5:03 AM Wednesday8 - May 2024
ಬ್ರೇಕಿಂಗ್ ನ್ಯೂಸ್
ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ…

ಇತ್ತೀಚಿನ ಸುದ್ದಿ

ಪ್ರಧಾನಿ ಮೋದಿ ಇಂದು ಬೆಳಗಾವಿಗೆ: ಕುಂದನಗರಿಯಲ್ಲೇ ವಾಸ್ತವ್ಯ; ಬಿಗಿ ಭದ್ರತೆ, ವಾಹನ ಸಂಚಾರ ಬದಲಾವಣೆ

27/04/2024, 12:07

ಬೆಳಗಾವಿ(reporterkarnataka.com): ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಧಾನಿಯವರು ಶನಿವಾರ ಬೆಳಗಾವಿಗೆ ಆಗಮಿಸಿ ಭಾನುವಾರ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಶನಿವಾರ ಸಂಜೆ ಹಾಗೂ ಭಾನುವಾರ ಮಧ್ಯಾಹ್ನದವರೆಗೆ ಬೆಳಗಾವಿ ನಗರದ ಆಯ್ದ ಮಾರ್ಗಗಳಲ್ಲಿ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಏಪ್ರಿಲ್ 27ರಂದು ಸಾಯಂಕಾಲ ಬಾಗಲಕೋಟ ರಸ್ತೆ ಹಾಗೂ ಸುವರ್ಣ ವಿಧಾನಸೌಧದಿಂದ ಹೊನಗಾವರೆಗಿನ ರಾಷ್ಟ್ರೀಯ ಹೆದ್ದಾರಿ, ಎರಡೂ ಬದಿಯ ಸರ್ವಿಸ್ ರಸ್ತೆಗಳು ಹಾಗೂ ಏ 28ರಂದು ಹೊನಗಾ ದಿಂದ ಸುವರ್ಣ ವಿಧಾನಸೌಧ ವರೆಗಿನ ರಾಷ್ಟ್ರೀಯ ಹೆದ್ದಾರಿ, ಎರಡೂ ಬದಿಯ ಸರ್ವಿಸ್ ರಸ್ತೆಗಳು ಹಾಗೂ ಬಾಗಲಕೋಟ ರಸ್ತೆಗಳ ಮಾರ್ಗಗಳಲ್ಲಿ ಸಾರ್ವಜನಿಕ ಸಂಚಾರದಲ್ಲಿ ತೊಡಕುಂಟಾಗುವ ಹಿನ್ನೆಲೆಯಲ್ಲಿ ಬದಲಿ ಮಾರ್ಗಗಳನ್ನು ಬಳಸಿಕೊಳ್ಳುವುದು.
*ಕೊಲ್ಹಾಪೂರ, ನಿಪ್ಪಾಣಿ ಕಡೆಗಳಿಂದ ಬೆಳಗಾವಿ ನಗರ ಕಡೆಗೆ ಬರುವ ಎಲ್ಲ ವಾಹನಗಳು ಸಂಕೇಶ್ವರದಿಂದ ಹುಕ್ಕೇರಿ ಮಾರ್ಗ ಬಳಸಿಕೊಳ್ಳುವುದು.
*ಎಂಕೆ ಹುಬ್ಬಳ್ಳಿ, ಧಾರವಾಡ ಕಡೆಗಳಿಂದ ಬೆಳಗಾವಿ ನಗರ ಮೂಲಕ ಸಂಚರಿಸುವ ವಾಹನಗಳು ನೇಗಿನಹಾಳ, ನೇಸರಗಿ/ಬೆಂಡಿಗೇರಿ ಕ್ರಾಸ್ ಮಾರ್ಗಗಳನ್ನು ಬಳಸಿಕೊಳ್ಳುವುದು.
*ನಿಪ್ಪಾಣಿ, ಕೊಲ್ಹಾಪೂರ, ಯಮಕನಮರ್ಡಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು ರಾಮ ಡಾಭಾ ಹತ್ತಿರ ಬಲತಿರುವು ಪಡೆದುಕೊಂಡು ಮುಂದೆ ಸಂಚರಿಸುವುದು.
*ಬಾಗಲಕೋಟ ಕಡೆಯಿಂದ ಬೆಳಗಾವಿ ನಗರ ಕಡೆಗೆ ಸಂಚರಿಸುವ ವಾಹನಗಳು ನೇಸರಗಿ ಗೋಕಾಕ ಮಾರ್ಗವಾಗಿ ಸಂಚರಿಸುವುದು.
* ಬಾಗಲಕೋಟ, ರಾಯಚೂರು, ಯರಗಟ್ಟಿ ಮಾರ್ಗಗಳಲ್ಲಿ ಸಂಚರಿಸುವ ವಾ.ಕ.ರ.ಸಾ.ಸಂಸ್ಥೆಯ ಬಸ್‌ಗಳು ಕನಕದಾಸ ಸರ್ಕಲ್, ಕಣಬರಗಿ, ಖನಗಾಂವ ಸುಳೇಬಾವಿ, ಮಾರಿಹಾಳ ಪೊಲೀಸ್ ಠಾಣಾ ಕ್ರಾಸ್ ಮೂಲಕ ಬಾಗಲಕೋಟ ರಸ್ತೆಗೆ ಸಂಚರಿಸುವುದು.
*ಬೆಳಗಾವಿ ನಗರದಿಂದ ಯಡಿಯೂರಪ್ಪ ರಸ್ತೆ ಮೂಲಕ ಅಲಾರವಾಡ ಬ್ರಿಡ್ಜ್ ಕಡೆಗೆ ಸಂಚರಿಸುವ ವಾಹನಗಳು ಬದಲಿ ಮಾರ್ಗ ಬಳಸಿಕೊಳ್ಳುವುದು.
ಏ.27ರಂದು ಸಂಜೆ ಹಾಗೂ 28 ರಂದು ಮದ್ಯಾಹ್ನದವರೆಗೆ ಎಲ್ಲ ಭಾರಿ ಹಾಗೂ ಮಧ್ಯಮ ಗಾತ್ರದ ವಾಹನಗಳು ಬೆಳಗಾವಿ ನಗರದಲ್ಲಿ ಸಂಚರಿಸುವ ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದು.

ಇತ್ತೀಚಿನ ಸುದ್ದಿ

ಜಾಹೀರಾತು