6:39 AM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಕುಕ್ಕರ್ ಸ್ಫೋಟದ ಸಂತ್ರಸ್ತ ಕುಟುಂಬದ ನೆರವಿಗೆ ನಿಂತ ಗುರು ಬೆಳದಿಂಗಳು ಫೌಂಡೇಶನ್: ನಾಲ್ಕೇ ತಿಂಗಳಲ್ಲಿ 6 ಲಕ್ಷ ವೆಚ್ಚದ ನವೀಕೃತ ಮನೆ ಹಸ್ತಾಂತರ

22/03/2023, 21:11

ಮಂಗಳೂರು(reporterkarnataka.com): ಆ ಇಡೀ ಕುಟುಂಬ ಆ ಹಳೆಯ ಆಟೋರಿಕ್ಷಾವನ್ನು ನಂಬಿ ಬದುಕು ನಡೆಸುತ್ತಿತ್ತು. ಅದೊಂದು ಮುಸ್ಸಂಜೆ ವೇಳೆ ಆಟೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆಟೋದೊಂದಿಗೆ ಅದರ ಸಾರಥಿ ಕೂಡ ತೀವ್ರ ತರಹದ ಗಾಯಗೊಂಡಿದ್ದರು. ಒಂದು ಕಡೆ ರಥ ಸಂಪೂರ್ಣ ನಾಶ, ಇನ್ನೊಂದು ಕಡೆ ಸಾರಥಿ ಸಾವು- ಬದುಕಿನ ನಡುವೆ ಹೋರಾಡುವ ಸನ್ನಿವೇಶ. ಇಂತಹ ಸಂದರ್ಭದಲ್ಲಿ ಆ ಕುಟುಂಬದ
ನೆರವಿಗೆ ನಿಂತಿರುವುದು ಮಂಗಳೂರಿನ ಗುರು ಬೆಳದಿಂಗಳು ಫೌಂಡೇಶನ್.
ಇದು ನಗರದ ನಾಗೂರಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡು ಅದರ ಚಾಲಕ ಪುರುಷೋತ್ತಮ ಪೂಜಾರಿ ಅವರು ತೀವ್ರವಾಗಿ ಗಾಯಗೊಂಡ ಸತ್ಯ ಘಟನೆ. ಅಮಾಯಕ ವ್ಯಕ್ತಿಯೊಬ್ಬರು ಇಲ್ಲಿನ ದುಷ್ಟ ವ್ಯವಸ್ಥೆಗೆ ಸಿಲುಕಿದ ಕಥೆ.


ನಿಜಕ್ಕೂ ಪುರುಷೋತ್ತಮ ಪೂಜಾರಿ ಅವರ ಕುಟುಂಬಕ್ಕೆ ಆ ಆಟೋರಿಕ್ಷಾವೇ ಆಧಾರ. ಆದರೆ ಸ್ಫೋಟದಿಂದ ಆಟೋವೋ ಇಲ್ಲ, ಜತೆಗೆ ಅದರ ಸಾರಥಿ ಪುರುಷೋತ್ತಮ ಪೂಜಾರಿ ಅವರಿಗೂ ಮೈ ತುಂಬಾ ಗಾಯ. ನಿಲ್ಲಲ್ಲು ಸರಿಯಾದ ಸೂರಿಲ್ಲ. ಇದರೊಂದಿಗೆ ಮಗಳ ಮದುವೆ ಮಾಡಬೇಕು. ಈ ಸಂದರ್ಭದಲ್ಲಿ ಪುರುಷೋತ್ತಮ ಪೂಜಾರಿ ಅವರ ಕುಟುಂಬಕ್ಕೆ ಮರುಭೂಮಿಯಲ್ಲಿ ಓಯಸಿಸ್ ನಂತೆ ಎದುರಾದದ್ದು ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್. ಪುರುಷೋತ್ತಮ ಪೂಜಾರಿ ಅವರ ಹಳೆಯ ಮನೆಯನ್ನು ಫೌಂಡೇಶನ್ ನ ಅಧ್ಯಕ್ಷ ಪದ್ಮರಾಜ್ ಆರ್. ಅವರ ಮುತುವರ್ಜಿಯಿಂದ ಸಂಪೂರ್ಣ ನವೀಕರಣ ಮಾಡಿ ಯುಗಾದಿ ಶುಭ ಘಳಿಗೆಯಲ್ಲೇ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಲಾಯಿತು.
ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್ ಕೇವಲ 4 ತಿಂಗಳ ಕಿರು ಅವಧಿಯಲ್ಲಿ 6 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹಳೆಯ ಮನೆಯನ್ನು ಸಂಪೂರ್ಣ ನವೀಕರಣ ಮಾಡಿಕೊಟ್ಟು ಇಡೀ ಸಮಾಜಕ್ಕೆ ಮಾದರಿಯಾಗಿದೆ. ಇದೀಗ ಸರಳ ಕಾರ್ಯಕ್ರಮದಲ್ಲಿ ಪುರುಷೋತ್ತಮ ಪೂಜಾರಿ ಅವರಿಗೆ ಮನೆ ಹಸ್ತಾಂತರ ಮಾಡಲಾಗಿದೆ.
ಪುರುಷೋತ್ತಮ್ಮ ಪೂಜಾರಿ ಅವರ ಚಿಕಿತ್ಸಾ ವೆಚ್ಚ ಬರೊಬ್ಬರಿ 8 ಲಕ್ಷ ಆಗಿದೆ. ಇದನ್ನು ಅವರ ಮಗಳ ಇಎಸ್ಐ ಸೌಲಭ್ಯದಿಂದ ಭರಿಸಲಾಗಿದೆ. ಇನ್ನೂ 2 ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ ಕೊಡುವುದು ಬಾಕಿ ಇದೆ. ಸರ್ಕಾರದಿಂದ ಪರಿಹಾರದ ಭರವಸೆ ಸಿಕ್ಕಿದೆ, ಈವರೆಗೂ ಬಂದಿಲ್ಲ. ದಿನವೂ ಆಸ್ಪತ್ರೆ, ಔಷಧಿಗೆ ಹಣ ಬೇಕು. ಶಾಸಕ ವೇದವ್ಯಾಸ್ ಕಾಮತ್ ಅವರು ಆಟೋ ರಿಕ್ಷಾ ಕೊಡಿಸಿದ್ದಾರೆ. ಸಚಿವರು, ಶಾಸಕರು ವೈಯಕ್ತಿಕ ಪರಿಹಾರ ನೀಡಿದ್ದಾರೆ. ಆದರೆ ಸರಕಾರದಿಂದ ಆಸ್ಪತ್ರೆ ವೆಚ್ಚ ಕೊಡುತ್ತೇವೆ ಎಂದಿದ್ದರೂ, ಅದರೆ ಇನ್ನೂ ಬಂದಿಲ್ಲ ಎಂದು ಪುರುಷೋತ್ತಮ ಪೂಜಾರಿ ಹೇಳುತ್ತಾರೆ.
ಗುರು ಬೆಳದಿಂಗಳು ಫೌಂಡೇಶನ್ ಪದ್ಮರಾಜ್ ಅವರು ಮಾತನಾಡಿ, ಬಾಂಬ್ ಸ್ಫೋಟದಲ್ಲಿ ಅಮಾಯಕ ಸಂತ್ರಸ್ತ ವ್ಯಕ್ತಿಗೆ ನಾಲ್ಕೈದು ತಿಂಗಳು ಕಳೆದರೂ ಪರಿಹಾರ ಕೊಡಿಸಿಲ್ಲ. ಆಸ್ಪತ್ರೆ ಬಿಲ್ ಕೊಡಿಸುವ ಬಗ್ಗೆ ಜಿಲ್ಲಾಡಳಿತದಿಂದ ಆದೇಶ ಪತ್ರ ನೀಡಲಾಗಿದೆ. ಆದರೆ ಏನು ಪ್ರಯೋಜನ ಆಗಿಲ್ಲ. ಇಎಸ್ಐ ಸೌಲಭ್ಯಕ್ಕಿಂತ ಹೆಚ್ಚು ಖರ್ಚಾದರೆ, ಅದನ್ನು ಜಿಲ್ಲಾಡಳಿತದಿಂದ ಕೊಡಿಸುತ್ತೇವೆ ಎಂದು ಮಗಳಿಗೆ ತಿಳಿಸಿದ್ದಾರೆ. ಇದ್ಯಾವ ಸೀಮೆ ನ್ಯಾಯ. ಬಾಂಬ್ ಸ್ಫೋಟದ ಸಂತ್ರಸ್ತನಿಗೆ ಪರಿಹಾರ ಕೊಡಲು ಅಂಗಲಾಚುವ ಸ್ಥಿತಿ ಬಂದಿದೆ. ಅವರ ಸ್ಥಿತಿ ನೋಡಿ ಪರಿಹಾರ ಕೊಡಬೇಕು ಎಂದು ಹೇಳಿದರು.
ಮನೆ ಹಸ್ತಾಂತರ ವೇಳೆ ಬೆಳದಿಂಗಳು ಫೌಂಡೇಶನ್‌ ಅಧ್ಯಕ್ಷ ಪದ್ಮರಾಜ್ ಆರ್., ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ.ಜೆ.ಬಿ.ಕ್ರಾಸ್ತಾ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಉದ್ಯಮಿ ರೋಹನ್ ಕಾರ್ಪೊರೇಷನ್ನ ರೋಹನ್ ಮೊಂತೆರೋ, ರಘುನಾಥ್ ಮಾಬೆನ್, ಧರ್ಮರಾಜ ಅಮ್ಮುಂಜೆ, ಕಾರ್ಪೊರೇಟರ್ ಪ್ರವೀಣ್‌ ಚಂದ್ರ ಆಳ್ವ, ಮಾಜಿ ಕಾರ್ಪೊರೇಟರ್ ಡಿ.ಕೆ.ಅಶೋಕ್ ಕುಮಾರ್, ಇಂಡಿಯಾನಾ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಸತ್ಯಜಿತ್ ಸುರತ್ಕಲ್, ಪ್ರಮುಖರಾದ ದೇವೇಂದ್ರ ಪೂಜಾರಿ, ಮೋಹನ್ ನೆಕ್ಕರೆಮಾರು, ಸೂರ್ಯಕಾಂತಿ ಸುವರ್ಣ, ಆಲ್ವಿನ್ ಪ್ರಕಾಶ್, ನಾಗವೇಣಿ, ಹಿತಾ ಪ್ರವೀಣ್ ಕುಮಾರ್, ಶೈಲೇಂದ್ರ ಸುವರ್ಣ, ರೋಹಿತ್ ಕುವೈತ್, ಜಯಾನಂದ ಪೂಜಾರಿ, ರಾಜೇಶ್ ಬಿ., ಪ್ರವೀಣ್ ಕುಮಾರ್ ಹಾಗೂ ಗುರುಬೆಳದಿಂಗಳು ಫೌಂಡೇಶನ್‌ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು