1:54 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಎಂಸಿಎಫ್ ಸಾಮಾಜಿಕ ಬದ್ಧತಾ ನಿಧಿಯಡಿ ಕೃತಕ ಮಂಡಿ ಜೋಡಣೆ, ವೀಲ್ ಚೇರ್ ಮತ್ತಿತರ ಸಲಕರಣೆಗಳ ವಿತರಣೆ: ಅಂತಾರಾಷ್ಟ್ರೀಯ ಗುಣಮಟ್ಟದ ಕೃತಕ ಅಂಗಾಂಗಗಳ ವ್ಯವಸ್ಥೆ

04/01/2024, 23:07

ಮಂಗಳೂರು(reporterkarnataka.com):ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಅವರ ಶಿಫಾರಸ್ಸಿನಂತೆ ಎಂಸಿಎಫ್ ಕಂಪೆನಿಯ ಸಾಮಾಜಿಕ ಬದ್ಧತಾ ನಿಧಿಯಡಿ ಕೃತಕ ಮಂಡಿ ಜೋಡಣೆ, ವೀಲ್ ಚೇರ್ ಮತ್ತಿತರ ಸಲಕರಣೆಗಳ ವಿತರಣೆ ಎಂಸಿಎಫ್ ಸಭಾಂಗಣದಲ್ಲಿ ಜರಗಿತು.
ಶಾಸಕ ಡಾ.ಭರತ್ ಶೆಟ್ಟಿ ವೈ, ಸುರತ್ಕಲ್ ಅಥರ್ವ ಆಸ್ಪತ್ರೆಯ ಡಾ.ಪ್ರಶಾಂತ್ ಮೋಹನ್ ಅವರು ಫಲಾನುಭವಿಗಳಿಗೆ ಕೃತಕ ಅಂಗಾಂಗ ಜೋಡಣಾ ಸಲಕರಣೆ ವಿತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ ಐದು ವರ್ಷಗಳಲ್ಲಿ ಅಗತ್ಯವುಳ್ಳವರಿಗೆ ಅಂತಾರಾಷ್ರ್ಟೀಯ ಗುಣಮಟ್ಟದ ಕೃತಕ ಅಂಗಾಂಗ ಜೋಡಣೆಯ ವ್ಯವಸ್ಥೆಯನ್ನು ಮಾಡುವ ಮೂಲಕ ಎಂಸಿಎಫ್ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ ಎಂದು ಶ್ಲಾಘಿಸಿದರು. ಕ್ಲಾಸ್ ರೂಂ ನವೀಕರಣ, ಅಂಗನವಾಡಿ ಕೇಂದ್ರದ ನವೀಕರಣ, ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಟ್ರೋಲಿ, ಆಮ್ಲಜನಕ ಉತ್ಪಾದನಾ ಘಟಕ ಸೇರಿದಂತೆ ವಿವಿಧ ಸಹಾಯ, ಸಹಕಾರ ಮತ್ತು ಅಭಿವೃದ್ಧಿ ಕಾರ್ಯಗಳು ನಡೆದಿವೆ ಸಂಸ್ಥೆಗೆ ಈ ಸಂದರ್ಭದಲ್ಲಿ ಕೃತಜ್ನತೆ ಅರ್ಪಿಸುವುದಾಗಿ ಶಾಸಕರು ನುಡಿದರು.
ಎಂಸಿಎಫ್‍ನ ಸಿಇಒ ಆಗಿರುವ ನಿತಿನ್ ಎಂ. ಕಾಂತಕ್ ಅವರು ಮಾತನಾಡಿ, ಸಿಎಸ್‍ಆರ್ ನಿಧಿಯಡಿ ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ಮುಂದೆಯೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಂಸಿಎಫ್ ಉತ್ಪಾದನಾ ವಿಭಾಗದ ಮುಖ್ಯಸ್ಥ ಗಿರೀಶ್ ಎಸ್. ಅವರು ಸಿಎಸ್‍ಆರ್ ಯೋಜನೆಯ ಕುರಿತಂತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮನಪಾ ಸದಸ್ಯೆ ಜಯಲಕ್ಷ್ಮೀ ಶೆಟ್ಟಿ,ಎಂಸಿಎಫ್‍ನ ಪ್ರಮುಖ ಅಧಿಕಾರಿಗಳು,ಸಿಎಸ್‍ಆರ್ ವಿಭಾಗದ ಅಧಿಕಾರಿಗಳು,ಎಂಡೋಲೈಟ್ ಸಂಸ್ಥೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.
ಎಂಸಿಎಫ್ ಸಂಸ್ಥೆಯ ಡಾ.ಯೋಗೀಶ್ ನಿರೂಪಿಸಿದರು. ಚೇತನ್ ಮೆಂಡೋನ್ಸಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು