ಯಾರ್ಥಿಗಳು ಈ ಹೈಬ್ರಿಡ್ ಕೇಂದ್ರಗಳಿಗೆ ಹಾಜರಾಗಲಿದ್ದು, ಅಲ್ಲಿ ಅವರು ತಮ್ಮ ಸ್ಥಳೀಯ ಭಾಷೆಗಳಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಕಲಿಯಲಿದ್ದಾರೆ. 

ಈ ಸಂದರ್ಭ ಮಾತನಾಡಿದ 90+ ಮೈಟ್ಯೂಷನ್ ಆ್ಯಪ್‌ನ ಸಂಸ್ಥಾಪಕ ಮತ್ತು ಮೇಲ್ವಿಚಾರಕ ವಿಂಗೀಶ್ ವಿಜಯ್, ” ಗುಣಮಟ್ಟ, ಕೈಗೆಟುಕುವ ಬೋಧನಾ ತರಗತಿಗಳ ಮೂಲಕ 90+ ಮೈಟ್ಯೂಷನ್ ಆ್ಯಪ್ 90+ ಅಂಕಗಳನ್ನು ತೆಗೆಯಲು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ನಾವು ಆ್ಯನಿಮೇಟೆಡ್ ವೀಡಿಯೊ ತರಗತಿಗಳ ಜೊತೆಗೆ ಎಲ್ಲಾ ಪಠ್ಯಕ್ರಮ -ಆಧಾರಿತ ವಿಷಯವನ್ನು ಹೊಂದಿದ್ದೇವೆ. ಅದು ವಿದ್ಯಾರ್ಥಿಗಳಿಗೆ ನೆರವಾಗಲಿದ್ದು, ಅವರ ಶ್ರೇಣಿಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ, ಕೆಲವು ವಿದ್ಯಾರ್ಥಿಗಳಿಗೆ ಅವರ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಹೆಚ್ಚಿನ ಗಮನದ ಅಗತ್ಯವಿದೆ. ಹಲವಾರು ಜನ ಇನ್ನೂ ವೈಯಕ್ತಿಕ ತರಗತಿಗಳ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ ಎಂಬುದು ನಮಗೆ ಅರಿವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಈ ಹೈಬ್ರಿಡ್ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ನಮ್ಮ ಮಾದರಿಯು ಶೇ.75ರಷ್ಟು ವೀಡಿಯೊ ವಿಷಯ ಮತ್ತು ಶೇ.25ರಷ್ಟು ನೇರ ಸಂವಹನಗಳನ್ನು ಒಳಗೊಂಡಿದೆ. ಈ ಹೈಬ್ರಿಡ್ ಮಾದರಿಗಳಿಗೆ ಪೋಷಕರು ಹೆಚ್ಚು ಆಕರ್ಷಿತರಾಗಿದ್ದಾರೆ ಮತ್ತು ನೇರ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳು ಪ್ರಗತಿ ಸಾಧಿಸಲಿದ್ದಾರೆ ಎಂಬ ಭರವಸೆ ನಮಗಿದೆ” ಎಂದು ಹೇಳಿದರು. 

ಇತ್ತೀಚೆಗೆ, 90+ ಮೈ ಟ್ಯೂಷನ್ ಆ್ಯಪ್ ತನ್ನ ಅತ್ಯುತ್ತಮ ದರ್ಜೆಯ ಸೇವೆಗಳಿಗೆ 24 ಬ್ರಾಂಡ್ ಅವಾರ್ಡ್‍ಗಳಲ್ಲಿ ವರ್ಷದ ಎಜು-ಟೆಕ್ ಐಕಾನ್ ಎಂಬ ಪ್ರಶಸ್ತಿ ಗೆದ್ದಿದೆ. ಬಿಟೆಕ್ ಮತ್ತು ಎಂಬಿಎ ವಿದ್ಯಾರ್ಥಿಗಳಿಗಾಗಿ ಉದ್ಯಮಶೀಲತೆಯ ಅವಕಾಶಗಳನ್ನು ಒದಗಿಸಲು “ಕ್ಯಾಂಪಸ್ ಕನೆಕ್ಟ್” ಎಂಬ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿದೆ. ಯುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಪ್ರೋತ್ಸಾಹಿಸಲು ವರ್ಚುವಲ್ ಲ್ಯಾಬ್‌ಗಳನ್ನು ತೆರೆಯಿರಿ ಎಂದು ಸ್ಟಾರ್ಟ್ಅಪ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ ಬಳಿಕ ಇವರು ಕೂಡಾ ವರ್ಚುವಲ್ ಲ್ಯಾಬ್‌ಗಳನ್ನು ಪ್ರಾರಂಭಿಸಿದ್ದಾರೆ. ಭಾರತಕ್ಕೆ ಕೈಗೆಟಕುವ ಶಿಕ್ಷಣದ ಗುರಿಯೊಂದಿಗೆ 2018ರಲ್ಲಿ ವಿಂಗೀಶ್ ವಿಜಯ್ ಅವರಿಂದ ಸ್ಥಾಪಿತವಾಗಿರುವ 90+ ಮೈ ಟ್ಯೂಷನ್ ಆ್ಯಪ್, ಎಜುಟೆಕ್ ಸ್ಟಾರ್ಟ್ಅಪ್ ಆಗಿದೆ. ಈ ಕಂಪನಿಯು ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಬಿಎಸ್‌ಇ ಮತ್ತು 14 ರಾಜ್ಯ ಮಂಡಳಿಯ ಪಠ್ಯಕ್ರಮ ಬೋಧನಾ ಸೌಲಭ್ಯ ಒದಗಿಸುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು