10:23 PM Saturday18 - May 2024
ಬ್ರೇಕಿಂಗ್ ನ್ಯೂಸ್
ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ…

ಇತ್ತೀಚಿನ ಸುದ್ದಿ

ತಿರುವೈಲ್ ವೈಟ್ ಗ್ರೋವ್ ಸಂಸ್ಥೆಯಿಂದ ಜನರಿಗೆ ತೊಂದರೆಯಾಗದಂತೆ ಉನ್ನತ ತಂತ್ರಜ್ಞಾನ ಮೂಲಕ ಅಣಬೆ ಕೃಷಿ: ಜೆ. ಆರ್. ಲೋಬೊ

07/08/2023, 15:51

ಮಂಗಳೂರು(reporterkarnataka.com): ನಗರದ ಹೊರವಲಯದ ತಿರುವೈಲ್ ಗ್ರಾಮದಲ್ಲಿ ವೈಟ್ ಗ್ರೋವ್ ಅಗ್ರಿ ಎಲ್.ಎಲ್.ಪಿ ಸಂಸ್ಥೆಯು ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ಉನ್ನತ ತಂತ್ರಜ್ಞಾನದ ಮೂಲಕ ಅಣಬೆಯ ತೋಟಗಾರಿಕಾ ಕೃಷಿಯನ್ನು ಮಾಡಿ ನಮ್ಮ ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ವಹಿಸಲು ಪ್ರೋತ್ಸಹಿಸಲು ಉದ್ದೇಶಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೆ. ಆರ್. ಲೋಬೊ ಹೇಳಿದರು.

ಸಂಸ್ಥೆಯ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನಿರ್ಮಾಣ ಮಾಡಿ ಜನರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಹಾಗೂ ಮುಂದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಅವರಿಗೆ ಈ ಹೈಟೆಕ್ ಕೃಷಿಯ ಬಗ್ಗೆ ಮಾಹಿತಿ ನೀಡಲು ಈ ಸಂಸ್ಥೆಯು ಉದ್ದೇಶಿಸಿದೆ ಎಂದರು.
ವೈಟ್ ಗ್ರೋವ್ ಅಗ್ರಿ ಎಲ್.ಎಲ್.ಪಿ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಅಣಬೆ ಉತ್ಪಾದನಾ ಕೇಂದ್ರವನ್ನು ನಡೆಸುತ್ತಿದೆ.
ಕಡಿಮೆ ಸ್ಥಳದಲ್ಲಿ ವಾಣಿಜ್ಯ ಕೃಷಿಯನ್ನು ಹೈ-ಟೆಕ್ ಮಾದರಿಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ರಾಷ್ಟ್ರದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಫಾರ್ಮ್ ಗಳ ಸ್ಥಾಪನೆ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇರುವುದಾದರೂ ಕೂಡ ಕರ್ನಾಟಕದಲ್ಲಿ ಇದು ಸ್ವಲ್ಪ ಹೊಸತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಉತ್ತಮ ಕೃಷಿಯಾಗಿದ್ದು ಪಾಶ್ಚಾತ್ಯ ದೇಶದ ಜನರು ಅದರಲ್ಲಿಯೂ ಕೂಡ ಚೀನಾ ಈ ಕ್ಷೇತ್ರದಲ್ಲಿ ಅತ್ಯಂತ ಮುಂದುವರಿದ ರಾಷ್ಟ್ರವಾಗಿದೆ ಎಂದು ಅವರು ನುಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಯು ಮುಖ್ಯವಾಗಿರುತ್ತದೆ. ಆದರೆ ಈಗ ಕಾರಣಾಂತರದಿಂದ ಕೃಷಿ ಹಾಗೂ ತೋಟಗಾರಿಕಾ ಭೂಮಿಗಳು ಬಂಜರು ಭೂಮಿಗಳಾಗಿದೆ. ಈ ಕ್ಷೇತ್ರಗಳಿಗೆ ಮತ್ತೆ ಜೀವ ತುಂಬಬೇಕಾದರೆ ವಾಣಿಜ್ಯ ಕೃಷಿಯನ್ನು ಹೊಸದಿಕ್ಕಿನಲ್ಲಿ ಅಭಿವೃದ್ದಿಪಡಿಸಬೇಕಾಗಿದೆ. ಇದರಿಂದ ಹೆಚ್ಚಿನ ಉದ್ಯೋಗಗಳನ್ನು ನಿರ್ಮಿಸಬೇಕಾಗಿದೆ.


ಈ ಉದ್ದೇಶದಿಂದ ವಾಮಂಜೂರಿನ ತಿರುವೈಲ್ ಗ್ರಾಮದಲ್ಲಿ ಮೂರು ಎಕರೆ ಪ್ರದೇಶದಲ್ಲಿ ವೈಟ್ ಗ್ರೋವ್ ಅಗ್ರಿ ಎಲ್.ಎಲ್.ಪಿ ಸಂಸ್ಥೆಯು ಅಣಬೆ ಉತ್ಪಾದನ ಘಟಕವನ್ನು ಪ್ರಾರಂಭಿಸಿದೆ. ಈ ಘಟಕವು ಕಾಂಪೋಸ್ಟ್ ತಯಾರಿಕೆ ಹಾಗೂ ಅಣಬೆ ಕೃಷಿ ಮಾಡುವ ಘಟಕ ಎಂಬ ಎರಡು ಭಾಗಗಳಿಂದ ಕೂಡಿದೆ. ಕಾಂಪೋಸ್ಟ್ ಮಾಡಲು ಪ್ರಮುಖವಾಗಿ ಭತ್ತದ ಹುಲ್ಲು/ಗೋಧಿ ಹುಲ್ಲನ್ನು ಉಪಯೋಗಿಸಿ ಅದನ್ನು ನೀರಿನಲ್ಲಿ ನೆನೆಹಾಕಿ ನಂತರ ಇದಕ್ಕೆ ದನದ ಗೊಬ್ಬರ/ಕುದುರೆ ಗೊಬ್ಬರ/ಕೋಳಿ ಗೊಬ್ಬರ ಮಿಶ್ರಣ ಮಾಡಿ ನಂತರ ವಿವಿಧ ಉಷ್ಣತೆಯಲ್ಲಿ ಪ್ರಕ್ರಿಯೆ ನಡೆಸಬೇಕಾಗಿದೆ. ಇದರಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗ ಮಾಡುವುದಿಲ್ಲ.
ಭತ್ತದ ಹುಲ್ಲು/ಗೋಧಿ ಹುಲ್ಲನ್ನು ಉಪಯೋಗಿಸಿ ಅದನ್ನು ನೀರಿನಲ್ಲಿ ನೆನೆಹಾಕಿ ನಂತರ ಇದಕ್ಕೆ ದನದ ಗೊಬ್ಬರ/ಕುದುರೆ ಗೊಬ್ಬರ/ಕೋಳಿ ಗೊಬ್ಬರ ಮಿಶ್ರಿತಗೊಳಿಸಿದಾಗ ಅಲ್ಪಮಟ್ಟಿಗೆ ಹೈಡ್ರೋಜನ್ ಸಲ್ಫೈಡ್ ಮತ್ತು ಅಮೋನಿಯ ಇದರಿಂದ ಹೊರಸೂಸುತ್ತದೆ. ಇದು ಸ್ವಲ್ಪಮಟ್ಟಿಗೆ ಪರಿಸರದಲ್ಲಿ ವಾಸನೆ ಬರಲು ಕಾರಣವಾಗಿತ್ತು. ಜನರಿಂದ ಈ ಬಗ್ಗೆ ದೂರುಗಳು ಬಂದಾಗ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಇದಕ್ಕೆ ಬೇಕಾದ ಯಂತ್ರೋಪಕರಣಗಳ ಮೂಲಕ ಕಾಂಪೋಸ್ಟ್ ಮಾಡುವ ಸ್ಥಳವನ್ನು ಸಂಪೂರ್ಣವಾಗಿ ಬಂದ್ ಮಾಡಿ ಒಳಗಿನಿಂದ ಯಾವುದೇ ಗ್ಯಾಸ್ ಅಥವಾ ಗಾಳಿ ನೇರವಾಗಿ ಹೊರಹೋಗದಂತೆ ಕ್ರಮ ಜರುಗಿಸಿದೆ. ಹೊರಹೋಗುವ ಯಾವುದೇ ಗಾಳಿಯು ಈ ಹೊಸ ಯಂತ್ರೊಪಕರಣಗಳ ಮೂಲಕ ತಿಳಿಯಾಗಿ ಶುದ್ಧ ಗಾಳಿ ಹೊರಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಈ ಘಟಕವನ್ನು ಇಲ್ಲಿ ಸ್ಥಾಪನೆ ಮಾಡುವ ಮೊದಲು ದೇಶದ ವಿವಿಧ ಭಾಗಗಳಲ್ಲಿ ಇರುವ ಸುಮಾರು ಇಪ್ಪತ್ತು ಹಿರಿಯ ಮತ್ತು ಕಿರಿಯ ಘಟಕಗಳಲ್ಲಿ ಮಾಡುವ ಪ್ರಕ್ರಿಯೆಯನ್ನು ಗಮನಿಸಲಾಗಿದೆ. ಆದರೆ ಈ ರೀತಿ ವಾಸನೆ ಬರುವ ಸಮಸ್ಯೆ ಎಲ್ಲಿಯೂ ಕಂಡು ಬಂದಿಲ್ಲ. ಅದೆಲ್ಲ ಘಟಕಗಳಲ್ಲಿ ಮುಕ್ತ ವಾತಾವರಣದಲ್ಲಿ ಕಾಂಪೋಸ್ಟ್ ಮಾಡಲಾಗುತಿತ್ತು. ಆದರೆ ಇಲ್ಲಿ ದೇಶದಲ್ಲಿ ಪ್ರಥಮವಾಗಿ ಅಣಬೆ ಘಟಕಕ್ಕೆ ಈ ರೀತಿಯ ಯಂತ್ರೊಪಕರಣಗಳನ್ನು ಅಳವಡಿಸಿ ಶುದ್ಧ ಗಾಳಿ ಹೊರಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆಯೂ ಕೂಡ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಂಸ್ಥೆಯು ಮುಂದಾಗಿದೆ ಎಂದರು.
ಸುಮಾರು ಮೂರು ಎಕರೆ ಪ್ರದೇಶದಲ್ಲಿ ಈ ಘಟಕವು ಕಾರ್ಯಾಚರಣೆ ಮಾಡುತ್ತಿದ್ದು ಸುಮಾರು 170 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ 50 ಮಂದಿ ಸ್ಥಳೀಯರಾಗಿರುತ್ತಾರೆ. ಅಲ್ಪ ಜಾಗದಲ್ಲಿ ಇಷ್ಟೊಂದು ಉದ್ಯೋಗ ಸೃಷ್ಟಿಮಾಡುವಂತಹ ವ್ಯವಸ್ಥೆಯು ಅಪರೂಪ.
ಈ ಘಟಕವು ಕೃಷಿ ಉತ್ಪಾದನೆ ಮಾಡುವಂತಹ ಘಟಕವಾಗಿರುತ್ತದೆ. ಆದುದರಿಂದ ಇಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡಬೇಕಾಗಿದೆ. ಇಲ್ಲವಾದಲ್ಲಿ ಬ್ಯಾಕ್ಟಿರಿಯಾ/ಫಂಗಸ್ ಸಮಸ್ಯೆಯಿಂದ ಸಂಪೂರ್ಣ ಕೃಷಿ ಹಾಳಾಗುವ ಸಮಸ್ಯೆ ಇರುತ್ತದೆ. ಈ ಕಾರಣದಿಂದ ಜನರನ್ನು ಮುಕ್ತವಾಗಿ ಅಲೆದಾಡಲು ಬಿಡಲು ನಿರ್ಬಂಧ ಹಾಕಬೇಕಾಗುತ್ತದೆ. ವಾಸನೆ ಕುರಿತು ಸಾರ್ವಜನಿಕರ ದೂರಿನ ಮೇಲೆ ಜಿಲ್ಲಾಧಿಕಾರಿಯು ಕಾಂಪೋಸ್ಟ್ ಘಟಕವನ್ನು ತಾತ್ಕಲಿಕವಾಗಿ ನಿಲ್ಲಿಸಲು ಇತ್ತೀಚೆಗೆ ಆದೇಶ ಮಾಡಿದ್ದು ಅದರ ನಂತರ ಗಾಳಿಯನ್ನು ಶುದ್ದೀಕರಣಗೊಳಿಸಲು ಯಂತ್ರೋಪಕರಣಗಳನ್ನು ಅಳವಡಿಸಿದ ನಂತರ ಇದೆ. ಜುಲೈ 31ರಿಂದ ಆಗಸ್ಟ್ 19 ರ ವರೆಗೆ ಕಾಂಪೋಸ್ಟ್ ಘಟಕ ಆರಂಭಿಸಿ ಈ ಯಂತ್ರೋಪಕರಣಗಳು ಕೆಲಸ ನಿರ್ವಹಿಸುವ ವಿಚಾರದಲ್ಲಿ ಮತ್ತು ಗಾಳಿ ಶುದ್ದೀಕರಣ ವಿಚಾರದಲ್ಲಿ ಸಮೀಕ್ಷೆ ನಡೆಸಲು ಆದೇಶಿಸಿದೆ. ಸರಕಾರದ ಸ್ವತಂತ್ರ ಸಂಸ್ಥೆಗಳಾದ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಹಾಗು NABL ಪ್ರಯೋಗ ಶಾಲೆ ದೈನಂದಿನ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುತಿದ್ದು ಇದನ್ನು ದಾಖಲೆ ಮಾಡುತ್ತಿದೆ. ಈ ದಾಖಲೆಗಳನ್ನು ಮಂಗಳೂರಿನ ನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನೇಮಕವಾಗಿರುವ ತಜ್ಞರ ಸಮಿತಿಗೆ ನೀಡಲಾಗುತ್ತಿದೆ. ತಜ್ಞರ ಸಮಿತಿ ಎಲ್ಲವನ್ನು ಪರಿಶೀಲಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡುತ್ತದೆ ಎಂದು ಅವರು ತಿಳಿಸಿದರು.
ಇಂದು ಚೀನಾ ದೇಶವು ವಿಶ್ವದ 75 ಶೇಕಡದಷ್ಟು ಅಣಬೆ ಉತ್ಪಾದನೆ ಮಾಡಿ ಇಡೀ ವಿಶ್ವಕ್ಕೆ ರಫ್ತು ಮಾಡುತ್ತಿದೆ. ಆದರೆ ಭಾರತ ದೇಶವು ಈ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಶೇಕಡ 2 ಮಾತ್ರ. ಭಾರತ ಸರಕಾರ ಹಿಮಾಚಲ ಪ್ರದೇಶದ ಸೋಲಾನ್ ಎಂಬಲ್ಲಿ ರಾಷ್ಟೀಯ ಅಣಬೆ ಸಂಶೋಧನಾ ಸಂಸ್ಥೆಯನ್ನು ಸ್ಥಾಪನೆ ಮಾಡಿದರು ಕೂಡ ದೇಶದಲ್ಲಿ ಈ ಬಗ್ಗೆ ಹೆಚ್ಚಿನ ಪ್ರಗತಿಯಾಗಿಲ್ಲ. ಇದನೆಲ್ಲ ಪರಿಶೀಲಿಸಿ ಈ ರೀತಿಯ ಹೈಟೆಕ್ ಕೃಷಿ ತೋಟಗಾರಿಕೆ ಮಾಡುವ ಸಂಸ್ಥೆಗಳಿಗೆ ಸಾರ್ವಜನಿಕರು ಹಾಗೂ ಸರಕಾರ ಹೆಚ್ಚಿನ ಬೆಂಬಲವನ್ನು ನೀಡಬೇಕಾಗಿದೆ. ಇದೊಂದು ಸಾವಯವ ಕೃಷಿಯಾಗಿದ್ದು ಯಾವುದೇ ರಾಸಾಯನಿಕ ಬಳಕೆಯಾಗದೆ ಇರುವುದರಿಂದ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕೆಂದು ನಮ್ಮ ಅನಿಸಿಕೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು