7:32 PM Saturday18 - May 2024
ಬ್ರೇಕಿಂಗ್ ನ್ಯೂಸ್
ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ…

ಇತ್ತೀಚಿನ ಸುದ್ದಿ

`ಸ್ವಚ್ಛ ಲಕ್ಕಿ ಕೃಷ್ಣ 2023′ ಸ್ಪರ್ಧೆ ವಿಜೇತರ ಘೋಷಣೆ: ಸ್ಪಂದನಾ ಪುನರ್ವಸತಿ ಕೇಂದ್ರದಲ್ಲಿ ಲಕ್ಕಿ ಡ್ರಾ

08/09/2023, 20:05

ಉಡುಪಿ(reporterkarnataka.com): ಉಡುಪಿ ಮತ್ತು ಮಂಗಳೂರು ಪ್ರದೇಶದಲ್ಲಿ ಮನೆಗೆಲಸ ಮತ್ತು ನಿರ್ವಹಣಾ ಸೇವೆಗಳನ್ನು ಒದಗಿಸುವ ಪ್ರಮುಖ ಕಂಪನಿಯಾದ ಸ್ವಚ್ಛಂ ಕ್ಲೀನಿಂಗ್ ಸರ್ವೀಸಸ್ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಗುರುವಾರ ನಡೆಸಿದ ‘ಸ್ವಚ್ಛಮ್ ಲಕ್ಕಿ ಕೃಷ್ಣ 2023’ ಸ್ಪರ್ಧೆಯ ವಿಜೇತರನ್ನು ಘೋಷಿಸಿದೆ. ಉಡುಪಿಯ ನೇಜಾರು ಎಂಬಲ್ಲಿರುವ ಸ್ಪಂದನಾ ಪುನರ್ವಸತಿ ಕೇಂದ್ರದಲ್ಲಿ ವಿಶೇಷ ಚೇತನ ಮಕ್ಕಳ ಉಪಸ್ಥಿತಿಯಲ್ಲಿ ನಡೆದ ಸುಂದರ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಯಿತು.
ಹಲವು ಕಡೆಗಳಿಂದ 1000ಕ್ಕೂ ಹೆಚ್ಚು ಪ್ರವೇಶಗಳನ್ನು ಸ್ವೀಕರಿಸಲಾಗಿತ್ತು. ವಾಸ್ತವಿಕವಾಗಿ ಇದು ವೇಷಭೂಷಣ ಸ್ಪರ್ಧೆಯಾಗಿತ್ತು. ಅದರ ಸ್ಪರ್ಧಿಗಳಾಗಿರುವ ಮಕ್ಕಳು ಕೃಷ್ಣನಂತೆ ವೇಷ ಧರಿಸಿರುವ ತಮ್ಮ ಚಿತ್ರಗಳನ್ನು ಕಳುಹಿಸಬೇಕಾಗಿತ್ತು. ವಾಟ್ಸ್ ಆಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರವೇಶಗಳನ್ನು ಸ್ವೀಕರಿಸಲಾಯಿತು. ಮಂಗಳೂರು, ಉಡುಪಿ, ಬೆಂಗಳೂರು, ಮುಂಬೈ ಮತ್ತು ಯುಎಇ ಸಹಿತ ದೇಶ-ವಿದೇಶಗಳಿಂದ ಸಾವಿರಾರು ಜನರು ಈ ಅನನ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸ್ಪರ್ಧೆಯು ವಿಶೇಷವಾಗಿತ್ತು. ಸಾಮಾನ್ಯವಾಗಿ ಇಂತಹ ಸ್ಪರ್ಧೆಗಳಲ್ಲಿ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡುತ್ತಾರೆ. ಇದಕ್ಕೆ ಭಿನ್ನವಾಗಿ ಇಲ್ಲಿ ಅದೃಷ್ಟದ ಚೀಟಿಯ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು ಮತ್ತು ಮೂವರು ಅದೃಷ್ಟಶಾಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.


ಯುವ ಉದ್ಯಮಿ, ಸಮಾಜ ಸೇವಕ ಪ್ರಸಾದ್ ರಾಜ್ ಕಾಂಚನ್ ಅವರು ಉಡುಪಿಯ ತಮ್ಮ ಪ್ರಧಾನ ಕಚೇರಿಯಲ್ಲಿ ಸ್ವಚ್ಛಂ ಕ್ಲೀನಿಂಗ್ ಸರ್ವೀಸಸ್ ಪಾಲುದಾರರು ಮತ್ತು ಆಡಳಿತ ಮಂಡಳಿಯ ಸದಸ್ಯರೊಂದಿಗೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಪ್ರಸಾದ್ ರಾಜ್ ಕಾಂಚನ್ ಅವರು ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳು ಮತ್ತು ಅವರ ಪೋಷಕರನ್ನು ಅಭಿನಂದಿಸಿದರು. ಹೆಚ್ಚಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುವಂತೆ ಪೋಷಕರನ್ನು ಒತ್ತಾಯಿಸಿದರು. ಲಾಭೋದ್ದೇಶವಿಲ್ಲದ, ಸಾಮಾಜಿಕ ಸೇವಾ ವ್ಯಾಪ್ತಿಯ ತಮ್ಮ ಉಪಕ್ರಮದ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಸ್ವಚ್ಛ ಕ್ಲೀನಿಂಗ್ ಸರ್ವೀಸಸ್ ತಂಡದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಸ್ವಚ್ಛಂ ನಿರ್ವಹಣಾ ತಂಡದ ತಾರಾನಾಥ ಪೂಜಾರಿ ಮಾತನಾಡಿ, “ಸ್ಪಂದನಾ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಈ ಪವಿತ್ರ ಹಬ್ಬವನ್ನು ಆಚರಿಸುವುದು ನಮ್ಮ ಸೌಭಾಗ್ಯವಾಗಿದೆ. ನಮ್ಮ ಸ್ಪರ್ಧೆಗೆ ಇಷ್ಟು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿರುವುದರಿಂದ ನಾವು ರೋಮಾಂಚನಗೊAಡಿದ್ದೇವೆ. ಕೇವಲ ಒಂದು ವಾರದ ಅಲ್ಪಾವಧಿಯಲ್ಲಿ 1000ಕ್ಕೂ ಹೆಚ್ಚು ಪ್ರವೇಶಗಳನ್ನು ಸ್ವೀಕರಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾವು ಎಲ್ಲ ಪೋಷಕರು ಮತ್ತು ಸ್ಪರ್ಧಿಗಳನ್ನು ಅಭಿನಂದಿಸುತ್ತೇವೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಸ್ಪರ್ಧೆಯ ಅದೃಷ್ಟಶಾಲಿ ವಿಜೇತರನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ ಮತ್ತು ಪಾಲ್ಗೊಂಡ ಎಲ್ಲರಿಗೂ ಬಹುಮಾನಗಳು ಮತ್ತು ಭಾಗವಹಿಸುವಿಕೆ ಪ್ರಮಾಣಪತ್ರಗಳನ್ನು ಶೀಘ್ರದಲ್ಲೇ ಕಳುಹಿಸುತ್ತೇವೆ ಎಂದು ಘೋಷಿಸಿದರು.
ಮೂವರು ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ ಮತ್ತು ಈ ವಿಜೇತರಿಗೆ ರೂ. 12000 ಮೌಲ್ಯದ ನಗದು ಬಹುಮಾನಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು.

ವಿಜೇತರು
1. ದರ್ಶಿಕಾ ಕೆ. ಪೂಜಾರಿ, ಬೆಂಗಳೂರು
2. ಯಶ್ವಿತ್ ಎಸ್., ಬ್ರಹ್ಮಾವರ
3. ಅದಿತ್ರಿ, ಮುಕ್ಕ

ವಿಜೇತರಿಗೆ ಅಭಿನಂದನೆಗಳು!! ಎಲ್ಲ ಸ್ಪರ್ಧಿಗಳೂ ಅಂಚೆ ಮೂಲಕ ಭಾಗವಹಿಸುವಿಕೆ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ.
ಸ್ವಚ್ಛಂ ಕ್ಲೀನಿಂಗ್ ಸರ್ವಿಸಸ್ ವಸತಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಶುಚಿಗೊಳಿಸುವ ಮತ್ತು ಮನೆಗೆಲಸದ ಸೇವೆಗಳ ಪ್ರಮುಖ ಪೂರೈಕೆದಾರ ಸಂಸ್ಥೆಯಾಗಿದೆ. ಈ ವ್ಯವಹಾರದಲ್ಲಿ ಒಂದು ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಕಂಪನಿಯು ಉತ್ತಮ ತರಬೇತಿ ಪಡೆದ ಸಿಬ್ಬಂದಿಯನ್ನು ಹೊಂದಿದ್ದು, ವೃತ್ತಿಪರ ಮತ್ತು ಯಂತ್ರಚಾಲಿತ ಶುಚಿಗೊಳಿಸುವ ಸೇವೆಗಳಿಗೆ ಅತ್ಯಂತ ವಿಶ್ವಾಸಾರ್ಹ ಹೆಸರಾಗಿದೆ.
ಸುನೀಲ್ ಕುಮಾರ್, ಮಿಥಿಲೇಶ್, ಬ್ರಾನ್ ಡಿ’ಸೋಜಾ, ಗುರುಪ್ರಸಾದ್ ಅವರು ಲಕ್ಕಿ ಡ್ರಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಹಬ್ಬದೂಟವನ್ನು ಉಣಬಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು