ಇತ್ತೀಚಿನ ಸುದ್ದಿ
400 ಕೆವಿ ವಿದ್ಯುತ್ ಲೈನಿಗೆ ಮಾಜಿ ಸಚಿವ ರಮಾನಾಥ ರೈ ವಿರೋಧ: ಭೂಗತ ಕೇಬಲ್ ವ್ಯವಸ್ಥೆ ಕಲ್ಪಿಸಲು ಆಗ್ರಹ
16/10/2023, 16:12
ಮಂಗಳೂರು(reporterkarnataka.com):ಉಡುಪಿ- ಕಾಸರಗೋಡು ಮಧ್ಯೆ ಹಾದು ಹೋಗಲಿರುವ 400 ಕೆವಿ ವಿದ್ಯುತ್ ಲೈನ್ ನಿಂದ ಸಣ್ಣ ರೈತರಿಗೆ ತೊಂದರೆಯಾಗುತ್ತಿದ್ದು, ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 400 ಕೆವಿ ವಿದ್ಯುತ್ ಕೇಬಲ್ ನಿಂದ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಸಣ್ಣ ಹಾಗೂ ಅತೀ ಸಣ್ಣ ರೈತರ ಜಮೀನುಗಳಿಗೆ ತೊಂದರೆಯಾಗುತ್ತಿದೆ.
ಅದಕ್ಕೆ ಪರ್ಯಾಯ ವ್ಯವಸ್ಥೆ ಆಗಬೇಕು. ಅವರ ಈ ಹೋರಾಟಕ್ಕೆ ನನ್ನ ಬೆಂಬಲ ಇದೆ.
ಇದು 900 ಕೋಟಿ ರೂ.ಗಳ ಯೋಜನೆಯಾಗಿದೆ. ಇದರಿಂದ ಈಗಾಗಲೇ ಹಲವಾರು ಪಾಲುದಾರರು ಶ್ರೀಮಂತರಾಗಿದ್ದಾರೆ. ಅವರು ಮನಸ್ಸು ಮಾಡಿದರೆ ದೊಡ್ಡ ವಿಷಯವಲ್ಲ, ಸರಕಾರ, ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಜಮೀನಿನ ಮೇಲೆ ಹೈಟೆನ್ಶನ್ ತಂತಿ ಎಳೆಯುವ ಬದಲು
ಭೂಗತ ಕೇಬಲ್ ಹಾಕಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಅವರು ನುಡಿದರು.