12:17 PM Tuesday21 - May 2024
ಬ್ರೇಕಿಂಗ್ ನ್ಯೂಸ್
ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:… ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;…

ಇತ್ತೀಚಿನ ಸುದ್ದಿ

ಚುನಾವಣೆ ಮುಗಿದರೂ ತಣಿಯದ ಕುತೂಹಲ: ‘ಈ ಸರಿ ಏರ್ ಗೆಂದುವೆರ್?’; ಕರಾವಳಿಯಲ್ಲಿ ಕೇಳಿ ಬರುತ್ತಿರುವುದು ಸದ್ಯ ಇದೊಂದೇ ಮಾತು!

29/04/2024, 15:36

 

 

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಮಳೆ ನಿಂತರೂ ಹನಿ ನಿಂತಿಲ್ಲ’ ಎಂಬಂತೆ ಚುನಾವಣೆ ಮುಗಿದರೂ ಕರಾವಳಿಯಾದ್ಯಂತ ರಾಜಕೀಯ ವಿಶ್ಲೇಷಣೆ ನಿಂತಿಲ್ಲ. ಇದೀಗ ಮತದಾನ ನಡೆದು ಎರಡು ದಿನ ಕಳೆದರೂ ಯಾರು ಯಾರನ್ನು ಎಲ್ಲೇ ಭೇಟಿಯಾದರೂ ಅವರ ಬಾಯಿಯಿಂದ ಮೊದಲಿಗೆ ಹೊರಬರುವುದು ಈ ಸರಿ ಏರ್ ಗೆಂದುವೆರ್(ಈ ಬಾರಿ ಯಾರು ಗೆಲ್ಲುತ್ತಾರೆ?) ಎಂಬ ಮಾತಾಗಿದೆ.
ಇಲ್ಲಿನ ಎರಡು ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಹೆಚ್ಚಿನ ರಾಜಕೀಯ ಕುತೂಹಲಿಗರು ಕೂಡ ಕೂಡಿಸಿ ಕಳೆದು ಗುಣಿಸಿ ಭಾಗಿಸಿ ತಮ್ಮ ಲೆಕ್ಕಾಚಾರ ಮುಂದಿಡುತ್ತಾರೆ. ಹಾಗೆ ಬಸ್ ಸ್ಟಾಂಡ್ ಇರಲಿ, ಮಾರ್ಕೆಟ್ ಇರಲಿ, ಬಾರ್ – ವೈನ್ ಶಾಪ್ ಇರಲಿ, ಕೊನೆಗೆ ಸುಡು ಬಿಸಿಲಿಗೆ ಮೈಯೊಡ್ಡಿದ ನಡು ರಸ್ತೆಯಲ್ಲೇ ಪರಸ್ಪರ ಭೇಟಿಯಾಗಲಿ ಮೊದಲಿಗೆ ಕೇಳುವ ಮಾತು ಈ ಸರಿ ಏರ್ ಗೆಂದುವೆರ್ (ಈ ಬಾರಿ ಯಾರು ಗೆಲ್ತಾರೆ) ಎನ್ನುವುದಾಗಿದೆ.

ಯಾಕೆಂದರೆ ದ.ಕ.ಲೋಕಸಭೆ ಕ್ಷೇತ್ರದಲ್ಲಿ ಅಷ್ಟರ ಮಟ್ಟಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ.3 ದಶಕಗಳಿಂದ ಇಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿ ದೆಹಲಿಗೆ ಹೋಗುತ್ತಿದ್ದಾರೆ.ಅದು ಕೂಡ ಸಲೀಸಾದ ಗೆಲುವು ಕಾಣುತ್ತಿದ್ದಾರೆ. ಆದರೆ ಈ ಬಾರಿ ಹಾಗೆ ನಡೆದಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಪೂಜಾರಿ ಅವರ ಹೆಸರನ್ನು ಹೈಕಮಾಂಡ್ ಘೋಷಿಸಿದ ತಕ್ಷಣವೇ ತಕ್ಷಣವೇ ಇಲ್ಲಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಬಿಜೆಪಿಯ ದಿಗ್ವಿಜಯದ ವೇಗ ತಗ್ಗಿದಂತೆ ಎಲ್ಲಡೆ ಭಾಸವಾಗಲಾರಂಭಿಸಿದೆ. ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನಾಂಕ ಮುಕ್ತಾಯಗೊಂಡು ಕಣದಲ್ಲಿರುವವರ ಅಂತಿಮ ಚಿತ್ರಣ ಲಭ್ಯವಾಗುತ್ತಿದ್ದಂತೆ ಕಾಂಗ್ರೆಸ್ ಗೆ ಮತ್ತಷ್ಟು ಚೈತನ್ಯ ಬಂದಿದೆ. ಚುನಾವಣಾ ಪ್ರಚಾರ ಕಾರ್ಯ ಆರಂಭವಾಗಿ ಕೊನೆಗೊಳ್ಳುವ ವರೆಗೂ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ತೀವ್ರ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್ ಕಡೆಯಿಂದ ಅಲ್ಲಲ್ಲಿ ನಡೆದ ಸಾರ್ವಜನಿಕ ಸಭೆ,ರೋಡ್ ಶೋ,ಕಾರ್ನರ್ ಮೀಟಿಂಗ್ ಗೆ ನಿರೀಕ್ಷೆ ಮೀರಿ ಜನಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯೂ ಅಷ್ಟೇ ಕಾಲಿಗೆ ಚಕ್ರ ಕಟ್ಟಿದಂತೆ ಇಡೀ ಮಂಗಳೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭೆ ಕ್ಷೇತ್ರಗಳಲ್ಲಿ ಓಡಾಡಿ ಮತಯಾಚಿಸಿದ್ದಾರೆ.
ಇದೀಗ ಪ್ರಚಾರ, ಮತದಾನ ಎಲ್ಲ ಮುಗಿದು ಹೋದ ಅಧ್ಯಾಯ. ಇನ್ನೇನಿದ್ದರೂ ಫಲಿತಾಂಶ ಅಷ್ಟೇ.ಮತದಾನ ಮುಗಿದ ಮಾರನೇ ದಿನವೇ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಪತ್ರಿಕಾಗೋಷ್ಠಿ ಕರೆದು ಗೆಲುವು ನಮ್ಮದೇ ಎಂದು ಹೇಳಿಕೊಂಡಿದ್ದಾರೆ. ಗೆಲ್ಲಲ್ಲೆಂದೇ ಸ್ಪರ್ಧೆ ಮಾಡುವುದರಿಂದ ಅವರಿಬ್ಬರ ಹೇಳಿಕೆಯಲ್ಲೂ ತಪ್ಪಿಲ್ಲ. ಆದರೆ ಒಮ್ಮೆಗೆ ಇಬ್ಬರೂ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಕೂಡ ಗೋಡೆ ಬರಹದಷ್ಟೇ ಸ್ಪಷ್ಟ. ಒಬ್ಬರು ಗೆದ್ದರೆ, ಇನ್ನೊಬ್ಬರು ಸೋಲಲೇ ಬೇಕು.
ವಿಷಯ ಅದೇನೇ ಇರಲಿ, ಈಗ ಗೆಲ್ಲುವ ಅಭ್ಯರ್ಥಿ ಯಾರು ಎನ್ನುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಯಾಕೆಂದರೆ ಮತ ಎಣಿಕೆಗೆ ಇನ್ನೂ ಒಂದು ತಿಂಗಳಿಗೂ ಅಧಿಕ ಸಮಯವಿದೆ. ಹಾಗೆ ಫಲಿತಾಂಶದ ಕುತೂಹಲ ಜನರಲ್ಲಿ ಇಮ್ಮಡಿಯಾಗಿದೆ. ಈ ಸಲ ದ.ಕ. ಜಿಲ್ಲೆಯಲ್ಲಿ ಶೇ.77.56 ಮತದಾನವಾಗಿದೆ.
ಇದು ಕಳೆದ ಚುನಾವಣೆಗೆ ಹೋಲಿಸಿದರೆ ಕೇವಲ ಶೇ.0.34 ಮಾತ್ರ ಇಳಿಕೆಯಾಗಿದೆ ಅಷ್ಟೇ. ಬಿಜೆಪಿ ಹಾಗೂ ಕಾಂಗ್ರೆಸ್ಸಿನ ವಾದ ಏನೇ ಇದ್ದರೂ ಜನಸಾಮಾನ್ಯರ ಪ್ರಕಾರ ಬಹುತೇಕ ಮಂದಿ ಈ ಬಾರಿ ಕಾಂಗ್ರೆಸಿಗೆ ಅವಕಾಶ ಹೆಚ್ಚು ಇದ್ದ ಹಾಗೆ ಕಾಣುತ್ತದೆ. ಆದರೆ, ಮತ್ತೆ ಹೇಳಲು ಬರುವುದಿಲ್ಲ, ಬಿಜೆಪಿ ಗೆದ್ದರೂ ಗೆಲ್ಲಬಹುದು ಎಂದು ರಿಪೋರ್ಟರ್ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

 

ಇನ್ನೂ ಕೆಲವರು ಈ ಬಾರಿ ಬಿಜೆಪಿಗೆ ಸ್ವಲ್ಪ ಕಷ್ಟ ಇದೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟ ತರಹ ಮಾತನಾಡುತ್ತಾರೆ. ಈ ತರಹದ ಎರಡೂ ಹೇಳಿಕೆಗಳು ಏನನ್ನು ಸೂಚಿಸುತ್ತದೆ ಎನ್ನುವುದು ನಿಮಗೆ ಸ್ಪಷ್ಟವಾಗಬಹುದು.
ವಾಸ್ತವದಲ್ಲಿ ಬಿಜೆಪಿ ಪ್ರಚಾರ ಆರಂಭದಲ್ಲೇ ಸ್ವಲ್ಪ ಡಲ್ ಹೊಡೆದಂಗೆ ಇತ್ತು. ಪ್ರಧಾನಿ ಮೋದಿ ಅವರ ರೋಡ್ ಶೋ ಬಿಟ್ಟರೆ ದೊಡ್ಡ ಮಟ್ಟದ ಪ್ರಚಾರ ಕೇಸರಿ ಪಾಳಯದಲ್ಲಿ ನಡೆದಿಲ್ಲ. ಹಾಗೆಂತ ಕಾಂಗ್ರೆಸ್ ಕಡೆಯಿಂದಲೂ ಸ್ಟಾರ್ ಕ್ಯಾಂಪೇನರ್ ಯಾರೂ ಬಂದಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರ ಪ್ರಚಾರದ ಮುಂದೆ ಚೌಟರ ವೇಗ ತಗ್ಗಿದಂತೆ ಕಾಣುತ್ತಿತ್ತು ಎನ್ನುತ್ತಾರೆ. ಬಿಜೆಪಿಯ ಕೆಲವು ಕಾರ್ಯಕರ್ತರು ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ.ಇನ್ನು ವಾಸ್ತವಾಂಶಕ್ಕೆ ಬಂದರೆ ಪದ್ಮರಾಜ್ ಅವರು ಹೋದ ಕಡೆಗಳಲ್ಲೆಲ್ಲ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಸಾರ್ವಜನಿಕ ಸಭೆ ಇರಲಿ, ರೋಡ್ ಶೋ ಇರಲಿ, ಕಾರ್ನರ್ ಮೀಟಿಂಗೇ ಇರಲಿ ಭಾರಿ ಸಂಖ್ಯೆಯಲ್ಲಿ ಮತದಾರರು ಜಮಾಯಿಸುತ್ತಿದ್ದರು. ಇದೆಲ್ಲ ಓಟು ಆಗಿ ಕನ್ವರ್ಟ್ ಆದರೆ ಕಾಂಗ್ರೆಸ್ ಗೆ ಗೆಲುವಿನ ಅವಕಾಶ ಜಾಸ್ತಿಯಾಗುತ್ತದೆ. ಸುದ್ದಿವಾಹಿನಿಯೊಂದರ ಪಬ್ಲಿಕ್ ಡಿಬೇಟಿನಲ್ಲಿಯೇ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಹೇಳುತ್ತಾರೆ. ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಕೊರಗಜ್ಜನಿಗೆ ನ್ಯಾಯ ಕೊಡಿಸುವ ಮಾತು ಆಡಿರುವುದು ದೈವಾರಾಧಕರಾದ ಹೆಚ್ಚಿನ ತುಳುವರಲ್ಲಿ ಅಸಮಾಧಾನ ಉಂಟು ಮಾಡಿದೆ.ಸಾಮಾಜಿಕ ಜಾಲತಾಣದಲ್ಲಿ ಇದು ಟ್ರೋಲ್ ಕೂಡ ಆಗಿತ್ತು.ಇದು ಆರಂಭದಲ್ಲೇ ದೊಡ್ಡ ಹೊಡೆತ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇದೇ ಪಬ್ಲಿಕ್ ಡಿಬೆಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಬಿಜೆಪಿಯ ಆರೋಪಗಳಿಗೂ ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ.ಇದೆಲ್ಲ ಬಿಜೆಪಿಗೆ ಹೊಡೆತವಾದರೆ,ಕಾಂಗ್ರೆಸ್ಸಿಗೆ ಪ್ಲಸ್ ಆಗಿದೆ.
ಇನ್ನು ಫಲಿತಾಂಶ ಸಂಬಂಧಿಸಿದಂತೆ ಹಲವೆಡೆ ಫ್ರೆಂಡ್ಲಿ ಬೆಟ್ಟಿಂಗ್ ಶುರುವಾಗಿದೆ.ಗೆಳೆಯರೊಳಗೆ ಬೆಟ್ಟಿಂಗ್,ಅಣ್ಣ- ತಮ್ಮಂದಿರೊಳಗೆ ಬೆಟ್ಟಿಂಗ್, ಕುಟುಂಬದೊಳಗೆ ಬೆಟ್ಟಿಂಗ್,ಸಂಬಂಧಿಕರೊಳಗೆ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.ಹಾಗಾದರೆ ಆ ಗೆಲ್ಲುವ ಅಭ್ಯರ್ಥಿ ಯಾರು?

ಇತ್ತೀಚಿನ ಸುದ್ದಿ

ಜಾಹೀರಾತು