4:35 AM Wednesday8 - May 2024
ಬ್ರೇಕಿಂಗ್ ನ್ಯೂಸ್
ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ…

ಇತ್ತೀಚಿನ ಸುದ್ದಿ

ಹಸಿರು ಪೀಠಕ್ಕೆ ಕ್ಯಾರೇ ಮಾಡದ ದುರಂಹಕಾರಿ ಕಂಪನಿ: ಕಾರ್ಖಾನೆಯ ತ್ಯಾಜ್ಯ ರಾಜಾರೋಪವಾಗಿ ಫಲ್ಗುಣಿ ನದಿಗೆ

02/06/2023, 19:29

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಹಸಿರು ಪೀಠದ ಎಚ್ಚರಿಕೆಯ ನಡುವೆಯೂ ಜೋಕಟ್ಟೆ ಸಮೀಪದ ರುಚಿ ಗೋಲ್ಡ್ ಕಂಪೆನಿ ಪಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯವನ್ನು ರಾಜಾರೋಷವಾಗಿ ಹರಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ತ್ಯಾಜ್ಯವನ್ನು ನದಿಗೆ ಬಿಡುಗಡೆ ಮಾಡುವ ಫೋಟೋ ಹಾಗೂ ವೀಡಿಯೊಗಳು ಬಹಿರಂಗಗೊಂಡಿವೆ.


ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸತತ ದೂರು, ಪ್ರತಿಭಟನೆಯ ಕಾರಣಕ್ಕೆ ಪಲ್ಗುಣಿ ನದಿ ಹಾಗೂ ತೋಕೂರು ಹಳ್ಳಕ್ಕೆ ಎಂಆರ್ ಪಿಎಲ್, ಎಸ್ ಇಝಡ್, ಅದಾನಿ ವಿಲ್ಮರ್, ರುಚಿಗೋಲ್ಡ್ ಸೇರಿದಂತೆ ಹಲವು ಉದ್ಯಮಗಳು ಕೈಗಾರಿಕಾ ತ್ಯಾಜ್ಯ ಹರಿಸಿ ನದಿ ಹಾಗೂ ಪರಿಸರವನ್ನು ವಿಷಮಯಗೊಳಿಸುವ ವಿಷಯ ಹಸಿರು ಪೀಠದ ಗಮನಕ್ಕೆ ಬಂದಿತ್ರು. ಆ ಕಾರಣದಿಂದ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಉದ್ಯಮಗಳ ಮೇಲೆ ಕಠಿಣ ಕ್ರಮಕ್ಕಾಗಿ ನೋಟೀಸ್ ಜಾರಿಗೊಳಿಸಿತ್ತು. ಇಷ್ಟಾದರು ತುಳುನಾಡಿನ ನದಿ, ಸಮುದ್ರಗಳನ್ನು ಪೂರ್ತಿಯಾಗಿ ನಾಶ ಪಡಿಸುತ್ತಿರುವ ಬೇಜವಾಬ್ದಾರಿ ಕೈಗಾರಿಕೆಗಳ ಮೇಲೆ ಯಾವುದೇ ನಿರ್ಣಾಯಕ ಕ್ರಮಗಳು ಜರುಗಿಲ್ಲ. ರುಚಿಗೋಲ್ಡ್ ಕೈಗಾರಿಕೆಯಂತೂ ತೀರಾ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದು, ತೋಕೂರು ಹಳ್ಳದ ಮೂಲಕ ನೇರವಾಗಿ ಪಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಬಹಿರಂಗವಾಗಿ ಹರಿಸುತ್ತಿದೆ. ಈ ಕುರಿತು ದೂರಿನ ಆಧಾರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎರಡು ದಿನಗಳ ಹಿಂದೆ ಸ್ಥಳ ಪರಿಶೀಲನೆ ಮಾಡಿದ್ದು, ಮಾರಕ ತ್ಯಾಜ್ಯವನ್ನು ದೊಡ್ಡ ಪ್ರಮಾಣದಲ್ಲಿ ತೋಕೂರು ಹಳ್ಳಕ್ಕೆ ಹರಿಸುತ್ತಿರುವುದನ್ನು ಗುರುತಿಸಿದ್ದಾರೆ. ಸಿಕ್ಕಿರುವ ಸಾಕ್ಷ್ಯಾಧಾರಗಳು ತಕ್ಷಣವೇ ರುಚಿಗೋಲ್ಡ್ ಗೆ ಬೀಗ ಜಡಿಯುವಷ್ಟು ಗಂಭೀರವಾಗಿದೆ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೇ ಒಪ್ಪುತ್ತಾರೆ ಎಂದು ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳುತ್ತಾರೆ.
ಅಧಿಕಾರಿಗಳು ಮಾತ್ರ ರುಚಿ ಗೋಲ್ಡ್ ಆಡಳಿತಕ್ಕೆ ಮೌಖಿಕವಾಗಿ ವಿಷಯದ ಗಂಭೀರತೆ ತಿಳಿಸಿದ್ದು, ಕಂಪೆನಿ ಎರಡು ದಿನಗಳ ತರುವಾಯ ಇಂದು(ಶುಕ್ರವಾರ) ತೋಕೋರು ಹಳ್ಳದಲ್ಲಿ ಶೇಖರಣೆಗೊಂಡಿರುವ (ಬಹುತೇಕ ಹರಿದು ಪಲ್ಗುಣಿ ನದಿ, ಆ ಮೂಲಕ ಅರಬ್ಬಿ ಸಮುದ್ರ ಸೇರಿದೆ) ಮಾರಕ ತ್ಯಾಜ್ಯವನ್ನು ಸಂಗ್ರಹಿಸಿ ಬೇರೆಡೆಗೆ ಸಾಗಿಸುತ್ತಿದೆ. ಆ ಮೂಲಕ ಎಲ್ಲರೂ ಸೇರಿ ಹಸಿರು ಪೀಠ, ಪರಿಸರ ನಿಯಮ ಹಾಗೂ ಜನತೆಯ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ.
ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತುಳುನಾಡಿನ ಭವಿಷ್ಯವನ್ನೇ ಮುಳುಗಿಸುತ್ತಿರುವ ಗಂಭೀರವಾದ ಕೈಗಾರಿಕಾ ಮಾಲಿನ್ಯದ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ.
ನಮ್ಮ ಜೀವನದಿ, ಸಮುದ್ರವನ್ನು ನಾಶಪಡಿಸುತ್ತಿರುವ ಕೈಗಾರಿಕೆಗಳು, ಕಂಪೆನಿಗಳೊಂದಿಗೆ ಕೈ ಜೋಡಿಸಿರುವ ಅಧಿಕಾರಿ ವರ್ಗ, ಜನಪ್ರತಿನಿಧಿಗಳ ವಿರುದ್ದ ಪ್ರಬಲ ಧ್ವನಿ ಎತ್ತಲೇಬೇಕಿದೆ. ಈ ಸಲ ತಿಪ್ಪೆ ಸಾರಿಸುವ ಯತ್ನ ಬೇಡ. ರುಚಿ ಗೋಲ್ಡ್ (ತಾಳೆ ಎಣ್ಣೆ ಘಟಕ) ಕ್ಕೆ ಬೀಗ ಜಡಿಯಲೇ ಬೇಕು. ಅದು ಉಳಿದ ಬೇಜವಾಬ್ದಾರಿ ಕೈಗಾರಿಕೆಗಳಿಗೆ ಪಾಠ ಆಗಬೇಕು. ತುಳುನಾಡಿನ ಯುವಜನರಿಗೆ ಉದ್ಯೋಗವನ್ನೂ ನಿರಾಕರಿಸಿ, ನೆಲ ಜಲವನ್ನೂ ನಾಶ ಪಡಿಸುವ ಇಂತಹ ಖತರ್ ನಾಕ್ ಉದ್ಯಮಗಳಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಎಂದು ನಾಗರಿಕ ಹೋರಾಟ ಸಮಿತಿ ಆಗ್ರಹಿಸುತ್ತದೆ. ಸರಿಯಾದ ಕ್ರಮಗಳು ಆಗದಿದ್ದಲ್ಲಿ ತೀವ್ರ ಹೋರಾಟವನ್ನು ನಡೆಸಲಿದೆ ಎಂದು
ಹೋರಾಟ ಸಮಿತಿಯ ಸಂಚಾಲಕರೂ ಆದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು