8:50 AM Friday24 - May 2024
ಬ್ರೇಕಿಂಗ್ ನ್ಯೂಸ್
ಬುದ್ಧ ಪೂರ್ಣಿಮೆ: ದಕ್ಷಿಣ ಕಾಶಿ ನಂಜನಗೂಡು ದೇಗುಲಕ್ಕೆ ಹರಿದು ಬಂದ ಭಕ್ತ ಸಾಗರ;… ಕುಡುಕ ಪತಿಯಿಂದ ಪತ್ನಿಯ ಬರ್ಬರ ಹತ್ಯೆ: ಮಕ್ಕಳ ಕಣ್ಣೆದುರೇ ಸಲಾಕೆಯಿಂದ ಹೊಡೆದು ಕೊಲೆ… ಪೂರ್ವ ಮುಂಗಾರು: ದ.ಕ., ಉಡುಪಿ ಸಹಿತ ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ… ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:… ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಬಿಜೆಪಿಗೆ ‘ಅಬ್‌ ಕೀ ಬಾರ್‍‌ 4 ಸೌ ಪಾರ್’ ನಿಶ್ಚಿತ: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ

20/04/2024, 12:55

ಮಂಗಳೂರು(reporterkarnataka.com): ದೇಶದಲ್ಲೀಗ ಲೋಕತಂತ್ರದ ಮಹಾಪರ್ವ ನಡೆಯುತ್ತಿದೆ. ಮೊದಲ ಹಂತದ ಚುನಾವಣೆ ನಡೆದಿದೆ. ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡುತ್ತೇವೆ ಎಂದು ದೇಶದ ಜನತೆ ದೃಢ ನಿರ್ಧಾರ ಮಾಡಿದ್ದಾರೆ. ಈ ಬಾರಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಎನ್‌ಡಿಎ ಗೆದ್ದು ಬಿಜೆಪಿಗೆ 370 ಸ್ಥಾನಗಳು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸುಪ್ರೀಂ ಕೋರ್ಟ್ ವಕೀಲರಾದ ಗೌರವ್ ಭಾಟಿಯಾ ಭರವಸೆ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತದ ಜನತೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಬೆಂಬಲಿಸಲು ಸಿದ್ಧರಾಗಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಅಭಿವೃದ್ಧಿಯ ಸಮಾನ ಫಲವನ್ನು ನೀಡುತ್ತಿರುವ ಮೋದಿ ಸರಕಾರ ಮತ್ತೊಮ್ಮೆ ಕೇಂದ್ರದಲ್ಲಿ ಬರಬೇಕಾಗಿದೆ. ಕರ್ನಾಟಕದಲ್ಲಿ ಎಲ್ಲ 28 ಸ್ಥಾನಗಳನ್ನೂ ಬಿಜೆಪಿ ಮತ್ತು ಎನ್‌ಡಿಎ ಗೆಲ್ಲುವುದು ಖಚಿತ. ಕಳೆದ 10 ವರ್ಷಗಳಲ್ಲಿ ಭಾರತ ಯಾವ ರೀತಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆದಿದೆ ಎಂಬುದನ್ನು ಎಲ್ಲರೂ ಕಂಡಿದ್ದಾರೆ. ಪ್ರತಿಯೊಬ್ಬ ಪ್ರಜೆಯನ್ನೂ ಸಬಲೀಕರಣಗೊಳಿಸುವ ಯೋಜನೆಗಳನ್ನು ಪ್ರಧಾನಿ ಮೋದಿ ತಂದಿದ್ದಾರೆ. 12 ಕೋಟಿ ಶೌಚಾಲಯಗಳ ನಿರ್ಮಾಣ, 12 ಕೋಟಿಗೂ ಅಧಿಕ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. 10.5 ಕೋಟಿ ಗ್ಯಾಸ್ ಸಂಪರ್ಕಗಳನ್ನು ಉಜ್ವಲಾ ಯೋಜನೆಯಡಿ ಉಚಿತವಾಗಿ ಒದಗಿಸಲಾಗಿದೆ ಎಂದು ಅವರು ನುಡಿದರು.
ದಕ್ಷಿಣ ಕನ್ನಡದಲ್ಲಿ 1.5 ಲಕ್ಷ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ವರ್ಷಕ್ಕೆ 6,000 ರೂ.ಗಳ ಲಾಭ ಪಡೆಯುತ್ತಿದ್ದಾರೆ. 5 ಲಕ್ಷ ಹೆಲ್ತ್‌ ಕಾರ್ಡ್‌ ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 5 ಸಾವಿರ ಮನೆಗಳು ಹಾಗೂ ದೇಶದಲ್ಲಿ ಒಟ್ಟಾರೆ 4 ಕೋಟಿ ಮನೆಗಳ ನಿರ್ಮಾಣ ಮಾಡಲಾಗಿದೆ. ಪ್ರತಿ ಕುಟುಂಬಕ್ಕೂ ತನ್ನದೇ ಸ್ವಂತ ಮನೆ ಇರಬೇಕು ಎಂಬ ಕಲ್ಪನೆಯಡಿ ಈ ಯೋಜನೆ ರೂಪಿಸಲಾಗಿದೆ. ಅದರಂತೆ 1.5 ಲಕ್ಷ ಶೌಚಾಲಯಗಳನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಭಾಟಿಯಾ ಪ್ರಸ್ತಾಪಿಸಿದರು.
ಬಿಜೆಪಿ ಸಂಕಲ್ಪ ಪತ್ರದಲ್ಲಿ – ಮುಂದಿನ 5 ವರ್ಷಗಳ ಕಾಲ ಉಚಿತ ರೇಷನ್ ಮುಂದುವರಿಸುವ ವಾಗ್ದಾನ ಮಾಡಲಾಗಿದೆ. ಇದು ಸಾಮಾನ್ಯ ಜನರಿಗೆ ಇರುವ ನಮ್ಮ ಬದ್ಧತೆ. ಮಹಿಳೆಯರಿಗಾಗಿ- 3 ಕೋಟಿ ಲಖ್‌ಪತಿ ದೀದಿ ಖಾತ್ರಿ ಒದಗಿಸಲಾಗುವುದು. ಹಿಂದಿನ 10 ವರ್ಷಗಳಲ್ಲಿ ಯಾವ ಬಗೆಯ ಸಕಾರಾತ್ಮಕ ಕಾರ್ಯಗಳಾಗಿವೆ. ಮುಂದಿನ 25 ವರ್ಷಗಳ ಕಾಲದ ದಿಕ್ಸೂಚಿ ರೋಡ್ ಮ್ಯಾಪ್ ರೂಪಿಸಲಾಗಿದೆ ಎಂದು ಭಾಟಿಯಾ ಹೇಳಿದರು.
ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಜನರಲ್ಲಿ ಮೂಡಿರುವ ವಿಶ್ವಾಸ, ಉಜ್ವಲ ಭವಿಷ್ಯದ ಭರವಸೆಯೇ ಮೂರನೇ ಬಾರಿಗೆ ನರೇಂದ್ರ ಮೋದಿ ಕೇಂದ್ರದಲ್ಲಿದ್ದರೆ ಉತ್ತಮ ಎಂಬ ಭಾವನೆ ಮೂಡಿದೆ. ಎಲ್ಲರಿಗೂ ಸಮಾನ ಅಭಿವೃದ್ಧಿಯ ಭರವಸೆ ಮೂಡಿದೆ ಎಂದು ಅವರು ನುಡಿದರು.
*ಐದೂವರೆ ಮುಖ್ಯಮಂತ್ರಿಗಳು:*
ಕರ್ನಾಟಕದಲ್ಲಿ ಐದೂವರೆ ಮುಖ್ಯಮಂತ್ರಿಗಳಿದ್ದಾರೆ. ಈ ಐದೂವರೆ ಮುಖ್ಯಮಂತ್ರಿಗಳು ಯಾರ್ಯಾರು ಗೊತ್ತೇ…? ಜನರ ಹಿತಾಸಕ್ತಿ ಕಾಪಾಡುವ ಬದಲು ಸಿಎಂ ಕುರ್ಚಿಗೆ ಕಾದು ನಿಂತಿರುವ ಡಿ.ಕೆ ಶಿವಕುಮಾರ್, ಜಿ, ಪರಮೇಶ್ವರ್, ಪ್ರಿಯಾಂಕ ಖರ್ಗೆ (ಸೂಪರ್ ಸಿಎಂ), ತಂದೆ ಕಾಂಗ್ರೆಸ್‌ ಅಧ್ಯಕ್ಷರಾಗಿರವುದರಿಂದ ನಾನು ಸೂಪರ್ ಸಿಎಂ ಆದರೆ ತಪ್ಪೇನು? ಎಂಬ ಭಾವನೆ ಅವರದ್ದು. ನಾಲ್ಕನೇ ಸಿಎಂ ಡಾ ಯತೀಂದ್ರ. ಐದನೆಯವರು ರಣದೀಪ್ ಸುರ್ಜೇವಾಲ. ಇವರೆಲ್ಲ ಮುಖ್ಯಮಂತ್ರಿಗಿಂತ ತಾವು ಮೇಲೆ ಎಂದುಕೊಂಡವರು. ಇನ್ನು ಕೊನೆಯದಾಗಿ ಅರ್ಧ ಸಿಎಂ ಆಗಿರುವವವರು ಸಿದ್ದರಾಮಯ್ಯ. ಈ ಅರ್ಧ ಸಿಎಂ ಕೆಲಸ ಮಾಡುವುದಿಲ್ಲ ಎಂದು ಭಾಟಿಯಾ ಟೀಕಿಸಿದರು.
ದುಃಖದ ಸುದ್ದಿ
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್‍‌ ಒಬ್ಬರ ಪುತ್ರಿಯನ್ನು ಫಯಾಜ್ ಎಂಬಾ ಇರಿದು ಹತ್ಯೆ ಮಾಡಿದ ಘಟನೆ ಅತ್ಯಂತ ದುಃಖಕರ. ಬಹುಸಂಖ್ಯಾತ ಹಿಂದೂಗಳನ್ನು ದ್ವೇಷಿಸುವ , ಅಲ್ಪಸಂಖ್ಯಾತ ತುಷ್ಟೀಕರಣದ ರಾಜಕೀಯದಿಂದಾಗಿ ಅಪರಾಧಿ ಶಕ್ತಿಗಳು ವಿಜೃಂಭಿಸುತ್ತಿವೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಕಾಂಗ್ರೆಸ್‌ನ ನೀತಿಗಳು, ಅದರ ನಾಯಕತ್ವ, ವಿಷಯಗಳ ಗಂಭೀರತೆಯನ್ನು ಕಡೆಗಣಿಸುವುದು
ತಮ್ಮ ಪುತ್ರಿಯ ಹತ್ಯೆಗೆ ಕಾರಣವಾದ ಈ ಕೃತ್ಯಕ್ಕೆ ರಾಜ್ಯ ಸರಕಾರವನ್ನೇ ದೂಷಿಸಬೇಕಾಗಿದೆ ಎಂದು ಸ್ವತಃ ಕಾಂಗ್ರೆಸ್‌ನ ಆ ಕಾರ್ಪೊರೇಟರ್ ಹೇಳುತ್ತಾರೆ. ಅಂದರೆ ರಾಜ್ಯದ ಪರಿಸ್ಥಿತಿ ಎಲ್ಲಿಗೆ ತಲುಪಿದೆ ನೀವೇ ಊಹಿಸಿ. ಕಾಂಗ್ರೆಸ್ ಎಂದರೆ ಕರಪ್ಟ್‌, ಕಮ್ಯುನಲ್ ಮತ್ತು ಕ್ರಿಮಿನಲ್ (3 ಸಿ) ಸರಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ವೈಖರಿಯಲ್ಲಿ ಕಾಂಗ್ರೆಸ್‌ಗೆ ಈ ಹಣೆಪಟ್ಟಿ ಅಂಟಿದೆ. ಹುಬ್ಬಳ್ಳಿಯಲ್ಲಿ ಪುತ್ರಿಯನ್ನು ಕಳೆದುಕೊಂಡ ಕಾರ್ಪೊರೇಟರ್ ಬೆಂಬಲಕ್ಕೆ ಬಿಜೆಪಿ ನಿಲ್ಲುತ್ತದೆ. ಆ ಕುಟುಂಬಕ್ಕೆ ತ್ವರಿತ ನ್ಯಾಯ ಒದಗಿಸಬೇಕು. ಆದರೆ ಕಾಂಗ್ರೆಸ್ ಕ್ರಿಮಿನಲ್‌ಗಳ ರಕ್ಷಣೆಗೆ ನಿಂತಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ಆಡಳಿತ. ಪುಲ್ವಾಮಾ ದಾಳಿಯಾದಾಗ ಬಾಲಾಕೋಟ್ ಏರ್‍‌ಸ್ಟ್ರೈಕ್‌ ಮಾಡಿ ಉಗ್ರರನ್ನು ಮಟ್ಟ ಹಾಕಿದ್ದು ಮೋದಿ ಸರಕಾರ. ಆದರೆ ಕಾಂಗ್ರೆಸ್ ಅದಕ್ಕೆ ಸಾಕ್ಷಿ ಕೇಳುವ ಮೂಲಕ ಸೇನೆಯನ್ನು ಅವಮಾನಿಸಿತು.
ರಾಷ್ಟ್ರೀಯ ಸುರಕ್ಷತೆಯೇ ಎಲ್ಲಕ್ಕಿಂತ ಮುಖ್ಯ ಎಂದು ಬಿಜೆಪಿ ಸರಕಾರ ಪಿಎಫ್‌ಐ ಅನ್ನು ನಿಷೇಧಿಸಿತು. ಆದರೆ ಕೇವಲ 50,000 ವೋಟುಗಳಿಗಾಗಿ ಕಾಂಗ್ರೆಸ್ ಪಕ್ಷ ಭಾರತ ವಿರೋಧಿ ಶಕ್ತಿಗಳ ಜತೆ ಕೈ ಜೋಡಿಸುತ್ತದೆ. ನಿಷೇಧಿತ ಪಿಎಫ್‌ಐಯ ರಾಜಕೀಯ ಸಂಘಟನೆ ಎಸ್‌ಡಿಪಿಐ. ಅದ ಬೆಂಬಲ ಯಾಚಿಸುತ್ತಿದೆ ಕಾಂಗ್ರೆಸ್. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಈ ಬಗ್ಗೆ ಒಂದು ಮಾತೂ ಆಡುತ್ತಿಲ್ಲ. ಸೋನಿಯಾ ಗಾಂಧಿ ಮಾತನಾಡುತ್ತಿಲ್ಲ. ಬಹುಸಂಖ್ಯಾತ ಹಿಂದೂಗಳ ಮೇಲೆ ನಿಮಗೆ ದ್ವೇಷವಿರಬಹುದು. ಆದರೆ ಅಲ್ಪಸಂಖ್ಯಾತರ ತುಷ್ಟೀಕರಣದ ಚರಮ ಸೀಮೆಯನ್ನು ತಲುಪಿದ ಕಾಂಗ್ರೆಸ್‌ಗೆ ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ಎಲ್ಲಿದೆ ಕಾಳಜಿ? ವಿಧಾನ ಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವವರು ಕಾಂಗ್ರೆಸ್ ಬೆಂಬಲಿಗರು. ಭಾರತ್ ಮಾತಾ ಕಿ ಜೈ ಎಂದು ಹೇಳಲು ಕಾಂಗ್ರೆಸ್‌ಗೆ ನಾಚಿಕೆಯಾಗುತ್ತದೆ. ಆದರೆ ಪಾಕ್ ಜಿಂದಾಬಾದ್ ಎನ್ನಲು ಯಾವ ಆತಂಕವೂ ಇಲ್ಲ ಎಂದು ಭಾಟಿಯಾ ತರಾಟೆಗೆ ತೆಗೆದುಕೊಂಡರು.
ವಿಧಾನ ಸೌದದಲ್ಲಿ ನಡೆದ ಘಟನೆಗೆ ಕಾಂಗ್ರೆಸ್ ನಾಯಕತ್ವ ಬಾಯಿ ಮುಚ್ಚಿ ಕೂತಿದೆ. ಆರಂಭದಲ್ಲಿ ಸಿದ್ದರಾಮಯ್ಯ ಇಂತಹ ಘಟನೆ ನಡೆದಿರುವುದನ್ನೇ ಅಲ್ಲಗಳೆದರು. ಆದರೆ ವಿಧಿ ವಿಜ್ಞಾನ ಇಲಾಖೆಯ ವರದಿ ಬಂದ ಬಳಿಕ ಮೌನ ತಾಳಿದರು. ಕಾಂಗ್ರೆಸ್ ಸರಕಾರ ಸಮಾಜದಲ್ಲಿ ವಿಧ್ವಂಸಕತೆಯ ಬೀಜ ಬಿತ್ತುತ್ತಿದೆ. ರಾಮೇಶ್ವರಂ ಕೆಫೆಯ ಸ್ಫೋಟ ಇದಕ್ಕೆ ಮತ್ತೊಂದು ಉದಾಹರಣೆ. ಇದರ ಹಿಂದೆ ಬಹುದೊಡ್ಡ ಭಯೋತ್ಪಾದಕ ಸಂಚು ಇದೆ. ಎನ್‌ಐಎ ಪಶ್ಚಿಮ ಬಂಗಾಳದಿಂದ ಶಂಕಿತ ಉಗ್ರರನ್ನು ಬಂಧಿಸಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರ, ಪಶ್ಚಿಮ ಬಂಗಾಳದ ಟಿಎಂಸಿ ಸರಕಾರಗಳು ಈ ರಾಜ್ಯಗಳನ್ನು ಭಯೋತ್ಪಾದಕರನ್ನು ಪೋಷಿಸುವ ತಾಣಗಳಾಗಿ ಪರಿವರ್ತಿಸಿವೆ.
2024ರ ಲೋಕಸಭೆ ಚುನಾವಣೆಯ ಅತ್ಯಂತ ನಿರ್ಣಾಯಕ. ಜನತೆ ಬಹುಸಂಖ್ಯಾತ ಜನರ ಮೇಲೆ ವಿಷ ಕಾರುವ ಪಕ್ಷಗಳ ಬಗ್ಗೆ ಬೇಸತ್ತು ಹೋಗಿದ್ದಾರೆ. ಸಂವಿಧಾನದ ಪ್ರಕಾರ ನಾವೆಲ್ಲರೂ ಸಮಾನರು. ಪ್ರತಿ ಪ್ರಜೆಯೂ ಸಬಲೀಕರಣವಾಗಬೇಕು. ಅಂತಹ ಸಹೋದರತೆಯನ್ನು ತುಷ್ಟೀಕರಣದ ನೀತಿ ಅನುಸರಿಸುವ ಕಾಂಗ್ರೆಸ್ ಮತ್ತು ಅನ್ಯ ಪಕ್ಷಗಳು ಗಾಳಿಗೆ ತೂರಿವೆ ಎಂದು ಭಾಟಿಯಾ ಆರೋಪಿಸಿದರು.
ಭಾರತ ಯುವಜನರ ಆಶೋತ್ತರಗಳಿಗೆ ಅನುಗುಣವಾಗಿ ಮುಂದುವರಿಯಬೇಕು. ಕಾಂಗ್ರೆಸ್ ವಂಶಪಾರಂಪರ್ಯ ರಾಜಕಾರಣದ ಸಂಕೇತವಾದರೆ ಭಾರತೀಯ ಜನತಾ ಪಕ್ಷ ಅರ್ಹತೆ (ಮೆರಿಟ್) ಧಾರದಲ್ಲಿ ಕಾರ್ಯ ನಿರ್ವಹಿಸುವ ಪಕ್ಷ. ಮೋದಿಯವರ ಹೃದಯದಲ್ಲಿ ಕರ್ನಾಟಕವಿದೆ. ಕರ್ನಾಟಕದ ಹೃದಯದಲ್ಲಿ ಮೋದಿಯವರು ಇದ್ದಾರೆ ಎಂದು ಹೇಳಿದರು.
*ನಕ್ಸಲರನ್ನು ಹುತಾತ್ಮರೆಂದು ಕರೆದ ಕಾಂಗ್ರೆಸ್:*
ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ನಕ್ಸಲರನ್ನು ಹತ್ಯೆ ಮಾಡಿದರೆ ಕಾಂಗ್ರೆಸ್‌ಗೆ ಕಳವಳ ಶುರುವಾಗುತ್ತದೆ. ಭಾರತ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತದೆ. ಹಾಗಾಗಿಯೇ ಅವರನ್ನು ಹುತಾತ್ಮರೆಂದು ಬಣ್ಣಿಸುವ ದುಸ್ಸಾಹಸ ಮಾಡಿದೆ. ನಕ್ಸಲರು ಹುತಾತ್ಮರಾದರೆ ಭದ್ರತಾ ಪಡೆಯ ಯೋಧರನ್ನು ಏನೆಂದು ಕರೆಯುತ್ತದೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಎಂಎಲ್‌ಸಿ ಮೋನಪ್ಪ ಭಂಡಾರಿ ಹಾಗೂ ಬಂಟ್ವಾಳದ ಪ್ರಭಾರಿ ಜಗದೀಶ್ ಶೇಣವ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು