12:57 PM Monday7 - April 2025
ಬ್ರೇಕಿಂಗ್ ನ್ಯೂಸ್
UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ… HDK | ವಿಧಾನ ಸೌಧ 3ನೇ ಮಹಡಿಯಲ್ಲಿ ಘಜ್ನಿ , ಘೋರಿ, ಮಲ್ಲಿಕ್… FKCCI Udyog Mela | ಉದ್ಯೋಗ ನೀಡುವ ಜತೆಗೆ ಉತ್ತಮ ಸಂಬಳ ನೀಡಿ:… Bangalore | ಮೋಸ ಹೋಗಬೇಡಿ; ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ: ಸಚಿವೆ ಲಕ್ಷ್ಮೀ… Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2…

ಇತ್ತೀಚಿನ ಸುದ್ದಿ

50 ಲಕ್ಷ ರೂ. ಸ್ವಂತ ಹಣದಲ್ಲಿ ಸುಸಜ್ಜಿತ ಉಚಿತ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ: ಡಿಸಿಎಂ ಲಕ್ಷ್ಮಣ ಸವದಿ

13/05/2021, 15:23

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯಲ್ಲಿ ಸುಮಾರು 60 ಹಾಸಿಗೆಗಳುಳ್ಳ ಉಚಿತ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸುತ್ತಿದ್ದು ನಾಳೆಯಿಂದ ಅಧಿಕೃತವಾಗಿ ಚಾಲನೆ  ಆಗಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಕೊರೋನ ಮಹಾಮಾರಿಯಿಂದ ಹೊರಗಡೆ ಆಸ್ಪತ್ರೆಗಳಲ್ಲಿ ಬೆಡ್ ಆಕ್ಸಿಜನ್ ಸಿಗದೆ ತೊಂದರೆಗೀಡಾಗಿರುವಂತವರಿಗೆ 10 ಲೀಟರ್ ಹಾಗೂ 15 ಲೀಟರ್ ಸಾಮರ್ಥ್ಯವುಳ್ಳ 50  ಆಕ್ಸಿಜನ್ ಕಾನ್ಸಟ್ರೇಟರ್ ಗಳನ್ನು  ಈಗಾಗಲೇ ಖರೀದಿಸಲಾಗಿದೆ. ಇದು ನಾಳೆಯಿಂದ ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

ಆಕ್ಸಿಜನ್  ಕಾನ್ಸಟ್ರೇಟರ್ ಕಿಟ್ ಜೊತೆಗೆ ಜ್ವರ ಪರೀಕ್ಷೆ ಮಾಡುವ ಥರ್ಮಾಮೀಟರ್, ಸ್ಯಾಚು ರೇಷನ್ ಹಾಗೂ ಪಲ್ಸ್ ಚೆಕ್ ಮಾಡುವ ಆಕ್ಸಮೀಟರ್ ಉಳ್ಳ ಕಿಟ್ ಗಳನ್ನು ಕೂಡ ನೀಡಲಾಗುತ್ತಿದೆ.

ಕೋವಿಡ್ ಅಂತ ಮಹಾಮಾರಿ ಇಂದಾಗಿ ಅಥಣಿಯ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಹಾಗೂ ಔಷಧೋಪಚಾರಗಳು ಸಿಗದೆ ಸಂಕಷ್ಟ ಪರಿಸ್ಥಿತಿಯಲ್ಲಿ ಇರುವ ಜನತೆಗೆ ಸುಸಜ್ಜಿತ   ಆಕ್ಸಿಜನ್  ಕಾನ್ಸಟ್ರೇಟರ್  ಹಾಗೂ ಬೆಡ್ ನೀಡುವ ಮೂಲಕ ಪ್ರಾಥಮಿಕ ಚಿಕಿತ್ಸೆ ನೀಡುವ ಮುಖೇನ ಅಳಿಲು ಸೇವೆ ಮಾಡುತ್ತಿರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಕೋರೋನ ಬಂದಿದೆ ಎಂದು  ಉದಾಸೀನತೆ ತೋರದೆ ಕೂಡಲೇ ಚಿಕಿತ್ಸೆ ಪಡೆಯಬೇಕು. ಯಾರು ಧೈರ್ಯಗೆಡಬಾರದು, ಭಯದಿಂದಾಗಿಯೇ ಅನೇಕ ಜನ ಜೀವ ತೆತ್ತಿರುವ ಉದಾಹರಣೆ ನಮ್ಮ ಕಣ್ಣಮುಂದಿದೆ  ಇದರಿಂದಾಗಿ ಜನತೆ ತಮ್ಮ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು