ಇತ್ತೀಚಿನ ಸುದ್ದಿ
3ನೇ ಅಲೆ ಭೀತಿ: ಮಸ್ಕಿ ತಾಲೂಕಾಡಳಿತದಿಂದ 35 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಸಿದ್ಧ
18/01/2022, 18:07
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕಿನಲ್ಲಿ ಕೋವಿಡ್ 3ನೇ ಅಲೆ ಅಬ್ಬರಿಸುತ್ತಿದ್ದು, ತಾಲೂಕಿನ ಹಲವಡೆ ಸೋಂಕು ಕಾಣಿಸಿಕೊಂಡಿದೆ. ಬಡ ಮಕ್ಕಳು, ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ತಾಲೂಕು ದಂಡಾಧಿಕಾರಿ ಕವಿತಾ ಆರ್. ಅವರು ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಕಂದಾಯ ಇಲಾಖೆಯ ಸಭೆ ನಡೆಸಿ ತಡೆಗಟ್ಟುವ ಕುರಿತು ಚರ್ಚೆ ನಡೆಸಿದ್ದಾರೆ. ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಿದೆ. ಮೂರನೆಯ ಅಲೆ ಹೆಚ್ಚಾಗುತ್ತಿದ್ದಂತೆ ಮುಂಜಾಗೃತ ಕ್ರಮವಾಗಿ ಮುದುಗಲ್ ಕ್ರಾಸ್ ಮುರಾರ್ಜಿ ಶಾಲೆಯಲ್ಲಿ35 ಹಾಸಿಗೆಯ ಕೋವಿಡ್ ಕೇರ್ ಸಿದ್ಧವಾಗಿದೆ.ಎಂದು ಅವರು ತಿಳಿಸಿದರು.
3 ಅಲೆಗೆ ಮಕ್ಕಳೇ ಟಾರ್ಗೆಟ್. ತಾಲೂಕಿನ ಇದುವರೆಗೆ ಮಕ್ಕಳಲ್ಲೇ ಕೋವಿಡ್ ಸೋಂಕು ಕಂಡುಬಂದಿದ್ದು, ತಾಲೂಕಿನಲ್ಲಿ ಪೋಷಕರ ಚಿಂತೆಯಾಗಿದೆ.
ಮೂರನೇ ಅಲೆ ತಡೆಗಟ್ಟಲು ತಾಲೂಕಾಡಳಿತದಿಂದ ಹೆಚ್ಚಿನ ಕ್ರಮಕೈಗೊಂಡಿದ್ದು ಈಗಾಗಲೇ ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.