ಇತ್ತೀಚಿನ ಸುದ್ದಿ
ಖಾಸಗಿ ಬಸ್ ಮಾಲೀಕ ನೇಣು ಬಿಗಿದು ಆತ್ಮಹತ್ಯೆ: ಕದ್ರಿಕಂಬಳ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ಸಾವಿಗೆ ಶರಣು
01/10/2023, 22:43

ಮಂಗಳೂರು(reporterkarnataka.com): ಖಾಸಗಿ ಬಸ್ ಮಾಲೀಕರೊಬ್ಬರು ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹೇಶ್ ಮೋಟಾರ್ಸ್ ಮಾಲೀಕ ಪ್ರಕಾಶ್ ಶೆಟ್ಟಿ (40) ಮೃತ ವ್ಯಕ್ತಿ. ಪ್ರಕಾಶ್ ಶೆಟ್ಟಿ ಅವರ ಮೃತದೇಹ ಕದ್ರಿ ಕಂಬಳ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹೇಶ್ ಮೋಟಾರ್ಸ್ ಗೆ ಸೇರಿದ ಅನೇಕ ಸಿಟಿ ಬಸ್ ಗಳು ಪ್ರತಿದಿನ ಸಂಚರಿಸುತ್ತಿವೆ.
ಪ್ರಕಾಶ್ ಶೆಟ್ಟಿ ಅವರ ನಿಧನಕ್ಕೆ
ಬಸ್ ಮಾಲೀಕರ ಸಂಘ ತೀವ್ರ ಶೋಕ ವ್ಯಕ್ತಪಡಿಸಿದೆ.
ಪ್ರಕಾಶ್ ಶೆಟ್ಟಿ ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪಾಡಿ ಹಾಗೂ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ತಿಳಿಸಿದ್ದಾರೆ.