6:00 AM Wednesday8 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಸರಕಾರಿ ದಾಖಲೆ ತಿದ್ದಿ ಬೊಕ್ಕಸಕ್ಕೆ ನಷ್ಟ: ಹಿಂದಿನ ಪೌರಾಯುಕ್ತ, ಕಂದಾಯ ಸಿಬ್ಬಂದಿ ವಿರುದ್ಧ 420 ಕೇಸು ದಾಖಲು

18/02/2024, 21:38

*ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಶಾಸಕ ದರ್ಶನ್ ದ್ರುವ ನಾರಾಯಣ್ ನೇತೃತ್ವದಲ್ಲಿ ನಂಜನಗೂಡು ನಗರಸಭೆಗೆ ಸರ್ಜರಿ*

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com
ಸರ್ಕಾರಿ ದಾಖಲೆಗಳನ್ನ ತಿದ್ದಿ ಕೆಲವು ಕಡತಗಳನ್ನ ನಾಪತ್ತೆ ಮಾಡಿ ನಿವೇಶನಗಳ ಖಾತೆ ಮಾಡುವ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಇಬ್ಬರು ಅಧಿಕಾರಿಗಳ ವಿರುದ್ದ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ನಗರಸಭೆ ಹಿಂದಿನ ಪೌರಾಯುಕ್ತರಾದ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕ ಡಿ.ಎನ್.ನರಸಿಂಹಮೂರ್ತಿ ಮೇಲೆ ಹಾಲಿ ಪೌರಾಯುಕ್ತ ನಂಜುಂಡಸ್ವಾಮಿ ಎಫ್ ಐ ಆರ್. ದಾಖಲಿಸಿದ್ದಾರೆ.
ನಂಜನಗೂಡು ತಾಲೂಕು ದೇಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವೀರಮ್ಮನಹಳ್ಳಿ ಸರ್ವೆ ನಂ 58,59ರ ವಿಸ್ತೀರ್ಣ 3.16 ಬಿ.ಬಸ್ಸಪ್ಪ ಎಂಬುವರಿಗೆ ಸೇರಿದ್ದು ಕೈಗಾರಿಕಾ ಉದ್ದೇಶಕ್ಕಾಗಿ ಉಪವಿಭಾಗಾಧಿಕಾರಿಗಳು ಅನ್ಯಕ್ರಾಂತ ಮಂಜೂರು ಮಾಡಿದ್ದಾರೆ.
ನಂತರ ವಸತಿ ಬಡಾವಣೆ ನಿರ್ಮಿಸಲು ಸಹ ಬದಲಾವಣೆ ಆದೇಶ ಮಾಡಿದ್ದಾರೆ.
ವಸತಿ ಮನೆ ನಿರ್ಮಿಸಬೇಕಿದ್ದಲ್ಲಿ ಮೈಸೂರು-ನಂಜನಗೂಡು ಯೋಜನಾ ಪ್ರಾಧಿಕಾರದಿಂದ ಅಧಿಕೃತ ಬಡಾವಣೆ ನಕ್ಷೆ ಅನುಮೋದನೆ ಪಡೆಯಬೇಕಿತ್ತು.
ಆದರೆ ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಸಹ ಅನುಮೋದನೆ ಆಗಿಲ್ಲ.
ಹಿಂದಿನ ಪೌರಾಯುಕ್ತರಾದ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕರಾದ ಡಿ.ಎನ್.ನರಸಿಂಹಮೂರ್ತಿ ಸಂಖ್ಯೆ 106ರ ಆಸ್ತಿ ವಹಿಯಲ್ಲಿ ನಿವೇಶನ ಸಂಖ್ಯೆ 1ರಿಂದ 48 ರವರೆಗೆ ವಿವಿದ ಅಸೆಸ್ ಮೆಂಟ್ ಗಳಲ್ಲಿ ವಿವಿದ ಅಳತೆಗಳನ್ನ ನಮೂದಿಸಿ ಗಂಗಮ್ಮ ಎಂಬುವರ ಹೆಸರಿಗೆ ಖಾತೆ ದಾಖಲಿಸಿದ್ದಾರೆ.


ಇವೆಲ್ಲಾ ಪ್ರಕ್ರಿಯೆಗಳನ್ನ ನಡೆಸುವಾಗ ಭಾರಿ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಅಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವ ವೇಳೆ ಕೆಲವೆಡೆ ಹೆಸರುಗಳನ್ನ ಖಾಲಿ ಬಿಡಲಾಗಿದೆ.ಕೆಲವೆಡೆ ತಿದ್ದಿ ಬರೆದಿದ್ದಾರೆ. ಮತ್ತೆ ಕೆಲವು ಕಡತಗಳೇ ನಾಪತ್ತೆಯಾಗಿದೆ.
ಈ ಹಿನ್ನಲೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶದಂತೆ ಹಿಂದಿನ ಪೌರಾಯುಕ್ತರಾದ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕ ಡಿ.ಎನ್.ನರಸಿಂಹಮೂರ್ತಿ ವಿರುದ್ದ ಹಾಲಿ ಪೌರಾಯುಕ್ತರಾದ ನಂಜುಂಡಸ್ವಾಮಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು