ಇತ್ತೀಚಿನ ಸುದ್ದಿ
ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ ಸಾವು; ತಾಯಿಯ ರಕ್ಷಣೆ
13/01/2025, 23:49
ವಿಜಯಪುರ (reporterkarnataka.com): ಬೇನಾಳ ಬಳಿ ತಾಯಿಯೊಬ್ಬಳು ತನ್ನ ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದು, ಮಕ್ಕಳು ದಾರುಣವಾಗಿ ಸಾವನ್ನಪ್ಪಿದರೆ, ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಭಾಗ್ಯಶ್ರೀ ಎಂಬವರು ತನ್ನ ನಾಲ್ವರು ಮಕ್ಕಳೊಂದಿಗೆ ಕರೆಗೆ ಹಾರಿದ್ದರು. ಆದರೆ ಮಕ್ಕಳಾದ ತನು ಲಿಂಗರಾಜ್ ಭಜಂತ್ರಿ(5), ರಕ್ಷಾ ಲಿಂಗರಾಜ್ ಭಜಂತ್ರಿ(3) ಹಾಗೂ ಒಂದು ವರ್ಷದ ಅವಳಿ ಜವಳಿ ಮಕ್ಕಳು ಸಾವನ್ನಪ್ಪಿದ್ದಾರೆ. ತಾಯಿ ಭಾಗ್ಯಶ್ರೀ ಅವರನ್ನು ಸ್ಥಳೀಯರು ರಕ್ಷಿಸಿದ್ದು, ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಭಾಗ್ಯಶ್ರೀ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಿಂಗರಾಜ್ ಭಜಂತ್ರಿ ಕುಟುಂಬದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು.