10:30 PM Monday27 - May 2024
ಬ್ರೇಕಿಂಗ್ ನ್ಯೂಸ್
ಅಜ್ಞಾತ ಸ್ಥಳದಿಂದ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೊ: ಅಶ್ಲೀಲ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ… ಭಾರತದೊಂದಿಗೆ ಬಾಹ್ಯಾಕಾಶ ಸಹಯೋಗ ನಕ್ಷತ್ರದಾಚೆಗೂ ಮುಂದುವರಿಯುವುದು: ಅಮೆರಿಕ ರಾಯಭಾರಿ ಗಾರ್ಸೆಟ್ಟಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸಹೋದರ ಪುತ್ರಿಯ ವಿವಾಹ: ರಾಜ್ಯಪಾಲ, ಸಿಎಂ, ಡಿಸಿಎಂ,… ಕಾನೂನು ಎಲ್ಲರಿಗೂ ಒಂದೇ ಅಲ್ವೇನ್ರೀ? ಎಂಎಲ್ ಎ ಅಂತ ಬಿಟ್ಟು ಬಿಡೋಕೆ ಆಗುತ್ತಾ?:… ಉಡುಪಿ: ನಡು ರಸ್ತೆಯಲ್ಲೇ ಗ್ಯಾಂಗ್ ವಾರ್ ವೀಡಿಯೊ ವೈರಲ್; ಕೊನೆಗೂ ಎಚ್ಚೆತ್ತ ಪೊಲೀಸರಿಂದ… ವರುಣ ಕ್ಷೇತ್ರದಲ್ಲಿ ವರುಣನ ಅಬ್ಬರಕ್ಕೆ ತುಂಬಿದ ಕೆರೆ-ಕಟ್ಟೆಗಳು; ಬಾಗಿನ ಅರ್ಪಿಸಿದ ಗ್ರಾಮಸ್ಥರು ಬುದ್ಧ ಪೂರ್ಣಿಮೆ: ದಕ್ಷಿಣ ಕಾಶಿ ನಂಜನಗೂಡು ದೇಗುಲಕ್ಕೆ ಹರಿದು ಬಂದ ಭಕ್ತ ಸಾಗರ;… ಕುಡುಕ ಪತಿಯಿಂದ ಪತ್ನಿಯ ಬರ್ಬರ ಹತ್ಯೆ: ಮಕ್ಕಳ ಕಣ್ಣೆದುರೇ ಸಲಾಕೆಯಿಂದ ಹೊಡೆದು ಕೊಲೆ… ಪೂರ್ವ ಮುಂಗಾರು: ದ.ಕ., ಉಡುಪಿ ಸಹಿತ ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ… ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:…

ಇತ್ತೀಚಿನ ಸುದ್ದಿ

ಕದ್ರಿಕಂಬಳ: ವೃದ್ಧ ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ

04/10/2023, 18:18

ಮಂಗಳೂರು(reporterkarnataka.com): ಕದ್ರಿಕಂಬಳ ಬಳಿ ಮನೆಯೊಂದರಲ್ಲಿ ಇಬ್ಬರು ವೃದ್ಧ ಮಹಿಳೆಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ವಾಸವಿರುವ ಜಗನ್ನಾಥ್ ಭಂಡಾರಿ(78) ಎಂಬವರ ಪತ್ನಿ ಲತಾ ಭಂಡಾರಿ (70) ಹಾಗೂ ಲತಾ ಭಂಡಾರಿ ಅವರ ಅಕ್ಕ ಸುಂದರಿ ಶೆಟ್ಟಿ (80) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು ಎಂದು ತಿಳಿದು ಬಂದಿದೆ.
ಜಗನ್ನಾಥ್ ಭಂಡಾರಿ ಅವರು ಎಂದಿನಂತೆ ಮಂಗಳೂರಿನ ಯಶ್ ರಾಜ್ ಬಾರಿಗೆ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆ ಮನೆಗೆ ಬಂದಾಗ ಮನೆಯ ಬಾಗಿಲು ಬಂದ್ ಆಗಿತ್ತು. ಕಿಟಕಿಯಿಂದ ಒಳಗೆ ನೋಡಿದಾಗ ಲತಾ ಭಂಡಾರಿ ಹಾಗೂ ಸುಂದರಿ ಭಂಡಾರಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು ಎಂದು ತಿಳಿದು ಬಂದಿದೆ.
ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು