ಇತ್ತೀಚಿನ ಸುದ್ದಿ
23ರಿಂದ ಮೂಡುಬಿದ್ರೆ ಕನ್ನಡ ಭವನದಲ್ಲಿ ‘ಆಳ್ವಾಸ್ ಚಿಣ್ಣರ ಮೇಳ’ ಮಕ್ಕಳ ಬೇಸಿಗೆ ಶಿಬಿರ
22/04/2022, 08:25

ಮೂಡುಬಿದರೆ(reporterkarnataka.com): ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಏಪ್ರಿಲ್ 23ರಿಂದ ಮೇ 1ರ ವರೆಗೆ ಮೂಡುಬಿದಿರೆಯ ಸ್ಕೌಟ್ ಮತ್ತು ಗೈಡ್ ಕನ್ನಡ ಭವನದಲ್ಲಿ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ‘ಚಿಣ್ಣರಮೇಳ 2022’ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ.
23ರಂದು ಬೆಳಗ್ಗೆ 9.30 ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕರಾದ ಜೀವನ್ ರಾಂ ಸುಳ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಒಂಬತ್ತು ದಿನಗಳ ಕಾಲ ನಡೆಯುವ ಈ ಚಿಣ್ಣರ ಮೇಳದಲ್ಲಿ ಜಾದೂ, ಮುಖವಾಡ ತಯಾರಿ, ಗೊಂಬೆ ತಯಾರಿ, ಚಿತ್ರಕಲೆ, ಕೊಲಾಜ್, ಗ್ರೀಟಿಂಗ್ಸ್, ಕ್ರಾಫ್ಟ್, ವರ್ಲಿ ಕಲೆ, ಪವಾಡ ರಹಸ್ಯ ಬಯಲು, ರಂಗಾಭಿನಯ, ಮಾತುಗಾರಿಕೆ, ರಂಗದಾಟಗಳು, ರಂಗಗೀತೆ,ಕಥಾಭಿನಯ,ಅಭಿನಯ ಗೀತೆ, ಅಂದದ ಹಸ್ತಾಕ್ಷರ, ಪರಿಸರ ಪ್ರೀತಿ, ಆರೋಗ್ಯ ಮಾಹಿತಿ, ಮೋಜಿನ ಆಟಗಳು,ಆತ್ಮ ವಿಶ್ವಾಸ ಭರಿಸುವ ಗುಂಪು ಚಟುವಟಿಕೆಗಳು, ಸರಳ ನಾಟಕ ತಯಾರಿ ಮುಂತಾಗಿ ಮಕ್ಕಳ ಮಾನಸಿಕ,ದೈಹಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ಚಟುವಟಿಕೆಗಳನ್ನು ತರಬೇತಿ ನೀಡಲಾಗುವುದು.
ಮಕ್ಕಳ ಶಿಬಿರದ ಅನುಭವೀ ಸಂಪನ್ಮೂಲ ವ್ಯಕ್ತಿಗಳಾದ ರಂಗಮಾಂತ್ರಿಕ ಜೀವನ್ ರಾಂ ಸುಳ್ಯ, ಜಾದೂಗಾರ ಕುದ್ರೋಳಿ ಗಣೇಶ್, ಚಿತ್ರಕಲಾವಿದ ತಾರಾನಾಥ ಕೈರಂಗಳ, ಪರಿಸರಪ್ರೇಮಿ ಕಲಾವಿದ ದಿನೇಶ್ ಹೊಳ್ಳ, ರಂಗ ನಿರ್ದೇಶಕರಾದ ಶಿವಗಿರಿ ಕಲ್ಲಡ್ಕ ಮತ್ತು ಉಜ್ವಲ್ ಯು.ವಿ.ನೀನಾಸಂ.,
ವಂದನಾ ರೈ ಕಾರ್ಕಳ, ಶಿಲ್ಪಗುರು ವಿಶ್ವನಾಥ ಎಂ.,ರಾಜ್ಯ ತರಬೇತುದಾರ ರಾಜೇಂದ್ರ ಭಟ್ ಕಾರ್ಕಳ, ಕಲಾ ಶಿಕ್ಷಕರಾದ ಸಂತೋಷ್ ಮಾಳ, ಪರಮೇಶ್ವರ್ ಎನ್.ಪಿ., ಚಂದ್ರಕಾಂತ್, ಶ್ರೇಷ್ಠ, ಸಂಗೀತ ಗುರುಗಳಾದ ರಾಘವೇಂದ್ರ ಉಪಾಧ್ಯಾಯ, ಚಿನ್ಮಯ ಭಟ್, ಕೆ.ಪಿ.ವಿನೋದ್ ,ದುರ್ಗೇಶ್ ನೀಲೋಗರ್ ಮತ್ತು ಸುಮನಾ ಪ್ರಸಾದ್ ಮುಂತಾದವರು ತರಬೇತಿ ನೀಡಲಿದ್ದಾರೆ.
ಪ್ರತಿದಿನ ಶಿಬಿರ ಬೆಳಗ್ಗೆ9.00ರಿಂದ ಸಂಜೆ 4.30 ರ ವರೆಗೆ ಶಿಬಿರ ನಡೆಯಲಿದೆ.