4:45 AM Wednesday6 - December 2023
ಬ್ರೇಕಿಂಗ್ ನ್ಯೂಸ್
ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಇಂದಿನಿಂದ ತರಗತಿ… ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣ: ಚೈತ್ರಾ ಸೇರಿದಂತೆ… ವಾಹನ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿಯ ಸೆರೆ: 68,000/- ಮೌಲ್ಯದ ಸೊತ್ತು ವಶಕ್ಕೆ ಮಂಗಳೂರು: 4 ತಿಂಗಳ ಹಸುಗೂಸಿನ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ… ಚಿಕ್ಕಮಗಳೂರು: ಅಮಾನತುಗೊಂಡ ಪೊಲೀಸರ ಕುಟುಂಬದಿಂದ ಠಾಣೆ ಮುಂಭಾಗ ಪ್ರೊಟೆಸ್ಟ್ ಬೆಳಗಾವಿ ಸುವರ್ಣಸೌಧಕ್ಕೆ ಬೆಳಕಿನ ಖದರ್: ವೀಕೆಂಡ್ ನಲ್ಲಿ ಬಣ್ಣದ ಬೆಳಕಿನಲ್ಲಿ ಬೆಳಗುವ ಯೋಜನೆಗೆ… ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಡಿ. 9ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ ಭಾಗಿ ಯುವ ನ್ಯಾಯವಾದಿ ಮೇಲೆ ಪೊಲೀಸರ ಅಮಾನುಷ ಹಲ್ಲೆ: ವಕೀಲರಿಂದ ಭಾರೀ ಪ್ರತಿಭಟನೆ; ಎಸ್ಪಿ… ದಕ್ಷಿಣ ಕನ್ನಡ ಜಿಲ್ಲಾ ಬಲ್ಯಾಯ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಉಮಾಲಕ್ಷ್ಮೀ ಕುಡುಪು… ಪುತ್ತೂರು: ಚೆನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ; ಆರೋಪಿ ಬಂಧನ

ಇತ್ತೀಚಿನ ಸುದ್ದಿ

ಉಚ್ಚಿಲ ದಸರಾಕ್ಕೆ ವಸ್ತು ಪ್ರದರ್ಶನದ ಮೆರುಗು: ಅಲ್ಲಿತ್ತು ಹೂವಿನ ಪಾರಿವಾಳ, ಪಂಜರ ಕೃಷಿ, 1.5 ಕೆಜಿ ತೂಕದ ಭಾರೀ ಏಡಿ!!

23/10/2023, 20:15

ಉಡುಪಿ(reporterkarnataka.com): ದಸರಾ ಅಂದ್ರೆ ಎಲ್ಲೆಡೆ ಸಡಗರ. ನಾಡಹಬ್ಬವಾದ ದಸರಾವನ್ನು ಕರಾವಳಿಯಲ್ಲೂ ಬಲು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ದಸರಾ ಅಂಗವಾಗಿ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಂತಹದ್ದೊಂದು ಸಡಗರವನ್ನು
ಉಚ್ಚಿಲದಲ್ಲಿಯೂ ಹಮ್ಮಿಕೊಳ್ಳಲಾಗಿದೆ.
ಉಚ್ಚಿಲದಲ್ಲಿ ಈ ಬಾರಿ ದಸರಾ ಆಕರ್ಷಕವಾಗಿ ಮೂಡಿ ಬಂದಿದೆ. ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕೇವಲ ಎರಡು ದಿನ ಮಾತ್ರ ಬಾಕಿ ಇದ್ದು ವಸ್ತುಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೀನುಗಾರಿಕಾ ಇಲಾಖೆಯ ಫಲಪುಷ್ಪ ಪ್ರದರ್ಶನ, ಐಟಿಡಿಸಿ, ವಾರ್ತಾ ಇಲಾಖೆ , ಪುಸ್ತಕ ಮಳಿಗಗಳು ಸೇರಿದಂತೆ ವಿವಿಧ ಪ್ರದರ್ಶನ ಗಳನ್ನು ನೋಡಲು ಜನರು ಆಗಮಿಸುತಿದ್ದಾರೆ
ಉಚ್ಚಿಲ ದಸರಾದಲ್ಲಿ ಈ ಬಾರಿ ವಿಶೇಷವಾಗಿ ಮೀನುಗಾರಿಕಾ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಸಮುದ್ರ ಮೀನು ಮತ್ತು ಆಹಾರಗಳು, ಸಿಹಿ ನೀರಿನ ಮೀನುಗಳು, ಪಚ್ಚಲ ಕೃಷಿ, ಪಂಜರ ಕೃಷಿ ಪ್ರಾತ್ಯಕ್ಷಿಕೆ, ಅಲಂಕಾರಿಕ ಮೀನುಗಳ ಬಗ್ಗೆ ವೀಕ್ಷಣೆಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಮುದ್ರದ ಮೀನುಗಳಾದ ಬಂಗುಡೆ, ತೊಂದೆ ಮೀನು, ಮಣ್ಣು ತೊರಕೆ, ಕಳ್ಳಿಗೋರೆ, ಟೈಗರ್ ಪ್ರಾನ್ಸ್, ಈಲ್ ಫೀಶ್ , ಏರಿ ಮೀನು, ಪೈಯ್ಯೆ , ಕಟ್ರಿ‌ ಮೀನು … ಕೆಂಬೇರಿ, ತೊರಕೆ, ಚಾಂದ್ ಮೀನ್ , ಕೊಕ್ಕರ್ , ವೀಕ್ಷಣೆಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಬೃಹತ್ ಏಡಿ ನೋಡಲು ಜನರ ದಂಡು: ಈ ಬಾರಿ ಮೀನುಗಳ ಪ್ರದರ್ಶನದಲ್ಲಿ ಒಂದೂವರೆ ಕೆ‌ಜಿ ತೂಕದ ಬೃಹತ್ ಗಾತ್ರದ ಏಡಿ ಆಕರ್ಷಣೀಯವಾಗಿದೆ. ಇದನ್ನು ನೋಡಲ ವಿದ್ಯಾರ್ಥಿಗಳು, ಮಕ್ಕಳು ಸೇರಿದಂತೆ ತಂಡೋಪ ತಂಡವಾಗಿ ನೋಡಿ ಮಂತ್ರಮುಗ್ದವಾಗಿಸಿದೆ.
ಬಂಗುಡೆ ಮೀನು: ಸಮುದ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದು ಅದರ ವೀಕ್ಷಣೆ ಬಲು ಕಷ್ಟ. ಅದರಲ್ಲು ತುಳುನಾಡಿನಲ್ಲಿ ಬಲು ಜನಪ್ರಿಯವಾಗಿರುವ ಬಂಗುಡೆ ಮೀನು ನೋಡಲು ಜನರ ದಂಡೆ ಸೇರುತ್ತಿದೆ. ಉಪ್ಪುನೀರಿನ ಸಾಕಾಣಿಕೆಯು ಸವಾಲು ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದ್ದರು . ಮೀನುಗಾರಿಕಾ ಇಲಾಖೆ ಮಾತ್ರ ನೆರೆದ ಜನರಿಗೆ ಆಶ್ಚರ್ಯಚಕಿತರನ್ನಾಗಿಸಿದೆ.
ವಸ್ತು ಪ್ರದರ್ಶನ ವೆಂಬುದು ಹೊಸ ಹೊಸ ಪ್ರಯೋಗಗಳ ಪ್ರಯೋಗ ಶಾಲೆ. ಜನರಿಗೆ ಮೀನುಗಾರಿಕೆಯ ಪ್ರಯೋಜನಗಳು ಸೇರಿದಂತೆ ವಿವಿಧ ಸೇವೆಗಳು ಮಾಹಿತಿಗಳು, ಮೀನುಗಳ ಪರಿಚಯವಾಗಿಸುವ ವಿನೂತನ ಪ್ರಯತ್ನ ಇದಾಗಿದೆ. ಮೊದಲ ಬಾರಿ ಸಮುದ್ರ ಮೀನುಗಳ ಪ್ರದರ್ಶನ ಹೊಸ ಅಯೋಜಿಸಿದ್ದು ಹೊಸ‌ ಮೈಲಿಗಲ್ಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿ
ದಿವಾಕರ ಖಾರ್ವಿ ಹೇಳುತ್ತಾರೆ.
ಫಲಪುಷ್ಪ ಪ್ರದರ್ಶನ: ಹುಲಿಯ ಬಾಯಿಯೊಳಗಿನ ಸುರಂಗ ದಾರಿಯಲ್ಲಿ. ವಸ್ತು ಪ್ರದರ್ಶನದ ಪೆಂಡಾಲ್‌ನೊಳಗೆ ಪ್ರವೇಶಿಸುವ ದ್ವಾರ ಕೊಟ್ಟಿದೆ.
ಶಾಂತಿಯ ಸಂಕೇತವಾಗಿ ನಿರ್ಮಿಸಿದ ಹೂವಿನ ಪಾರಿವಾಳ, ವೀಣೆ, ದನಕರುಗಳು ಚೆಂಡೆ, ಮದ್ದಳೆ, ಮೃದಂಗ ಕಲಾವಿದರ ನೆನಪನ್ನು ಅದ್ಭುತ ಕೈಚಳಕದೊಂದಿಗೆ ಸಾದರಪಡಿಸಲಾಗಿದೆ. ತರಕಾರಿಯಲ್ಲಿ ಪುಸ್ತಕಗಳ ಮೂಡಿ ಬಂದಿರುವ ಉಚ್ಚಿಲ ದಸರಾದ ರೂವಾರಿ ಡಾ| ಜಿ. ಶಂಕರ್, ವಿವಿಧ ಹಿರಿಯ ಲೇಖ ದೇವರು, ಪ್ರಾಣಿ, ಪಕ್ಷಗಳ ಕೆತ್ತನೆಗಳು ಭಾರೀ ಗಮನ ಸೆಳೆಯುತ್ತಿವೆ.
ಪ್ರಾಣಿಗಳ ಕಲರವ ಹಕ್ಕಿಗಳ ಚಿಲಿಪಿಲಿ, ಮೊಲ, ಪಾರಿವಾಳ, ಗಿಳಿ, ಲವ್ ಬರ್ಡ್ ಗಳ ಮಣ್ಣಿನ ಕಲಾಕೃತಿ ಗಳು ಜನರ ಮನಸೂರೆಗೊಳಿಸಿವೆ.


ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಸ್ಥಳೀಯ ನರ್ಸರಿ ವತಿಯಿಂದ ಹಮ್ಮಿ ಕೊಂಡಿರುವ ವಿವಿಧ ಜಾತಿಯ ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಅದ್ಭುತ ಕಲಾವಿದ ಯತೀಶ್ ಕಿದಿಯೂರು ನಿರ್ಮಿಸಿದ ಬಿಳಿ ನವಿಲು, ಪಾರಿವಾಳವನ್ನು ಜನರು ಮೊಬೈಲ್ ನಲ್ಲಿ ಕ್ಲಿಕ್ಕಿಸಿ ಸಂಭ್ರಮಿಸಿದರು.
ಕರಕುಶಲ ವಸ್ತುಗಳು, ಹಳೆ ನಾಣ್ಯಗಳ ಪ್ರದರ್ಶನ:
ಬುಟ್ಟಿ ಸೇರಿದಂತೆ ವಿವಿಧ ಮಾದರಿಯ ಬಳ್ಳಿಗಳಿಂದ ನಿರ್ಮಿತ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅದರಂತೆಯೇ ಹಳೆ ನಾಣ್ಯಗಳ ಪ್ರದರ್ಶನ ಮಾಡುವ ಮೂಲಕ ನಾಣ್ಯ ಸಂಗ್ರಹಕರು ಹಾಗೂ ಹವ್ಯಾಸಿಗಳಿಗೆ ಇತಿಹಾಸವನ್ನು ಮೆಲುಕು ಹಾಕಲು ಸಹಕಾರಿ ಯಾಗಿದೆ.
ವಸ್ತು ಪ್ರದರ್ಶನ ನಮಗೆ ನಮ್ಮ ಇತಿಹಾಸವನ್ನು ತಿಳಿಸುತ್ತವೆ. ನಮ್ಮ ಹಿರಿಯರ ಜೀವನ, ಪರಂಪರೆ, ಅವರು ಬಳಸುತ್ತಿದ್ದ ವಸ್ತು, ಕಲಾಕೃತಿ ಹೀಗೆ ಎಲ್ಲವೂ ನಮ್ಮನ್ನು ಸೆಳೆಯುವ ಜತೆಗೆ ಹೊಸದೊಂದು ಲೋಕಕ್ಕೆ ಕೊಂಡೊಯ್ಯುತ್ತದೆ ಎಂದು
ವಸ್ತು ಪ್ರದರ್ಶನ ಮೇಲ್ವಿಚಾರಕರು ಹಾಗೂ ಕಲಾವಿದರಾದ ಯತೀಶ್ ಕಿದಿಯೂರು ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು