12:11 AM Wednesday1 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಇದು ರಾಷ್ಟ್ರೀಯ ಚುನಾವಣೆ; ದೇಶದ ಭದ್ರತೆಯೇ ಇಲ್ಲಿ ಮುಖ್ಯ: ಶಾಸಕ ಉಮಾನಾಥ ಕೋಟ್ಯಾನ್

13/04/2024, 19:26

ಮಂಗಳೂರು(reporterkarnataka.com): ಈ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ. ಸ್ಥಳೀಯ ಚುನಾವಣೆಗಳ ವಿಚಾರಗಳೇ ಬೇರೆ. ರಾಷ್ಟ್ರೀಯ ಚುನಾವಣೆಯ ವಿಚಾರಗಳೇ ಬೇರೆ. ರಾಷ್ಟ್ರೀಯತೆಯ ಬಗ್ಗೆ, ದೇಶದ ನಾಯಕತ್ವದ ಬಗ್ಗೆ ಚಿಂತನೆ ಮಾಡಿ ಮತದಾನ ಮಾಡುವ ಸಂದರ್ಭವಿದು. ಇಲ್ಲಿ ಜಾತಿ- ಧರ್ಮದ ಆಧಾರದಲ್ಲಿ ಭಿನ್ನತೆಗಳಿಗೆ ಅವಕಾಶವೇ ಇಲ್ಲ ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ರಾಷ್ಟ್ರೀಯ ವಿಚಾರದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಹಿತವೇ ಪರಮೋಚ್ಚವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರೀ ಬಹುಮತದೊಂದಿಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಬರುವುದು ಸುನಿಶ್ಚಿತ ಎಂದು ಅವರು ನುಡಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಅಭ್ಯರ್ಥಿಗಿಂತಲೂ ಪಕ್ಷ ಮತ್ತು ಪಕ್ಷದ ನಾಯಕತ್ವ ಬಹಳ ಪ್ರಮುಖ ಸ್ಥಾನ ಪಡೆಯುತ್ತದೆ. ಸ್ವಾತಂತ್ರ್ಯಾನಂತರ 60 ವರ್ಷಗಳ ಕಾಲ ದೇಶವನ್ನಾಳಿದ್ದು ಕಾಂಗ್ರೆಸ್. ಆ ಸಂದರ್ಭದಲ್ಲಿ ಕಾಂಗ್ರೆಸ್ನಿಂದ ಒಂದು ಮರವನ್ನು ಅಭ್ಯರ್ಥಿಯಾಗಿ ನಿಲ್ಲಿಸಿದರೂ ಗೆದ್ದು ಬರುತ್ತದೆ ಎನ್ನುವ ಪರಿಸ್ಥಿತಿ ಇತ್ತು. ಇದಕ್ಕೆ ಒಂದು ಕಾರಣ ಅಂದಿನ ನಮ್ಮ ಹಿರಿಯರಿಗೆ ಇದ್ದ ವಿದ್ಯಾಭ್ಯಾಸದ ಕೊರತೆ. ಇನ್ನೊಂದು ಕಾರಣ ಚುನಾವಣೆ ಸಂದರ್ಭ ಮರುಳು ಮಾಡಿ, ಮೋಸ ಮಾಡಿ ಮತ ಪಡೆಯುತ್ತಿದ್ದ ವಿಧಾನ. ಅಂತಹ ಪರಿಸ್ಥಿತಿ ಬದಲಾಗಿದೆ.
ಕಳೆದ 40 ವರ್ಷಗಳಿಂದ ದ.ಕ ಜಿಲ್ಲೆಯ ಜನತೆ ದೇಶಕ್ಕಾಗಿ ಮತ ಹಾಕುತ್ತಾ ಇದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಇದ್ದಾರೆ. ಈಗ ಸಾಮಾನ್ಯ ಕಾರ್ಯಕರ್ತ ಬಿಜೆಪಿಯಿಂದ ನಿಂತರೂ ಗೆಲ್ಲುವ ಸನ್ನಿವೇಶ ಸೃಷ್ಟಿಯಾಗಿದೆ. ಜನಾರ್ದನ ಪೂಜಾರಿಯವರಂತಹ ಒಬ್ಬ ಹಿರಿಯ ಮುತ್ಸದ್ದಿಯ ವಿರುದ್ಧ ಆಗ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದ ನಳಿನ್ ಕುಮಾರ್ ಕಟೀಲು ಗೆದ್ದಿದ್ದಾರೆ ಎಂದು ಕೋಟ್ಯಾನ್ ವಿವರಿಸಿದರು.
ಧನಂಜಯ ಕುಮಾರ್ 4 ಬಾರಿ, ಡಿ.ವಿ ಸದಾನಂದ ಗೌಡರು ಒಂದು ಬಾರಿ ಹಾಗೂ ನಳಿನ್ ಕುಮಾರ್ ಕಟೀಲು ಮೂರು ಬಾರಿ ಗೆದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರ ಕೋಟೆಯಾಗಿ ಬೆಳೆಸಿದ್ದಾರೆ. ಪ್ರತಿಕೂಲ ಸನ್ನಿವೇಶಗಳಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿದ್ದಾರೆ. ಈ ಜಿಲ್ಲೆಯ ಜನತೆ ಬುದ್ಧಿವಂತರು, ದೇಶಕ್ಕಾಗಿ ದೇಶದ ಹಿತಕ್ಕಾಗಿ ಮತದಾನ ಮಾಡುವವರು ಎಂಬುದು ಸಾಬೀತಾಗಿದೆ.
ಕಳೆದ 10 ವರ್ಷಗಳಲ್ಲಿ ಬಿಜೆಪಿ ಹುಟ್ಟಿಕೊಂಡಿತು ರಾಜಕೀಯ ಪಕ್ಷವಾಗಿ, ಇವತ್ತು ಏಕ್ ದೇಶ ಮೇ ಏಕ್ ಪ್ರಧಾನ್, ಏಕ್ ವಿಧಾನ್- ಇರಬೇಕು ಎನ್ನುವ ಧ್ಯೇಯದೊಂದಿಗೆ ಜನಸಂಘ ಹುಟ್ಟಿಕೊಂಡಿತು. ಅಂದು ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಂಡಿದೆ. ಬಹುಮತದಿಂದ ಆಡಳಿತಕ್ಕೆ ಬಂದಾಗ ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಹಂತ ಹಂತವಾಗಿ ಈಡೇರಿಸಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಆರ್ಟಿಕಲ್ 370 ರದ್ದು ಮಾಡಿರುವುದು,, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆ- ಇವೆಲ್ಲ ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಕಾರ್ಯಗಳನ್ನು ಇಂದು ಪ್ರಧಾನಿ ಮೋದಿ ಮಾಡಿ ಮುಗಿಸಿದ್ದಾರೆ. ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ ಈಡೇರಿಸಲಾಗಿದೆ ಎಂದು ಕೋಟ್ಯಾನ್ ಹೇಳಿದರು.
ಭಾರತದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವವರು, ಇಲ್ಲಿಯೇ ಹುಟ್ಟಿ ಬೆಳೆದು., ಇಲ್ಲಿನ ಅನ್ನ ತಿಂದುಕೊಂಡು ಇಲ್ಲಿಯೇ ಬಾಂಬ್ ಹಾಕುವ ಉಗ್ರರನ್ನು ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ಇಂತಹ ಪರಿಸ್ಥಿತಿಯನ್ನು ಮಟ್ಟಹಾಕಿ ದೇಶದ ಭದ್ರತೆಯನ್ನು ಗಟ್ಟಿಗೊಳಿಸಿದವರು ಪ್ರಧಾನಿ ನರೇಂದ್ರ ಮೋದಿ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ಈದೇಶದ ವೈಭವವನ್ನು ಉತ್ತುಂಗಕ್ಕೆ ಏರಿಸಬೇಕೆಂದು ದೇಶದ ಜನ ಬಯಸಿದ್ದಾರೆ. ಹೀಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತದೊಂದಿಗೆ 400ಕ್ಕೂ ಅಧಿಕ ಸ್ಥಾನಗಳ ಗೆಲುವಿನೊಂದಿಗೆ ಅವರು ಪ್ರಧಾನಿಯಾಗುವುದು ನಿಶ್ಚಿತ. ಪ್ರಧಾನಿ ಮೋದಿಯವರು ಹೋದಲ್ಲೆಲ್ಲಾ ಪಡೆಯುವ ಗೌರವ, ಜನರ ಪ್ರೀತಿಯನ್ನು ಕಂಡಾಗ ಈ ಗುರಿ ಸಾಧನೆ ಖಂಡಿತವಾಗಿಯೂ ನಿಶ್ಚಿತವಾಗಿದೆ ಎಂದು ಶಾಸಕ ಕೋಟ್ಯಾನ್ ನುಡಿದರು.
ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು, ಎಲ್ಲ ಮುಖಂಡರು., ಕಾರ್ಯಕರ್ತರು ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಿದ್ದಾರೆ. ದ.ಕ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಸಂಸದ ನಳಿನ್ ಕುಮಾರ್ ಕಟೀಲ್ ಮಾಡಿದ ಕೆಲಸಗಳು ಶ್ಲಾಘನೀಯ. ಕಾರ್ಕಳದಿಂದ ಬಿಕರ್ನಕಟ್ಟೆಯ ವರೆಗಿನ ರಸ್ತೆ ಇಂದು ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿ ಹೊಂದುತ್ತಿದೆ ಮಂಜೂರಾಗಿ ಹಲವು ವರ್ಷಗಳಾದರೂ ಕಾಮಗಾರಿ ಆರಂಭವಾಗಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಅಭಿವೃದ್ಧಿ ಕಾರ್ಯಗಳಿಗೆ ಯಾವ ಸಹಕಾರವನ್ನೂ ನೀಡದೆ ಅಡ್ಡಗಾಲು ಹಾಕುತ್ತಿದೆ. ಅಂತಹ ಪ್ರತಿಕೂಲ ಸನ್ನಿವೇಶಗಳಿದ್ಸರೂ ಸಂಸದರು ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಕಾರ್ಯಗಳು ಇನ್ನಷ್ಟು ವೇಗ ಪಡೆದು ಮುಂದುವರಿಯಬೇಕಾದರೆ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ದಾಖಲೆಯ ಬಹುಮತದೊಂದಿಗೆ ಗೆದ್ದು ಬರಬೇಕಾಗಿದೆ ಎಂದು ಮೂಲ್ಕಿ ಮೂಡುಬಿದಿರೆ ಶಾಸಕರು ಪ್ರತಿಪಾದಿಸಿದರು.
ಸಾಗರಮಾಲಾ ಯೋಜನೆಯಡಿ- ಮೂಲ್ಕಿಯಿಂದ ಕಟೀಲು- ಬಜ್ಪೆಗೆ ಬಂದು ಕೈಕಂಬದ ಮೂಲಕವಾಗಿ ಪೊಳಲಿ- ಮೆಲ್ಕಾರ್‌ ಮೂಲಕ ತೊಕ್ಕೊಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಈಗ ಅಭಿವೃದ್ಧಿ ಹೊಂದುತ್ತಾ ಇದೆ. ಕಾಂಗ್ರೆಸ್ ಸರಕಾರವಿದ್ದಾಗ ಇದಕ್ಕೆ ಅಡ್ಡಗಾಲು ಹಾಕುತ್ತಲೇ ಬಂದಿದೆ. ಪಂಪ್‌ವೆಲ್ ಫ್ಲೈ ಓವರ್‌ ಹೆಸರಿನಲ್ಲಿ ನಳಿನ್ ಕುಮಾರ್ ಕಟೀಲು ಅವರನ್ನು ವಿಪರೀತವಾಗಿ ಟೀಕಿಸಿ, ಲೇವಡಿ ಮಾಡಲಾಯಿತು. ಆದರೆ ಅದನ್ನು ನಿರ್ವಹಿಸಿದ ಎಂಜಿನಿಯರ್‌ಗಳ ಅನುಭವದ ಕೊರತೆಯಿಂದ ಅದರ ಗುಣಮಟ್ಟ ಈ ರೀತಿಯಾಗಿದೆ. ಸಂಸದನ ಕಡೆಗೆ ಬೆರಳು ಮಾಡಿ ತೋರಿಸುವುದು ತಪ್ಪು. ಆಡಳಿತ ಸೌಧಗಳು ಪ್ರತಿ ತಾಲೂಕಲ್ಲಿವೆ. ಆದರೆ ಯಾವುದೂ ಸಹ ಸಮರ್ಪಕವಾಗಿ ಸ್ಥಳಾವಕಾಶ ಹೊಂದಿಲ್ಲ. ಮೂಲ್ಕಿಯಲ್ಲಿ ಈಗ ಅದೇ ವೆಚ್ಚದಲ್ಲಿ ಆಗುತ್ತಿರುವ ಆಡಳಿತ ಸೌಧವನ್ನು ಗಮನಿಸಿ ನೋಡಿ, ಎಷ್ಟು ವಿಶಾಲ ಸ್ಥಳಾವಕಾಶ ಹೊಂದಿದೆ ಎಂಬುದನ್ನು ಗಮನಿಸಬಹುದು ಎಂದು ಕೋಟ್ಯಾನ್ ವಿಶ್ಲೇಷಿಸಿದರು.
ಜನಪ್ರತಿನಿಧಿಯಾದವರು ಅನುದಾನವನ್ನು ತಂದುಕೊಡಲು ಮಾತ್ರ ಸಾಧ್ಯ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕಾದವರು ಸಂಬಂಧಿತ ಅಧಿಕಾರಿಗಳು. ದ.ಕ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಯುವಕನನ್ನು ಸೇನೆಯಲ್ಲಿ ಕೆಲಸ ಮಾಡಿ ಬಂದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಬಿಜೆಪಿ ಕಣಕ್ಕಿಳಿಸಿದೆ. ಅವರು ಎಲ್ಲ ಭಾಷೆಗಳನ್ನು ಬಲ್ಲವರು. ಹಿಂದೂ ಸಮಾಜೋತ್ಸವಕ್ಕೆ ಜನ ಸೇರುವಂತೆಯೇ ಚೌಟರ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಜನಸ್ತೋಮ ಸೇರಿ ಬೆಂಬಲ ಕೊಟ್ಟಿದೆ. ಖಂಡಿತವಾಗಿಯೂ ಕ್ಯಾ. ಚೌಟರು ಎಲ್ಲ ಕಾರ್ಯಕರ್ತರು- ಮುಖಂಡರ ಪ್ರಯತ್ನದಿಂದ ಕಳೆದ ಬಾರಿಗಿಂತಲೂ ಹೆಚ್ಚು ಅಂತರದಿಂದ ಗೆಲ್ಲುವುದು ನಿಶ್ಚಿತ. ಯಾವುದೇ ಗೊಂದಲ ನಮ್ಮ ಜಿಲ್ಲೆಯಲ್ಲಿಲ್ಲ. ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಬಾರಿ 30 ಸಾವಿರ ಲೀಡ್ ಕೊಟ್ಟಿದ್ದೇವೆ. ಈ ಬರಿ 50ಕ್ಕೂ ಹೆಚ್ಚಿನ ಲೀಡ್ ಅನ್ನು ತಂದುಕೊಡುತ್ತೇವೆ ಎಂದು ಶಾಸಕ ಕೋಟ್ಯಾನ್ ಹೇಳಿದರು.
ಬಲಿಷ್ಠ ಭಾರತದ ನಿರ್ಮಾಣಕ್ಕೆ, ವಿಶ್ವಗುರು ಆಗಲು ಹಂತ ಹಂತಗಳಲ್ಲಿ ಪ್ರಧಾನಿ ಮೋದಿ ಕೈಗೊಂಡಿದ್ದಾರೆ. ಮಹಾ ಮುತ್ಸದ್ದಿ, ಅಪ್ರತಿಮ ದೇಶಭಕ್ತ ಮೋದಿ ಅವರು ಮತ್ತೊಮ್ಮೆ ಗೆದ್ದು ಬರಲಿದ್ದಾರೆ. ನಾಳೆ ಎಲ್ಲರಿಗೂ ಹಬ್ಬದ ವಾತಾವರಣ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್‌ ಶೋ ನಡೆಸಲಿದ್ದಾರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕರಾವಳಿ ಜಿಲ್ಲೆಗಳ ಜನತೆ ಆಗಮಿಸಿ ಅವರಿಗೆ ಸ್ವಾಗತ ಕೋರಲಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್ ವರೆಗೆ ಬೃಹತ್ ರೋಡ್ ಶೋ ನಡೆಯುತ್ತದೆ.
ಬಿಜೆಪಿ ಎಲ್ಲರ ಪಕ್ಷ. ಜಾತಿ- ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವುದಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಬಿಜೆಪಿಯ ಪರವಾಗಿದ್ದಾರೆ. ಮುಸ್ಲಿಮರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಆಂಧ್ರದಲ್ಲಿ ರಾಜ್ಯಪಾಲರಾಗಿರುವುದು ನಮ್ಮ ಜಿಲ್ಲೆಯವರು ನಜೀರ್ ಅವರು. ಹೀಗಾಗಿ ರಾಷ್ಟ್ರೀಯವಾದಿ ಧೋರಣೆ ಹೊಂದಿರುವ ಎಲ್ಲರೂ ಬಿಜೆಪಿಯ ಬೆಂಬಲಿಗರೇ ಆಗಿದ್ದಾರೆ ಎಂದು ಕೋಟ್ಯಾನ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಹಿಳಾ ಮುಖಂಡರಾದ ಕಸ್ತೂರಿ ಪಂಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಮಂಡಲ ಅಧ್ಯಕ್ಷರಾದ ದಿನೇಶ್ ಪುತ್ರನ್, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್‌ ಹಾಗೂ ಬಂಟ್ವಾಳ ಚುನಾವಣಾ ಉಸ್ತುವಾರಿ ಜಗದೀಶ್ ಶೇಣವ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು