10:12 AM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಮಂಗಳೂರು: ಕೊಂಕಣಿ ಲೇಖಕ ಡಾ. ಜೆರಿ ನಿಡ್ಡೊಡಿ ಅವರಿಗೆ ಕೊಂಕಣಿ ಲೇಖಕ್ ಸಂಘ್ ಪ್ರಶಸ್ತಿ ಪ್ರದಾನ

18/02/2024, 21:42

ಮಂಗಳೂರು(reporterkarnataka.com): ಪ್ರತಿಯೊಂದು ಸಮುದಾಯಕ್ಕೆ ಅವರದ್ದೆ ಆದ ಸಂಸ್ಕೃತಿ ಇರುವಂತೆ ನಮಗೆ ಕೊಂಕಣಿ ಭಾಷಿಕರಿಗೂ ಒಂದು ಸಂಸ್ಕೃತಿ ಇದೆ. ಇದು ತಲೆತಲಾಂತರದಿಂದ ಹರಿದು ಬಂದಿದ್ದು ಪರಿವರ್ತನಾಶೀಲಾ ವಾಗಿದೆ. ಬದಲಾವಣೆ ಪ್ರಕೃತಿ ನಿಯಮ. ಹಾಗಿರುವಾಗ ಸಮಾಜದೊಡಗಿನ ಮಧುರ ಬಾಂಧವ್ಯಕ್ಕಾಗಿ ಸಮಾನತೆಯನ್ನು ಗುರುತಿಸಿಕೊಳ್ಳುವುದು ಅಗತ್ಯ. ಬದಲಾವಣೆಯ ಬಿರುಗಾಳಿಯಲ್ಲಿ ನಮ್ಮ ಸಂಸ್ಕೃತಿ-ಸಂಪ್ರದಾಯದ ಉತ್ತಮ ಅಂಶಗಳನ್ನು ಉಳಿಸಿಕೊಂಡು, ಭಾಷೆ-ನಾಡು-ನುಡಿಯ ಸಂಸ್ಕೃತಿಯ ಬೇರುಗಳೊಂದಿಗೆ ಅಭಿನ್ನವಾಗಿ ಉಳಿಯುವುದು ನಮ್ಮ ಜವಾಬ್ದಾರಿಯಾಗಿದೆ. ಸಾಹಿತಿಗಳು ಇದಕ್ಕೆ ಮಹತ್ತರ ಕೊಡುಗೆ ನೀಡುತ್ತಾರೆ. ತಮ್ಮ ಲೇಖನಿಯಿಂದ ಕೊಂಕಣಿ ಲೇಖಕ ಸಮುದಾಯದಲ್ಲಿ ತಮ್ಮದೇ ಛಾಪನ್ನು ಒತ್ತಿದ ಡಾ. ಜೆರಾಲ್ಡ್ ಪಿಂಟೊರವರಿಗೆ ಅಭಿನಂದನೆಗಳು ಎಂದು ಮಂಗಳೂರು ಧರ್ಮಪ್ರಾಂತ್ಯದ ಸೆಮಿನರಿಯ ರೆಕ್ಟಾರ್ ರೆ. ಡಾ. ರೊನಾಲ್ಡ್ ಸೆರಾವೊ ತಮ್ಮ ಸಂದೇಶ ನೀಡಿದರು.


ನಗರದ ಸಂದೇಶ ಪ್ರತಿಷ್ಠಾನದ ಸಭಾಭವನದಲ್ಲಿ ಡಾ. ಜೆರಿ ನಿಡ್ಡೊಡಿ ಅವರು ಕೊಂಕಣಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕೊಂಕಣಿ ಲೇಖಕ್ ಸಂಘ್ ಕರ್ನಾಟಕ ಇವರ 2024 ನೇ ವರ್ಷದ ಪ್ರಶಸ್ತಿಯನ್ನು. ಮಂಗಳೂರು ಧರ್ಮಪ್ರಾಂತ್ಯದ ಸೆಮಿನರಿಯ ರೆಕ್ಟಾರ್ ರೆ. ಡಾ. ರೊನಾಲ್ಡ್ ಸೆರಾವೊ, ಆಳ್ವಾಸ್ ಕಾಲೇಜಿನ ಕನ್ನಡ ಪ್ರೊಫೆಸರ್ ಟಿ.ಎ.ಎನ್ ಖಂಡಿಗೆ, ಕೊಂಕಣಿ ಲೇಖಕ ಸಂಘ್ ಇದರ ಸಂಚಾಲಕ ರಿಚಾರ್ಡ್ ಮೊರಾಸ್, ಸಮಿತಿ ಸದಸ್ಯರಾದ ಡಾ. ಎಡ್ವರ್ಡ್ ನಜ್ರೆತ್, ಡೊಲ್ಫಿ ಕಾಸ್ಸಿಯಾ, ಹೆನ್ರಿ ಮಸ್ಕರೇನಸ್, ಅವರ ಉಪಸ್ಥಿತಿಯಲ್ಲಿ ಪೇಟವನ್ನಿಟ್ಟು ಶಾಲು ಹೊದೆಸಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಸ್ಮರಣಿಕೆ, ಸನ್ಮಾನಪತ್ರ ಹಾಗೂ 25,000 ರೂ. ಗಳನ್ನು ಒಳಗೊಂಡಿದೆ.
ಈ ಕಾರ್ಯಕ್ರಮದ ಗೌರವ ಅತಿಥಿಯಾದ ಪ್ರೊ. ಟಿ.ಎ.ಎನ್. ಖಂಡಿಗೆಯವರು ಕುಟುಂಬದಂತೆ ಇರುವ ಲೇಖಕ ಸಂಘದಲ್ಲಿ ತಮ್ಮದೇ ಮನೆಯವ ಸದಸ್ಯರ ಸಾಧನೆ ಗುರುತಿಸಿ ಅವರನ್ನು ಅಭಿನಂದಿಸುವುದಯ ಸ್ತುತ್ಯಾರ್ಹ. ಈ ಸಂದರ್ಭದಲ್ಲಿ ಒಂದು ವಿಷಯ ನೆನಪಿಡಬೇಕು. ಕರಾವಳಿ ಒಂದು ಬಹು ಭಾಷಾ ಸಂಗಮ. ಇಂತಹ ಬಹುತ್ವದ ಸಾಮರಸ್ಯದಲ್ಲಿ ಕೊಂಕಣಿ ಭಾಷಿಕರ ಹಾಗೂ ಸಮುದಾಯದ ಕೊಡುಗೆ ಅಪಾರ. ಕೊಂಕಣಿ ಭಾಷೆಯಲ್ಲಿ ಬಂದಿರುವ ಸಾಹಿತ್ಯಾವೂ ಅಪಾರ. ಈ ಸಾಹಿತ್ಯವು ಈ ಪ್ರದೇಶದ ಬೆಳವಣಿಗೆಗೆ ಹಾಗೂ ಪ್ರಗತಿಗೆ ಅನೇಕ ರೀತಿಯಲ್ಲಿ ಕೊಡುಗೆ ನೀಡಿದೆ. ತುಳು, ಬ್ಯಾರಿ ಹೀಗೆ ಎಲ್ಲಾ ಭಾಷಿಕರ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ವಿಶಾಲ ಇತಿಹಾಸವಿರುವ ಕೊಂಕಣಿ ಭಾಷೆಯಲ್ಲಿ ಹಿಂದಿನ ಲೇಖಕರ ಹಾದಿಯಲ್ಲಿ ಸಾಗಿ ಇಂದು ಪ್ರಬುಧ್ದ, ಕ್ರಿಯಾತ್ಮಕಾ ಲೇಖಕರು ಬೆಳೆದು ಬರಲಿ, ಇದರೊಂದಿಗೆ ಕೊಂಕಣಿ ಸಮುದಾಯದ ಸಂಸ್ಕೃತಿಯೂ ಬೆಳೆಯಲಿ ಎಂದು ತಮ್ಮ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಪೊಯೆಟಿಕ ಕವಿ ಪಂಗಡ ಕಟ್ಟಿ ಕೊಂಕಣಿ ಕಾವ್ಯ ಕ್ಷೇತ್ರದಲ್ಲಿ ವಿಭಿನ್ನ ಛಾಪನ್ನಿತ್ತ ನವೀನ್ ಪಿರೇರಾ ಸುರತ್ಕಲ್, ಸಂದೇಶ ಪ್ರತಿಷ್ಟಾನದ ಪ್ರಶಸ್ತಿ ವಿಜೇತ ವಲ್ಲಿ ಕ್ವಾಡ್ರಸ್ ರನ್ನು ಡೊಲ್ಪಿ ಕಾಸ್ಸಿಯಾ ಹಾಗೂ ಆಂಡ್ರ್ರೂ ಡಿಕುನ್ಹಾ ಪುಷ್ಪಗಳನ್ನೀಡಿ ಅಭಿನಂದಿಸಿದರು. ಸಂಘದ ಸಂಚಾಲಕ ರಿಚಾರ್ಡ್ ಮೊರಾಸ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಡಾ. ಎಡ್ವರ್ಡ್ ನಜ್ರೆತ್ ಸ್ವಾಗತ ಮಾಡಿದರು. ಹೆನ್ರಿ ಮಸ್ಕರೇನಸ್ ಡಾ. ಜೆರಿ ನಿಡ್ಡೋಡಿಯವರ ಪರಿಚಯ ನೀಡಿದರು. ಫೆಲ್ಸಿ ಲೋಬೊರವರು ಸನ್ಮಾನಪತ್ರ ವಾಚಿಸಿದರು. ಜಾರ್ಜ್ ಲಿಗೋರಿ ಡಿಸೋಜ ಧನ್ಯವಾದಗೈದರು. ದಿಯಾ ಮಸ್ಕರೇನಸ್, ಕೆನಿಸ್ಸಾ ಡಿಸೋಜ, ಮ್ಯಾಕ್ಸಿಂ ರೊಡ್ರಿಗಸ್ ಬೊಂದೆಲ್ ಸಹಕರಿಸಿದರು. ರೆ. ಫಾ. ಮಾರ್ಕ್ ವಾಲ್ಡರ್, ಸೆವಕ್ ಸಂಪಾದಕಾ ರೆ. ಫಾ. ಚೇತನ್ ಕಾಪುಜಿನ್, ಲೇಖಕ ಜೆ. ಎಫ್. ಡಿಸೋಜ, ಎಂ.ಸಿ.ಸಿ. ಬ್ಯಾಂಕ್ ನಿರ್ದೇಶಕ ಐರಿನ್ ಪಿಂಟೊ, ಹೆಸರಾಂತ ಸಾಹಿತಿಗಳು, ಅಭಿಮಾನಿಗಳು ಹಾಜರಿದ್ದರು. ಸಾಹಿತಿ ಲವಿ ಗಂಜಿಮಠ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು