ಇತ್ತೀಚಿನ ಸುದ್ದಿ
ಕಡೂರು ಸಮೀಪ 3 ಕೃಷ್ಣ ಮೃಗಗಳ ಗುಂಡಿಕ್ಕಿ ಹತ್ಯೆ: ದುಷ್ಕರ್ಮಿಗಳ ಬಚಾವ್ ಮಾಡಲು ಅರಣ್ಯ ಇಲಾಖೆ ಯತ್ನ?
24/12/2025, 15:34
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತೀರಾ ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ
ಕೃಷ್ಣ ಮೃಗಗಳಿಗೆ ಬೇಟೆಗಾರರು ಗುಂಡಿಕ್ಕಿ ಹತ್ಯೆಗೈದ ಘಟನರ
ಕಡೂರು ತಾಲೂಕಿನ ಬಾಸೂರು ಕಾವಲ್ ನಲ್ಲಿ ನಡೆದಿದೆ.
ಬಾಸೂರು ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶದ ಪಕ್ಕದ ಜಮೀನಿನಲ್ಲಿ ಈ ಕೃತ್ಯ ಎಸಗಲಾಗಿದೆ. 2 ಹೆಣ್ಣು ಹಾಗೂ 1 ಗಂಡು ಕೃಷ್ಣಮೃಗಗಳನ್ನು ಗುಂಡಿಕ್ಕಿ ಸಾಯಿಸಲಾಗಿದೆ.
ಮೂರು ಕೃಷ್ಣಮೃಗಗಳಿಗೂ ಸುಮಾರು 2 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಹಾವೇರಿ ಮತ್ತು ಚಿಕ್ಕಮಗಳೂರಿನಲ್ಲಿ ಮಾತ್ರ ಕೃಷ್ಣಮೃಗ ಕಾಣಸಿಗುತ್ತದೆ.







ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಶೂಟ್ ಮಾಡಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಅರಣ್ಯ ಇಲಾಖೆ ಯತ್ನಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣ ಮುಚ್ಚಿ ಹಾಕಲು ಸಂಜೆಯೇ ಕೃಷ್ಣಮೃಗಗಳನ್ನ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸಂಜೆ ಬಳಿಕ ಅವಸರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸಂಜೆ ಬಳಿಕ ಪ್ರಾಣಿಗಳ ಶವಪರೀಕ್ಷೆ-ಅಂತ್ಯ ಸಂಸ್ಕಾರ ಮಾಡುವಂತಿಲ್ಲ.
ಅಪರಾಧಿಗಳ ರಕ್ಷಣೆಗೆ ಆತುರದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆಂದು ಆರೋಪ ಎದುರಾಗಿದೆ.
ಬೀರೂರು ವಲಯ ಅರಣ್ಯ ಅಧಿಕಾರಿಗಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












