6:07 AM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಪಾಲಿಕೆ: 500 ಚ.ಮೀ. ವಿಸ್ತೀರ್ಣವರೆಗಿನ ಎಲ್ಲ ವಾಸ್ತವ್ಯ, ವಾಣಿಜ್ಯ ಕಟ್ಟಡಗಳ ಪರವಾನಿಗೆ, ಪ್ರವೇಶ ಪತ್ರಗಳ ಮಂಜೂರಾತಿ ಅಧಿಕಾರ ವಲಯ ಕಚೇರಿಗೆ

19/08/2023, 09:44

ಮಂಗಳೂರು(reporterkarnataka.com): ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ 500 ಚ.ಮೀ ವಿಸ್ತೀರ್ಣವರೆಗಿನ ಎಲ್ಲ ವಾಸ್ತವ್ಯ, ವಾಣಿಜ್ಯ ಮತ್ತು ಇತರ ಉದ್ದೇಶದ ಕಟ್ಟಡಗಳಿಗೆ ಪರವಾನಿಗೆ, ಪ್ರವೇಶ ಪತ್ರಗಳ ಮಂಜೂರಾತಿ ಹಾಗೂ ಪರವಾನಿಗೆ ನವೀಕರಣ ಹಾಗೂ ಕಟ್ಟಡ ದುರಸ್ತಿ ಸಂಬಂಧಪಟ್ಟ ಎಲ್ಲ ಕಡತಗಳನ್ನು ಆಯಾಯ ವಲಯ ಕಚೇರಿ ಹಂತದಲ್ಲಿ ಮುಕ್ತಾಯಗೊಳಿಸಲು ಆದೇಶ ಹೊರಡಿಸಲಾಗಿದೆ.
ಇನ್ನು ಮುಂದೆ ಸಲ್ಲಿಕೆಯಾಗುವ ಅರ್ಜಿಗಳನ್ನು ವಲಯ ಹಂತದಲ್ಲಿ ಸ್ವೀಕರಿಸಿ ಸಹಾಯಕ ನಗರ ಯೋಜನಾಧಿಕಾರಿಯವರ ವರದಿ ಆಧಾರದ ಮೇಲೆ ವಲಯ ಆಯುಕ್ತರಿಗೆ ಮಂಜೂರಾತಿಗೊಳಿಸುವ ಅಧಿಕಾರವನ್ನು ನೀಡಿ ಆದೇಶಿಸಲಾಗಿದೆ. ಅದರಂತೆ ಮೇಲ್ಕಂಡ ವಿಸ್ತೀರ್ಣಗೊಳಪಟ್ಟ ಕಡತಗಳನ್ನು 15 ದಿನಗಳ ಕಾಲಮಿತಿಯೊಳಗೆ ಹಾಗೂ ಸರ್ಕಾರದಿಂದ ಜಾರಿಗೆ ತಂದಿರುವ ನಿರ್ಮಾಣ್ 2 ಆನ್‍ಲೈನ್ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ನಿರ್ವಹಿಸಲು ನಿರ್ದೇಶನ ನೀಡಲಾಗಿರುತ್ತದೆ. ಅಲ್ಲದೆ ಜಂಟಿ ನಿರ್ದೇಶಕರು (ನಗರ ಯೋಜನೆ) ಪ್ರತೀ ತಿಂಗಳು ಆ ಕಡತಗಳ ವಿಲೇವಾರಿ ಪ್ರಗತಿಯನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಲಾಗಿದೆ.
ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ವಾಸ್ತವ್ಯ, ವಾಣಿಜ್ಯ ಮತ್ತು ಇತರೆ ಕಟ್ಟಡಗಳ ಪರವಾನಿಗೆ ಮತ್ತು ಪ್ರವೇಶ ಪತ್ರಗಳ ಮಂಜೂರಾತಿ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ 250 ಚ.ಮೀ ವೀಸ್ತೀರ್ಣಕ್ಕೆ ಮೇಲ್ಪಟ್ಟ ಎಲ್ಲಾ ಕಡತಗಳು ಆಯುಕ್ತರ ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ಸಲ್ಲಿಸಬೇಕಾದ ವ್ಯವಸ್ಥೆ ಇತ್ತು. ಅದನ್ನು ಗಮನಿಸಿ ಈ ವ್ಯವಸ್ಥೆಯಲ್ಲಿನ ಕಡತಗಳ ಚಲನೆ ಹಾಗೂ ನಿರ್ವಹಣೆ ಬಗ್ಗೆ ಸಮರ್ಪಕವಾಗಿ ವಿಶ್ಲೇಷಿಸಿ, ಈ ಪದ್ದತಿಯಲ್ಲಿ ಕಂಡುಬಂದ ನ್ಯೂನ್ಯತೆಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ಪರಿಹರಿಸುವ ಉದ್ದೇಶದಿಂದ, ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಕ್ರಮವಹಿಸಲಾಗಿದೆ.
ಅದರಂತೆ ಈ ಆದೇಶ ಹೊರಡಿಸಲಾಗಿದೆ. ಕಟ್ಟಡ ನಿರ್ಮಾಣ ಪರವಾನಿಗೆ ಮತ್ತು ಪ್ರವೇಶ ಪತ್ರಗಳಿಗೆ ಸಂಬಂಧಪಟ್ಟಂತೆ ಪ್ರತೀ ತಿಂಗಳು ಸರಾಸರಿ 150 ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಈ ವ್ಯವಸ್ಥೆ ಜಾರಿಗೆ ತಂದ ಹಿನ್ನಲೆಯಲ್ಲಿ ಇನ್ನು ಮುಂದೆ ಕಟ್ಟಡ ನಿರ್ಮಾಣದಾರರು ಕೇಂದ್ರ ಕಚೇರಿಗೆ ಆಗಮಿಸಬೇಕಾದ ಅವಶ್ಯಕತೆಯಿಲ್ಲದೆ ನೇರವಾಗಿ ವಲಯ ಕಚೇರಿಯಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು