9:02 PM Tuesday4 - November 2025
ಬ್ರೇಕಿಂಗ್ ನ್ಯೂಸ್
ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ…

ಇತ್ತೀಚಿನ ಸುದ್ದಿ

ರಾಜಸ್ಥಾನದಲ್ಲಿ 435 ಮೆಗಾವ್ಯಾಟ್ ಸೌರ ಸ್ಥಾವರ ಯೋಜನೆ ಉದ್ಘಾಟನೆ; ರೈತರು ಭವಿಷ್ಯದ ಇಂಧನದಾತರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

20/07/2025, 17:31

ನವದೆಹಲಿ(reporterkarnataka.com): ಭಾರತದಲ್ಲಿ ರೈತರನ್ನು ನಾವು ʼಅನ್ನದಾತರುʼ ಎನ್ನುತ್ತೇವೆ. ಆದರೆ, ಭವಿಷ್ಯದಲ್ಲಿ ನಮ್ಮ ರೈತರು ʼಇಂಧನದಾತರುʼ ಸಹ ಆಗಲಿದ್ದಾರೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರಾಜಸ್ಥಾನದಲ್ಲಿ ಝೆಲೆಸ್ಟ್ರಾ ಇಂಡಿಯಾ ಕಂಪನಿ ಅಭಿವೃದ್ಧಿಪಡಿಸಿದ 435 ಮೆಗಾವ್ಯಾಟ್ ʼಗೋರ್ಬಿಯಾ ಸೌರ ವಿದ್ಯುತ್ ಯೋಜನೆʼ ಉದ್ಘಾಟಿಸಿ ಮಾತನಾಡಿ, ಭಾರತದ ಇಂಧನ ಪ್ರಯಾಣದಲ್ಲಿ ರೈತರೂ ಪಾಲುದಾರರಾಗುತ್ತಿದ್ದಾರೆ ಎಂದು ಹೇಳಿದರು.


ನಮ್ಮ ಸೌರ ಶಕ್ತಿ ಯೋಜನೆಗಳು ರೈತರನ್ನು ಮತ್ತು ಸಮುದಾಯಗಳ ಸಬಲೀಕರಣಕ್ಕೆ ಕೊಡುಗೆಯಾಗಿವೆ. ಜತೆಗೆ ರೈತರ ಕೊಡುಗೆಯೂ ಸೌರ ವಿದ್ಯುತ್‌ ಅಲ್ಲಿ ಅಡಕವಾಗಿದೆ. ಸೌರ ವಿದ್ಯುತ್‌ ಪ್ಲಾಂಟ್‌ಗಾಗಿ ಕೆಲವೆಡೆ ರೈತರು ಭೂಮಿ ಗುತ್ತಿಗೆ ನೀಡುತ್ತಿದ್ದು, ನವ ಭಾರತ ನಿರ್ಮಾಣ ಕಾರ್ಯದಲ್ಲಿ ಅನನ್ಯ ಪಾಲುದಾರರಾಗುತ್ತಿದ್ದಾರೆ ಎಂದು ಸಚಿವರು ನುಡಿದರು.

*ಜಗತ್ತಿಗೆ ಬೆಳಕು ಚೆಲ್ಲಲಿದ್ದಾರೆ ರೈತರು:* ರೈತರು ತಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ ಬಳಕೆ ಜತೆಗೆ ಹೆಚ್ಚಿನ ವಿದ್ಯುತ್‌ ಅನ್ನು ಗ್ರಿಡ್‌ಗಳಿಗೆ ಪೂರೈಸುತ್ತಾರೆ. ಅಲ್ಲದೇ, ಈಗ ಕೃಷಿ ತ್ಯಾಜ್ಯದಿಂದ ಹಸಿರು ಹೈಡ್ರೋಜನ್‌ ಉತ್ಪಾದನೆ ಸಂಶೋಧನೆ ಯಶಸ್ವಿಗೊಂಡಿದ್ದು, ಮುಂದಿನ ದಿನಗಳಲ್ಲಿ ನಮ್ಮ ರೈತರು ಕೇವಲ ಆಹಾರ ಪೂರೈಕೆದಾರರು ಮಾತ್ರವಲ್ಲ; ಇಂಧನ ಪೂರೈಕೆದಾರರೂ ಆಗಿ ಜಗತ್ತಿಗೆ ಬೆಳಕು ಚೆಲ್ಲಲಿದ್ದಾರೆ ಎಂದು ಅಭಿಪ್ರಾಯಿಸಿದರು.

*ರಾಜಸ್ಥಾನ ಜಾಗತಿಕ ಶುದ್ಧ ಇಂಧನ ಕೇಂದ್ರ:* ರಾಜಸ್ಥಾನ ಜಾಗತಿಕ ಶುದ್ಧ ಇಂಧನ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಭಾರತದ ಸ್ವಚ್ಛ ಇಂಧನ ಅಭಿಯಾನದಲ್ಲಿ ರಾಜಸ್ಥಾನ ಮುಂಚೂಣಿಯಲ್ಲಿದೆ. ರಾಜಸ್ಥಾನದ ವಿದ್ಯುತ್ ಸಾಮರ್ಥ್ಯದ ಶೇ.70 ರಷ್ಟನ್ನು ನವೀಕರಿಸಬಹುದಾದ ಇಂಧನದಿಂದಲೇ ಪಡೆಯಲಾಗುತ್ತಿದೆ ಎಂದು ಹೇಳಿದರು.

*1250 ಎಕರೆ ವಿಸ್ತೀರ್ಣದಲ್ಲಿ ಗೋರ್ಬಿಯಾ ಯೋಜನೆ:* ಗೋರ್ಬಿಯಾ ಸೌರ ವಿದ್ಯುತ್ ಯೋಜನೆ ಎಂಟು ತಿಂಗಳೊಳಗೆ ಪೂರ್ಣಗೊಂಡಿದ್ದು, 1250 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ ಮತ್ತು ಭಾರತೀಯ ಸೌರಶಕ್ತಿ ನಿಗಮದೊಂದಿಗೆ 25 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದಕ್ಕೆ ಬೆಂಬಲವಾಗಿದೆ. ಇದರಿಂದ ವಾರ್ಷಿಕ 755 ಗಿಗಾವ್ಯಾಟ್ ಗಂಟೆಗಳ ಶುದ್ಧ ವಿದ್ಯುತ್ ಉತ್ಪಾದಿಸಲಾಗುತ್ತದೆ. ಸುಮಾರು 1.28 ಲಕ್ಷ ಮನೆಗಳಿಗೆ ವಿದ್ಯುತ್ ಒದಗಿಸುತ್ತದೆ ಮತ್ತು ಪ್ರತಿ ವರ್ಷ ಸುಮಾರು 7.05 ಲಕ್ಷ ಟನ್ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುತ್ತದೆ ಎಂದು ವಿವರಿಸಿದರು.
ರಾಜಸ್ಥಾನದಲ್ಲಿ 35.4 ಗಿಗಾವ್ಯಾಟ್‌ಗೂ ಹೆಚ್ಚು ವಿದ್ಯುತ್‌ ಅನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದ್ದು, ಸೌರಶಕ್ತಿಯಿಂದ 29.5 ಗಿಗಾವ್ಯಾಟ್‌ ಹಾಗೂ ಪವನ ಶಕ್ತಿಯಿಂದ 5.2 ಗಿಗಾವ್ಯಾಟ್‌ ಸಾಮರ್ಥ್ಯದ ಘಟಕಗಳು ಸ್ಥಾಪನೆಯಾಗಿವೆ. ಸ್ಥಳದಲ್ಲೇ ಉಪಕೇಂದ್ರ ಮತ್ತು 6.5 ಕಿ.ಮೀ. ಪ್ರಸರಣ ಮಾರ್ಗ ಸೇರಿದಂತೆ ಸಂಪೂರ್ಣ ಸ್ಥಳಾಂತರಿಸುವ ಮೂಲಸೌಕರ್ಯವನ್ನು ಐದೇ ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

*ನಾವೀನ್ಯತೆ ಮತ್ತು ಭವಿಷ್ಯದ ತಂತ್ರಜ್ಞಾನ:* ʼಗೋರ್ಬಿಯಾ ಸೌರ ವಿದ್ಯುತ್ ಯೋಜನೆʼ ಗರಿಷ್ಠ ಕಾರ್ಯಕ್ಷಮತೆ ಕಾಯ್ದುಕೊಳ್ಳಲು ಸುಧಾರಿತ ಸೌರ ಫಲಕಗಳು (TOPCon ಬೈಫೇಶಿಯಲ್ ಮೊನೊ PERC ಮಾಡ್ಯೂಲ್‌ಗಳು) ಮತ್ತು 1300ಕ್ಕೂ ಹೆಚ್ಚು ರೋಬೋಟಿಕ್ ಶುಚಿಗೊಳಿಸುವ ಘಟಕಗಳನ್ನು ಬಳಸುತ್ತದೆ. ಇದು ವಿಶ್ವ ದರ್ಜೆಯ ಸೌಲಭ್ಯವಾಗಿದೆ ಎಂದರು.

*₹6.57 ಲಕ್ಷ ಕೋಟಿ ಹೂಡಿಕೆಗೆ ಸಹಿ:* ರಾಜಸ್ಥಾನ ಸಮಗ್ರ ಶುದ್ಧ ಇಂಧನ ನೀತಿ 2024 ಅನ್ನು ಅಳವಡಿಸಿಕೊಂಡಿದೆ. ಅಲ್ಲದೇ, ಹಸಿರು ಹೈಡ್ರೋಜನ್ ನೀತಿಯನ್ನು ಸಹ ಕಾರ್ಯಗತಗೊಳಿಸಿದೆ. ಕಳೆದ ವರ್ಷ ₹6.57 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಗೆ ಸಹಿ ಹಾಕಲಾಯಿತು. ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ಸಹಕಾರದಲ್ಲಿ ಇಲ್ಲಿ ಸೌರ ವಿದ್ಯುತ್‌ ಯೋಜನೆಗೆ ವೇಗ ಸಿಕ್ಕಿದೆ ಎಂದು ಶ್ಲಾಘಿಸಿದರು.
PM ಸೂರ್ಯ ಘರ್ ಯೋಜನೆಯಡಿ ರಾಜಸ್ಥಾನದಲ್ಲಿ 49000ಕ್ಕೂ ಹೆಚ್ಚು ಮೇಲ್ಛಾವಣಿ ಅಳವಡಿಕೆ ಪೂರ್ಣಗೊಂಡಿದ್ದು, PM ಕುಸುಮ್ ಅಡಿಯಲ್ಲಿ 1.45 ಲಕ್ಷ ಸೌರ ಪಂಪ್‌ಗಳನ್ನು ಅಳವಡಿಸಲಾಗಿದೆ. ₹325 ಕೋಟಿಗೂ ಹೆಚ್ಚು ಸಬ್ಸಿಡಿ ವಿತರಿಸಲಾಗಿದೆ. ಈಗಾಗಲೇ 2.7 ಲಕ್ಷ ಅರ್ಜಿಗಳು ಬಂದಿದ್ದು, ತ್ವರಿತ ಅನುಷ್ಠಾನಕ್ಕೆ ಸಲಹೆ ನೀಡಿದರು.

*ಹೂಡಿಕೆಯಲ್ಲಿ ಅಗ್ರ ಸ್ಥಾನ ಝೆಲೆಸ್ಟ್ರಾ:* ನವೀಕರಿಸಬಹುದಾದ ಇಂಧನ ವಲಯದಲ್ಲಿ ಝೆಲೆಸ್ಟ್ರಾ ಜಾಗತಿಕ ಪ್ರತಿಷ್ಠಿತ ಕಂಪನಿಯಾಗಿದ್ದು, 13 ದೇಶಗಳಲ್ಲಿ 29 ಗಿಗಾವ್ಯಾಟ್‌ ಇಂಗಾಲ-ಮುಕ್ತ ಇಂಧನ ಯೋಜನೆಗಳ ಪೋರ್ಟ್‌ಫೋಲಿಯೊ ಹೊಂದಿದೆ. ಭಾರತದಲ್ಲಿ ಈ ಕಂಪನಿ 5.4 ಗಿಗಾವ್ಯಾಟ್‌ ಪೈಪ್‌ಲೈನ್ ಹೊಂದಿದ್ದು, 1.7 ಗಿಗಾವ್ಯಾಟ್‌ಗೆ ಒಪ್ಪಂದ ಮಾಡಿಕೊಂಡಿದೆ. ಇದು ವಿಶ್ವದ ಅತಿದೊಡ್ಡ ಹೂಡಿಕೆಯಲ್ಲಿ ಒಂದಾಗಿದೆ. ಈ ಕಂಪನಿ 273 ಬಿಲಿಯನ್ ಯುರೋಗಳಿಗಿಂತ ಹೆಚ್ಚು ಆಸ್ತಿ ನಿರ್ವಹಿಸುತ್ತಿದ್ದು, 2024ರಲ್ಲಿ ಶುದ್ಧ ಇಂಧನದ ಅಗ್ರ 10 ಜಾಗತಿಕ ಮಾರಾಟಗಾರರಲ್ಲಿ ಹಾಗೂ ಯುರೋಪ್, ಮಧ್ಯಪ್ರಾಚ್ಯ ಮತ್ತು ಏಷ್ಯಾ ಪ್ರದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು