7:17 AM Saturday4 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

ಸ್ನೇಹಾಲಯದಲ್ಲಿ ಮಾನಸಿಕ ಅಸ್ವಸ್ಥರಿಗೆ ಫ್ಯಾಷನ್ ಫೆಸ್ಟ್: ದೇಶದಲ್ಲೇ ಮೊದಲ ಪ್ರಯತ್ನ

01/08/2023, 10:14

ಮಂಗಳೂರು(reporterkarnataka.com): ಸ್ನೇಹಾಲಯ ಮಾನಸಿಕರ ಪುನರ್ವಸತಿ ಕೇಂದ್ರದ ನಿವಾಸಿಗಳಿಗಾಗಿ “ಸ್ನೇಹಾಲಯ ಫ್ಯಾಷನ್ ಫೆಸ್ಟ್” ನ್ನು ನಡೆಸಲಾಯಿತು. ಮಾನಸಿಕ ಅಸ್ವಸ್ಥರಿಗೆ ನಡೆದ ಈ ಫ್ಯಾಷನ್ ಫೆಸ್ಟ್ ಭಾರತ ದೇಶದಲ್ಲಿ ನಡೆದ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆಯಿತು. ರಾಂಪ್ ವಾಕ್ ನಡೆಸಿದ ಸ್ನೇಹಾಲಯದ 49 ನಿವಾಸಿಗಳ ಉತ್ಸಾಹ, ಆತ್ಮವಿಶ್ವಾಸ ಹಾಗೂ ಆಶಾವಾದಿತನವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸ್ನೇಹಾಲಯದ ಸಂಸ್ಥಾಪಕರು ಹಾಗೂ ಟ್ರಸ್ಟಿಗಳು ಆಗಮಿಸಿದ ಗಣ್ಯರನ್ನು ಪ್ರೀತಿಯಿಂದ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರದ ಶಾಸಕ ಎ.ಕೆ. ಎಂ. ಅಶ್ರಫ್ ಹಾಗೂ ಬ್ರದರ್ ಜೋಸೆಪ್ ಕ್ರಾಸ್ತಾ ಅವರು ಈ ಫ್ಯಾಷನ್ ಫೆಸ್ಟ್ ನ ಧ್ಯೇಯೋದ್ದೇಶಗಳನ್ನು ತಿಳಿಸುವ ಫಲಕದ ಅನಾವರಣದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಮಂಜೇಶ್ವರದ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನ ಮೊಂತೆರೊ, ಖ್ಯಾತ ನಿರೂಪಕರಾದ ವಿ.ಜೆ ಡಿಕ್ಸನ್, ಖ್ಯಾತ ಛಾಯಾಗ್ರಾಹಕ ಶಂಸುದಿನ್ ತಾಂಡಿಲಂ, ಡಿಜೆ ಶಾಡ್ಜ್, ಅಂತಾರಾಷ್ಟ್ರೀಯ ಫ್ಯಾಷನ್ ಶೋ ನಿರ್ದೇಶಕ ಶನೋಜ್ ಇರಾನಿ, ನೃತ್ಯ ಸಂಯೋಜಕಿ ಸಜ್ನಾ ಸಾಜ್, ವಸ್ತ್ರ ವಿನ್ಯಾಸಕಾರರಾದ ಯಜ್ಞೇಶ್ ಅಮೀನ್ ಉಳ್ಳಾಲ್, ರೋಶನ್ ಮಾರ್ಟಿಸ್ – ಮುಖ್ಯ ಸಂಪಾದಕರು, ಕರಾವಳಿ ಸುದ್ದಿ, ಅಲ್ವಿನ್ ಡಿಸೋಜಾ – ಅಧ್ಯಕ್ಷರು, ಕ್ಯಾಥೋಲಿಕ್ ಸಭಾ, ಮಂಗಳೂರು ಪ್ರಾಂತ್ಯ, ನವೀನ್ ಮೊಂತೆರೊ – ಸೌದಿ ಸ್ನೇಹಿತರ ಸಂಘ, ಎಂ.ಎಸ್.ಥಾಮಸ್ – ಸಂಸ್ಥಾಪಕ ಅಧ್ಯಕ್ಷರು ಸಂತೋಷ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಸಿತಂಗೋಳಿ, ಫ್ಯಾಷನ್ ಮಾಡೆಲ್ ಹಾಗು ಶೋ ಡೈರೆಕ್ಟರ್ ಶೋಭಿತ್ ಹಾಗೂ ವಸ್ತ್ರ ವಿನ್ಯಾಸಗಾರ ರಾದ ಅಕ್ಷಯ ಅವರು ಉಪಸ್ಥಿತರಿದ್ದರು. ಈ ಅಪರೂಪದ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಶೋಭಿತ್ ಹಾಗೂ ಅಕ್ಷಯ ಅವರನ್ನು ಸನ್ಮಾನಿಸಲಾಯಿತು. ಮಂಗಳೂರಿನ ಖ್ಯಾತ ಕಾರ್ಯನಿರ್ವಾಹಕಿಯಾದ ಲವಿಟ ಮಿನೇಜಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು