6:15 AM Thursday7 - December 2023
ಬ್ರೇಕಿಂಗ್ ನ್ಯೂಸ್
ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಇಂದಿನಿಂದ ತರಗತಿ… ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣ: ಚೈತ್ರಾ ಸೇರಿದಂತೆ… ವಾಹನ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿಯ ಸೆರೆ: 68,000/- ಮೌಲ್ಯದ ಸೊತ್ತು ವಶಕ್ಕೆ ಮಂಗಳೂರು: 4 ತಿಂಗಳ ಹಸುಗೂಸಿನ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ… ಚಿಕ್ಕಮಗಳೂರು: ಅಮಾನತುಗೊಂಡ ಪೊಲೀಸರ ಕುಟುಂಬದಿಂದ ಠಾಣೆ ಮುಂಭಾಗ ಪ್ರೊಟೆಸ್ಟ್ ಬೆಳಗಾವಿ ಸುವರ್ಣಸೌಧಕ್ಕೆ ಬೆಳಕಿನ ಖದರ್: ವೀಕೆಂಡ್ ನಲ್ಲಿ ಬಣ್ಣದ ಬೆಳಕಿನಲ್ಲಿ ಬೆಳಗುವ ಯೋಜನೆಗೆ… ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಡಿ. 9ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ ಭಾಗಿ ಯುವ ನ್ಯಾಯವಾದಿ ಮೇಲೆ ಪೊಲೀಸರ ಅಮಾನುಷ ಹಲ್ಲೆ: ವಕೀಲರಿಂದ ಭಾರೀ ಪ್ರತಿಭಟನೆ; ಎಸ್ಪಿ… ದಕ್ಷಿಣ ಕನ್ನಡ ಜಿಲ್ಲಾ ಬಲ್ಯಾಯ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಉಮಾಲಕ್ಷ್ಮೀ ಕುಡುಪು… ಪುತ್ತೂರು: ಚೆನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ; ಆರೋಪಿ ಬಂಧನ

ಇತ್ತೀಚಿನ ಸುದ್ದಿ

ಪಿರಾನಾ ಹಂರ‍್ಸ್ ತೆಕ್ಕೆಗೆ ಸಿಪಿಎಲ್ 2023 ಕ್ರಿಕೆಟ್ ಟ್ರೋಫಿ: ಪ್ರಜ್ವಲ್ ಗ್ಲ್ಯಾಡಿಯೇಟರ್ಸ್ ತಂಡ ರನ್ನರ್ಸ್ ಅಪ್

16/11/2023, 11:12

ಮಂಗಳೂರು(reporterkarnataka.com): ಮಂಗಳೂರು ಪ್ರಾಂತ್ಯದ ಕಥೊಲಿಕ್ ಕ್ರಿಶ್ಚಿಯನ್ನರ ಕ್ರಿಕೆಟ್ ಕ್ರಿಡಾಕೂಟವು 2 ದಿನಗಳ ಕಾಲ ನಗರದ ಉರ್ವಾ ಮುನ್ಸಿಪಲ್ ಕ್ರಿಡಾಂಗಣದಲ್ಲಿ ನವಂಬರ್ 11 ಮತ್ತು 12ರಂದು ನಡೆಯಿತು.
ನವಂಬರ್ 11 ಬೆಳಿಗ್ಗೆ ವಂದನೀಯ ಬೆಂಜಮಿನ್ ಪಿಂಟೋ ಅವರು ಆಶೀರ್ವಚಿಸಿ ಎಲ್ಲಾ ಆಟಗಾರರಿಗೆ ಶುಭ ಹಾರೈಸಿದರು. ಮುಖ್ಯ ಅಥಿತಿಗಳಾದ ಶಾಸಕ ಉಮಾನಾಥ ಕೋಟ್ಯಾನ್ ಅವರು ಮಾತಾನಾಡಿ, ಇಂತಹ ಪಂದ್ಯಾಟದಿಂದ ಆಟಗಾರರ ದೈಹಿಕ, ಮಾನಸಿಕ ಸಾಮರ್ಥ್ಯವು ವೃದ್ಧಿಯಾಗಿ ಸಮಾಜದಲ್ಲಿ ಅನ್ಯೋನ್ಯತೆಯಿಂದ ಬಾಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಂಪತ್ ಶೆಟ್ಟಿ, ಸಿಎ ಕೊಲಿನ್ ರೊಡ್ರಿಗಸ್ , ಫ್ರಾನ್ಸಿಸ್ ಡಿಸೋಜ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾದ ರೋಹನ್ ಮೊಂತೇರೋ ಮಾತನಾಡಿ, ಸಮಾಜಕ್ಕೆ ಎಂದೆಂದಿಗೂ ನಮ್ಮ ಸಹಕಾರ ಇರುತ್ತದೆ. ಅದರಲ್ಲೂ ಯುವ ಜನತೆ ಒಟ್ಟುಗೂಡಿ ನಡೆಸುವ ಇಂತಹ ಪಂದ್ಯಾಟಗಳಿಗೆ ನನ್ನ ಕೈಲಾದಷ್ಟು ಸಹಾಯವನ್ನು ತಾನು ಮಾಡುತ್ತೇನೆ ಎಂಬ ಭರವಸೆ ನೀಡಿದರು.
ಅಧ್ಯಕ್ಷರ ಜೊತೆ ಎಲ್ಲಾ ಅತಿಥಿಗಳು ಕ್ರಿಕೆಟ್ ಪಂದ್ಯಾಟವನ್ನು ಉದ್ಗಾಟಿಸಿದರು. ಕಥೊಲಿಕ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ವಿನೋದ್ ಪಿಂಟೋ ತಾಕೋಡೆ ಸ್ವಾಗತಿಸಿ, ಜೇಸನ್ ಪಿರೇರಾ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.

ನವೆಂಬರ್ 11 ಬೆಳಿಗ್ಗೆ 9ಕ್ಕೆ ಪ್ರಾರಂಭವಾದ ಕ್ರಿಕೆಟ್ ಪಂದ್ಯಾಟವು ರಾತ್ರಿ 12 ತನಕ ನಡೆಯಿತು. ನವಂಬರ್ 12ರಂದು ಬೆಳಿಗ್ಗೆ 10.15ಕ್ಕೆ ಪ್ರಾರಂಭವಾದ ಪಂದ್ಯಾಟ ಸಂಜೆ 6ರ ತನಕ ನಡೆದು ವಿನ್ನರ್ ಆಗಿ ಜೋನ್ ನೋರ್ಬಟ್ ಮಾಲಕತ್ವದ ಪಿರಾನಾ ಹಂರ‍್ಸ್ ತಂಡವು ವಿಜಯ ಶಾಲಿಯಾಗಿ, ಪ್ರವೀಣ್ ಸಿಕ್ವೇರಾ ಮೂಲಕತ್ವದ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್ ತಂಡವು ರನ್ನರ್ಸ್ ಅಪ್ ಆದರು. ಮೊದಲ ಹಾಗೂ ದ್ವಿತೀಯ ರನ್ನರ್ಸ್ ಕ್ರಮವಾಗಿ ರಿಚರ್ಡ್ ಡಿಸೋಜ ಮಾಲಕತ್ವದ ನೈಟ್ ವಾರಿಯರ್ಸ್ ಹಾಗೂ ಜೊನ್ ಲ್ಯಾನ್ಸಿ ಮಾಲಕತ್ವದ ಲೈಟನ್ ಶಿಪಿಂಗ್ ತಂಡಗಳು ಆಯ್ಕೆಯಾದವು
ಕ್ರಿಕೆಟ್ ಪಂದ್ಯಾಟದ ಸಮಾರೋಪ ಕಾರ್ಯಕ್ರಮ ಜೋಯ್ಲಸ್ ಡಿಸೋಜ ಅವರ ಅಧಕ್ಷತೆಯಲ್ಲಿ ನಡೆಯಿತು. ಗೆದ್ದ ತಂಡಗಳನ್ನು ಅಭಿನಂದಿಸಿ ಸಿಪಿಎಲ್ ಅಧ್ಯಕ್ಷರಾದ ವಿನೋದ್ ಪಿಂಟೋ ರವರ ಅಧ್ಯಕ್ಷತೆಯಲ್ಲಿ ಇನ್ನಷ್ಟು ಇಂತಹ ಪಂದ್ಯಗಳು ನಡೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಂದನೀಯ ರೋರ‍್ಟ್ ಡಿಸೋಜರವರು ಮಾತನಾಡಿ ಎಲ್ಲಾ ಕ್ರಿಶ್ಚಿಯನ್ ಆಟಗಾರರನ್ನು ಒಟ್ಟುಗೂಡಿಸಿ ಇಂತಹ ಪಂದ್ಯಾಟ ನಡೆಸುವುದು ಅಭಿನಂದನೀಯ. ವಿನೋದ್ ಹಾಗೂ ಸಿಪಿಎಲ್ ಏಸೋಸಿಯೇಷನ್ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಂತಹ ಕ್ರಿಕೆಟ್ ಪಂದ್ಯಾಟವು ಇನ್ನಷ್ಟು ವಿಜ್ರಂಭಣೆಯಿಂದ ನಡೆಯಲಿ ಎಂದು ಅಶೀರ್ವದಿಸಿದರು . ಟೈಟಸ್ ನೊರೊನ್ಹಾ, ಎಚ್ಚೆಮ್ ಫೆರ್ನಾಲ್, ರೋಶನ್ ಮಾಡ್ತಾ ಮುಖ್ಯ ಅಥಿತಿಗಳಾಗಿದ್ದು ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ವೈಯುಕ್ತಿಕ ಪ್ರಶಸ್ತಿ ಗೆದ್ದ ಆಟಗಾರರ ವಿವರಗಳು:
1)ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್. ಸಚಿನ್ ಪಿರಾನಾ ಹಂಟರ್ಸ್
2)ಮ್ಯಾನ್ ಆಫ್ ದಿ ಸೀರೀಸ್ ನಿಥಿನ್ ಪ್ರಜ್ವಲ್ ಗ್ಲಾಡಿಯೇಟರ್ಸ್
3)ಬೆಸ್ಟ್ ಬ್ಯಾಟ್ಸಮನ್ . ಸಂಜಯ್ ಫಿರಾನಾ ಹಂಟರ್ಸ್
4)ಬೆಸ್ಟ್ ಬೌಲರ್ ಕೆವಿನ್ ಫಿರಾನಾ ಹಂಟರ್ಸ್
5)ಬೆಸ್ಟ್ ಫಿಲ್ಡರ್ ರಾಕೇಶ್ ಫಿರಾನಾ ಹಂಟರ್ಸ್
6)ಬೆಸ್ಟ್ ಕ್ಯಾಚ್ ಆಫ್ ದ ಟೂರ್ನಾಮೆಂಟ್ : ಪ್ರಿತೇಶ್ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್
7)ಬೆಸ್ಟ್ ಕೀಪರ್ ಸುನಿಲ್ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್
8)ಬೆಸ್ಟ್ ಸೀನಿಯರ್ ಪ್ಲೇಯರ್ ಆರುಣ್ ಡಿಸೋಜಾ ಫಿರಾನಾ ಹಂಟರ್ಸ್
9)ಬೆಸ್ಟ್ ಜೂನಿಯರ್ ಪ್ಲೇಯರ್ : ಡಿಯೋನ್ ಲೈಟನ್ ಶಿಪ್ಪಿಂಗ್ ಏಬಿ
10)ಓರೆಂಜ್ ಕ್ಯಾಪ್ ಸಂಜಯ್ ಫಿರಾನಾ ಹಂಟರ್ಸ್
11)ಪರ್ಪಲ್ ಕ್ಯಾಪ್: ಕೆವಿನ್ ಫಿರಾನಾ ಹಂಟರ್ಸ್
12)ಲೀಗ್ ನ ಎಲ್ಲಾ ಪಂದ್ಯಾಟಗಳಿಗೂ ಮ್ಯಾನ್ ಆಫ್ ದಿ ಮ್ಯಾಚ್ ನೀಡಿ ಗೌರವಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು