10:36 AM Thursday9 - April 2026
ಬ್ರೇಕಿಂಗ್ ನ್ಯೂಸ್
ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಪ್ರದೇಶ… ಎಲ್ಲ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ; ಕುಮಾರಸ್ವಾಮಿನಾ ಯಾರು ಎಂದು ಕೇಳ್ತಾರೆ:… ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವವಿದ್ದರೂ ಅಪಾಯ ಫಿಕ್ಸ್​​; ಯಾಕೆ ಗೊತ್ತಾ? ಕೊಡಗಿನ ಅಳಿಯನಿಗೆ ಭರ್ಜರಿ ಪಾರ್ಟಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತವರಿನಲ್ಲಿ ಅದ್ದೂರಿ… ಎನ್.ಆರ್.ಪುರ: ಶಿವಮೊಗ್ಗದ ನರ್ಸ್ ಆತ್ಮಹತ್ಯೆ; ಹೊಳೆಗೆ ಹಾರಿ ಜೀವತ್ಯಾಗ Kodagu | ನಟಿ ರಶ್ಮಿಕಾ ಮಂದಣ್ಣಗೆ ತಂದೆಯಿಂದ ವಿರಾಜಪೇಟೆಯ “ಸೆರಿನಿಟಿ ಕಾಟೇಜ್” ಗಿಫ್ಟ್ ಮಧ್ಯಪ್ರಾಚ್ಯ ಯುದ್ಧ: ಕೊಡಗಿನಲ್ಲಿ ಸಿಲುಕಿದ ಇರಾನಿ ದಂಪತಿ; ಪಾಸ್‌ಪೋರ್ಟ್ ಆತಂಕ ಬಾಗಲಕೋಟೆ ಉಪ ಚುನಾವಣೆ | ಬಿಜೆಪಿ ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು… ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆಡಿಸಿದ ಉಪ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ Bangalore | ಅಡುಗೆ ಅನಿಲ ದಾಸ್ತಾನು ಕೊರತೆ ಇಲ್ಲ: ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ…

ಇತ್ತೀಚಿನ ಸುದ್ದಿ

40% ಕಮಿಷನ್ ಆರೋಪ: ಪ್ರಧಾನಿ ಕಾರ್ಯಾಲಯದಿಂದ ಕರೆ?; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ; ಭ್ರಷ್ಟರಲ್ಲಿ ಎಲ್ಲಿಲ್ಲದ ನಡುಕ.!

29/06/2022, 20:23

ಬೆಂಗಳೂರು(reporterkarnataka.com): ಪ್ರಧಾನಿ ಕಾರ್ಯಾಲಯದಿಂದ(ಪಿಎಂಒ)ಬಂದಿದೆ ಎನ್ನಲಾದ ಕರೆಯೊಂದು ದೂರದ ಬೆಂಗಳೂರಿನಲ್ಲಿ ಭಾರೀ ಕಂಪನ ಉಂಟು ಮಾಡಿದೆ. 40% ಕಮಿಷನ್ ಕುರಿತು ಗುತ್ತಿಗೆದಾರರು ಮಾಡಿರುವ ಆರೋಪದ ಬಗ್ಗೆ ಇದೀಗ  ಪ್ರಧಾನಿ ಕಾರ್ಯಾಲಯ ಕಾರ್ಯೋನ್ಮುಖವಾಗಿದೆ. ಈ ನಡುವೆ ಭ್ರಷ್ಟರಲ್ಲಿ ನಡುಕ ಉಂಟು ಮಾಡಿದೆ.

40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವಾಗಲೇ ಈ ಕರೆ ಆಡಳಿತ ಪಕ್ಷದ ಬಿಜೆಪಿಯಲ್ಲಿ ಭಾರೀ ತಲ್ಲಣವನ್ನುಂಟು ಮಾಡಿದೆ. ಭ್ರಷ್ಟ ಸಚಿವರು, ಶಾಸಕರುಗಳಿಗೆ ನಿದ್ದೆ ಇಲ್ಲದ ರಾತ್ರಿಯನ್ನು ಇದು ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜಕೀಯ ವೀಕ್ಷಕರು ಲೆಕ್ಕ ಹಾಕುತ್ತಾರೆ.

ಗುತ್ತಿಗೆದಾರರ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ 

ಅವರಿಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದೆ ಎಂಬ ಮಾಹಿತಿ ಇದೆ. ದೂರುದಾರರ ಮಾಹಿತಿ ನೀಡುವಂತೆ ಪಿಎಂಒದಿಂದ ಕೋರಲಾಗಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ಕಾರ್ಯಾಲಯದಿಂದ ಬಂದ ಕರೆಯಲ್ಲಿ

“ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ಭ್ರಷ್ಟಾಚಾರದ ದಾಖಲೆ ನೀಡುವಂತೆ” ಸೂಚಿಸಲಾಯಿತು ಎನ್ನಲಾಗಿದೆ.

ವಿಶೇಷವೆಂದರೆ ಮೋದಿ ಬೆಂಗಳೂರಿಗೆ ಬರುವ ಮುನ್ನ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯ ವರದಿ ತರಿಸಿಕೊಂಡಿತ್ತು. ಈ ಬಗ್ಗೆನೂ ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತನಿಖೆಗೆ ಗೃಹ ಇಲಾಖೆಯ ತಂಡ ಬೆಂಗಳೂರಿಗೆ ಬರೋ ಸಾಧ್ಯತೆ ಇದೆ. ಗುತ್ತಿಗೆದಾರರ‌ ಸಂಘವೂ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಆರೋಪ ಮಾಡಿತ್ತು. ದಾಖಲೆಯನ್ನು ಸಿದ್ದಪಡಿಸಿಕೊಳ್ಳಲು ಪ್ರಧಾನಿ ಕಾರ್ಯಾಲಯ ಸೂಚಿಸಿದೆ ಎಂದು ಹೇಳಲಾಗಿದ್ದು, ಕೆಂಪಣ್ಣ ಅವರು ಪ್ರಧಾನಿ ಕಚೇರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಎಂ ಒದಿಂದ ಬಂದಿದೆ ಎನ್ನಲಾದ  ಕರೆ ಕುರಿತು 

ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ನನಗೆ ಪ್ರಧಾನಿಯವರ ಕಚೇರಿಯಿಂದ ಕರೆ ಬಂದಿಲ್ಲ. ಯಾವುದೇ ನೊಟೀಸ್ ಕೂಡ ಬಂದಿಲ್ಲ. ನಾನು ಕೆಲಸದ ಮೇಲೆ ಮೈಸೂರಿಗೆ ಬಂದಿದ್ದೆ.

ಯಾರೋ ನಿಮ್ಮನ್ನ ಕೇಳಿಕೊಂಡು ಬಂದಿದ್ದಾರೆ. ನಿಮ್ಮ‌ಜೊತೆ ಮಾತನಾಡಬೇಕೆಂದು ಕೇಳ್ತಿದ್ದಾರೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದರು. ನಾನು‌ ಅವರನ್ನ ಯಾರೆಂದು ವಿಚಾರಿಸಿದೆ.

ಹೋಂ ಡಿಪಾರ್ಟಮೆಂಟ್ ನಿಂದ ಬಂದಿದ್ದೇವೆ ಎಂದು ಹೇಳಿದರು. ನಿಮ್ಮನ್ನ ಭೇಟಿಯಾಗಬೇಕು ಅಂತ ಹೇಳಿದ್ರು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಈ ಹಿಂದೆ ರಾಜ್ಯ ಸರಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡಿ ದೂರು ನೀಡಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು