ಇತ್ತೀಚಿನ ಸುದ್ದಿ
ನವಮಂಗಳೂರು ಬಂದರಿಗೆ 7ನೇ ವಿಹಾರ ಹಡಗು ಆಗಮನ: ಪ್ರವಾಸಿಗರಿಗೆ ಕರಾವಳಿಯ ಸಾಂಪ್ರದಾಯಿಕ ಸ್ವಾಗತ
10/05/2025, 02:00

ಮಂಗಳೂರು(reporterkarnataka.com): ನವ ಮಂಗಳೂರು ಬಂದರಿಗೆ ಸೆವೆನ್ ಸೀಸ್ ವಾಯೇಜರ್ ಕ್ರೂಸ್ ಶುಕ್ರವಾರ ಆಗಮಿಸಿತು.
ಪ್ರಸ್ತುತ ಕ್ರೂಸ್ ಋತುವಿನ ಏಳನೇ ವಿಹಾರ ನೌಕೆ ಇದಾಗಿದೆ. M.S. ಸೆವೆನ್ ಸೀಸ್ ವಾಯೇಜರ್ ಬರ್ತ್ ನಂ. 4 ರಲ್ಲಿ ಬೆಳಗ್ಗೆ 8:30 ಗಂಟೆಗೆ ಆಗಮಿಸಿತು. ಕೊಲಂಬೊ-ಕೊಚ್ಚಿನ್-ಮಂಗಳೂರು-ಮೊರ್ಮುಗೋವ್-ಮುಂಬಯಿ-ದುಬೈ ಸಂಪರ್ಕಿಸುವ ಕರಾವಳಿ ಮಾರ್ಗದ ಭಾಗವಾಗಿ ಬಹಮಿಯನ್ ಧ್ವಜದ ಅಡಿಯಲ್ಲಿ 583 ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು 458 ಸಿಬ್ಬಂದಿಯನ್ನು ಹೊತ್ತ ಹಡಗು ಕೊಲಂಬೊದಿಂದ ಆಗಮಿಸಿತು.
ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಅತಿಥಿಗಳನ್ನು ಚೆಂಡೆ ಮದ್ದಳೆ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ಬರ ಮಾಡಿಕೊಳ್ಳಲಾಯಿತು. ಕ್ರೂಸ್ ಪ್ರಯಾಣಿಕರ ಸುಗಮ ವಲಸೆ, ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಆತಿಥ್ಯ ಸೇವೆಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಪ್ರಯಾಣಿಕರು ತಮ್ಮ ಮನರಂಜನೆಗಾಗಿ ಏರ್ಪಡಿಸಿದ್ದ ಭರತನಾಟ್ಯ ಪ್ರದರ್ಶನಗಳನ್ನು ವೀಕ್ಷಿಸುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ಅನುಭವಿಸಿದರು. ಕಾರ್ಕಳ, ಮೂಡಬಿದ್ರಿಯ ಸಾವಿರ ಕಂಬದ ಬಸದಿ, ಗೋಕರ್ಣನಾಥ ದೇವಸ್ಥಾನ, ಸೋನ್ಸ್ ಫಾರ್ಮ್, ಪಿಲಿಕುಳ, ಮತ್ತು ಎಸ್‌ಎಸಿ ಚಾಪೆಲ್ ಸೇರಿದಂತೆ ಐಕಾನಿಕ್ ತಾಣಗಳಿಗೆ ಮಾರ್ಗದರ್ಶಿ ತೀರ ವಿಹಾರಗಳನ್ನು ಆಯೋಜಿಸಲಾಗಿದೆ. ಸ್ಥಳೀಯ ಮಾರುಕಟ್ಟೆಗಳು ಮತ್ತು ಬೆಲ್ಮಾಂಟ್ ಹೋಮ್‌ಗೆ ಭೇಟಿ ನೀಡಿದಾಗ ಸಾಂಪ್ರದಾಯಿಕ ಮಂಗಳೂರಿನ ಜೀವನದ ಒಂದು ನೋಟವನ್ನು ನೀಡಿತು.
ಹಡಗು ದಿನ ಸಂಜೆ ಗೋವಾದ ಮೊರ್ಮುಗೋ ಬಂದರಿಗೆ ಹೊರಟಿತು.