4:04 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಕೆನರಾ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಗುರು ಸುಧೀಂದ್ರರ ಮೂರ್ತಿ ಅನಾವರಣ: ಕ್ಯಾಂಪಸ್ಸಿಗೆ ʼಸುಧೀಂದ್ರ ನಗರʼ ನಾಮಕರಣ

22/12/2023, 21:53

ಮಂಗಳೂರು(reporterkarnataka.com): ಗೌಡ ಸಾರಸ್ವತ ಸಮುದಾಯ ವ್ಯಾವಹಾರಿಕ ಚತುರತೆಯಿಂದ ಗುರುತಿಸಿಕೊಂಡರೂ ಅಮ್ಮೆಂಬಳ ಸುಬ್ಬರಾವ್ ಪೈ ಅವರಂಥಹ ದೂರದರ್ಶಿತ್ವದ ಸಾಧಕರಿಂದ ಆರಂಭಗೊಂಡ ಕೆನರಾ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ ಕೆನರಾ ಬ್ಯಾಂಕ್ ಕೂಡ ಸಾಮಾಜಿಕ ಅಭಿವೃದ್ಧಿಯ ಮೂಲ ಕಾಳಜಿಯನ್ನು ಹೊಂದಿರುವುದು ಗಮನಾರ್ಹ ಎಂದು ಶ್ರೀ ಕಾಶೀಮಠಾಧೀಶ ಶ್ರೀಮದ್‌ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಹೇಳಿದರು. ಅವರು ಬೆಂಜನಪದವು ಕೆನರಾ ಇಂಜಿನಿಯರಿಂಗ್‌ ಕಾಲೇಜಿಗೆ ಅನುಗ್ರಹ ಭೇಟಿ ನೀಡಿ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ವನಮಂಟಪದಲ್ಲಿ ಪರಮಗುರು ಶ್ರೀಮದ್‌ ಸುಧೀಂದ್ರ ತೀಥ ಸ್ವಾಮೀಜಿಯವರ ಮೂರ್ತಿಯನ್ನು ಅನಾವರಣಗೊಳಿಸಿದರು. ಕಾಲೇಜಿನ ಸಮಗ್ರ ಆವರಣಕ್ಕೆ ʼಸುಧೀಂದ್ರ ನಗರʼ ನಾಮಕರಣ ನೆರವೇರಿಸಿದರು. ಈ ಸವಿನೆನಪಿಗಾಗಿ ಶ್ರೀಗಂಧದ ಸಸಿಯೊಂದನ್ನು ಅವರು ನೆಟ್ಟರು.
ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳವರು ವಾತ್ಸಲ್ಯಭರಿತ ಭೋಧನೆ, ಸಂಸ್ಕಾರಯುತ ಶಿಕ್ಷಣ, ಪ್ರಾಯೋಗಿಕ ಜ್ಞಾನದ ಜತೆಗೆ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದರು. ನಮ್ಮ ರಾಷ್ಟ್ರದ ಉತ್ಪನ್ನಗಳಿಗೆ ನಾವು ಮೊದಲ ಪ್ರಾಶಸ್ತ್ಯ ನೀಡಬೇಕು. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿಯ ಮಹತ್ವವನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡುವ ಅಗತ್ಯವಿದೆ ಎಂದವರು ನುಡಿದರು.
ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ʼಡಿಜಿಟಲ್‌ ಪ್ಲಾಟ್‌ ಫಾರಂʼ ಹಾಗೂ ಕೆನರಾ ಇಂಜಿನಿಯರಿಂಗ್‌ ಕಾಲೇಜಿನ ನೂತನ ವೆಬ್‌ಸೈಟ್‌ ಲೋಕಾರ್ಪಣೆಯನ್ನು ಶ್ರೀಗಳವರು ಈ ಸಂದರ್ಭದಲ್ಲಿ ನೆರವರೇರಿಸಿದರು. ಕಾಲೇಜಿನ ವಿವಿಧ ವಿಭಾಗಗಳು, ಪ್ರಯೋಗಾಲಯಗಳಿಗೂ ಶ್ರೀಗಳವರು ಭೇಟಿ ನೀಡಿದರು.
ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಪದಾಧಿಕಾರಿಗಳು, ಕಾಲೇಜಿನ ವತಿಯಿಂದ ಶ್ರೀಗಳವರಿಗೆ ಗೌರವಾದರಗಳಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಡಿ.ವಾಸುದೇವ ಕಾಮತ್‌, ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್‌ ಗುರು ಪಾದಪೂಜೆ ನೆರವೇರಿಸಿದರು. ಅಡಳಿತ ಮಂಡಳಿಯ ಸಹ ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್‌ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಶ್ರೀ ಹರಿ ಗುರು ದಯೆಯಿಂದ ಕೆನರಾ ಸಂಸ್ಥೆಗಳು ಬೆಳೆದಿವೆ. ಪ್ರಸ್ತುತ ಹೊಸದಾಗಿ ನರ್ಸಿಂಗ್ ಶಿಕ್ಷಣದ ಜತೆಗೆ ಯುಪಿಎಸ್ಸಿ ಪರೀಕ್ಷಾರ್ಥಿಗಳಿಗೆ ರೆಸಿಡೆನ್ಸಿಶಿಯಲ್ ಕೋರ್ಸ್ ಆರಂಭಿಸುವ ತಯಾರಿ ನಡೆದಿದ್ದು ಮುಂದಿನ ಹಂತದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಕನಸು ನನಸಾಗಬೇಕಿದೆ ಎಂದರು.


ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ. ಪದ್ಮನಾಭ ಪೈ, ಜತೆ ಕಾರ್ಯದರ್ಶಿಗಳಾದ ಕೆ. ಸುರೇಶ್‌ ಕಾಮತ್‌, ಟಿ.ಗೋಪಾಲಕೃಷ್ಣ ಶೆಣೈ, ಸಹಿತ ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಕೆ. ಶಿವಾನಂದ ಶೆಣೈ, ಎಂ. ನರೇಶ್‌ ಶೆಣೈ, ಯೋಗೀಶ ಆರ್.ಕಾಮತ್‌, ಅಶ್ವಿನಿ ಗಣೇಶ್ ಕಾಮತ್ ,ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಶ್‌ ಹೆಚ್. ಆರ್. , ಡೀನ್ಸ್‌ , ವಿಭಾಗ ಮುಖ್ಯಸ್ಥರುಗಳು,ಕಾಲೇಜಿನ ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು