ಇತ್ತೀಚಿನ ಸುದ್ದಿ
ಅರ್ಕುಳ ತುಪ್ಪೆಕಲ್ಲು ಶ್ರೀ ಹನುಮಾನ್ ಸೇವಾ ಸಂಘ, ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ 25ನೇ ವರ್ಷದ ಯುಗಾದಿ ಉತ್ಸವ
01/04/2025, 11:53

ಸುರತ್ಕಲ್(reporterkarnataka.com): ಶ್ರೀ ಹನುಮಾನ್ ಸೇವಾ ಸಂಘ ಹಾಗೂ ಅರ್ಕುಳ ತುಪ್ಪೆಕಲ್ಲು ವಿಶ್ವ ಹಿಂದೂ ಪರಿಷತ್ ಬಜರಂಗದಳ,ಆಯೋಜನೆಯಲ್ಲಿ 25ನೇ ವರ್ಷದ ಯುಗಾದಿ ಉತ್ಸವ ಆಚರಿಸಲಾಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕ ಡಾ. ವೈ. ಭರತ್ ಶೆಟ್ಟಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಇಂದಿನ ಸಮಾಜದಲ್ಲಿ ಜಾತ್ಯತೀತ ಎಂಬ ಪದ ದುರುಪಯೋಗ ಆಗುತ್ತಿದೆ. ಒಬ್ಬ ಹಿಂದೂವಿಗೆ ಜಾತ್ಯತೀತತೆಯ ಪಾಠವನ್ನು ಯಾರೂ ಕೂಡ ಹೇಳಿಕೊಡುವ ಅವಶ್ಯಕತೆ ಇಲ್ಲ, ಯಾಕೆಂದರೆ ಹಿಂದೂಗಳಿಗೆ ಹುಟ್ಟಿನಿಂದಲೇ ಎಲ್ಲರನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇದೆ. ಆದರೆ ಅಂತಹ ಮನಸ್ಥಿತಿ ಅನ್ಯಮತೀಯರಿಗೆ ಇದೆಯೋ ಎಂಬ ಪ್ರಶ್ನೆಯನ್ನು ನಾವು ಮಾಡಬೇಕಿದೆ ಎಂದರು.