12:51 AM Saturday18 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಮನೆಯನ್ನೇ ಪಂಚಾಯಿತಿ ಕಚೇರಿ ಮಾಡಿಕೊಂಡ ಪಿಡಿಒ!!; ಲಕ್ಷಾಂತರ ರೂ. ಅವ್ಯವಹಾರ: ಗ್ರಾಪಂ ಉಪಾಧ್ಯಕ್ಷರ ಆರೋಪ

08/12/2022, 11:06

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಯರಂವಾರಿಪಲ್ಲಿ ಪಂಚಾಯಿತಿಯ ಪಿಡಿಒ ಅಧಿಕಾರಿ ಮನೆಯನ್ನೇ ಪಂಚಾಯಿತಿ ಕಚೇರಿಯನ್ನೇ ಮಾಡಿಕೊಂಡು ಕಚೇರಿಗೆ ಬಾರದೇ ಪಂಚಾಯಿತಿ ಹಣವನ್ನು ಗುಳಂ ಮಾಡಿಕೊಂಡು ಸರ್ಕಾರವನ್ನು , ಸಾರ್ವಜನಿಕರನ್ನ ಮೋಸ ಮಾಡುತ್ತಿದ್ದಾರೆ ಎಂದು ಗ್ರಾಪಂ ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸ ರೆಡ್ಡಿ ದೂರು ನೀಡಿದ್ದಾರೆ.

ಪಿಡಿಒ ಅಧಿಕಾರಿ ವಿರುದ್ಧ ಸರ್ಕಾರವು ಕ್ರಮಕೈಗೊಳ್ಳುವಂತೆ ಅವರು
ಮನವಿ ಮಾಡಿದ್ದಾರೆ. ಯರಂವಾರಿಪಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಿಂದ ಹಾಗೂ ಸದಸ್ಯರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಪ್ರವೃತ್ತಿ ವಿರುದ್ಧ ಮಂಗಳವಾರ ಗ್ರಾಪಂ ಕಚೇರಿ ಮುಂದೆ ಪ್ರತಿಭಟಿಸಿ ಮಾತನಾಡಿದರು. ಸರ್ಕಾರವು ಗ್ರಾಮೀಣ ಭಾಗದ ಹಳ್ಳಿಗಳು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೋಟ್ಯಾಂತರ ರೂ.ಗಳ ವೆಚ್ಚ ಮಾಡುತ್ತಿದೆ. ಆದರೆ ಯರಂವಾರಿಪಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣವನ್ನು ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷರ ಗಮನಕ್ಕೆ ತರದೇ ಕೋಟ್ಯಂತರ ರೂಗಳನ್ನು ಡ್ರಾ ಮಾಡಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.

ಪಿಡಿಒ ಏಜಾಜ್‌ಪಾಷ ಅವರು ಲಕ್ಷಾಂತರ ಹಣವನ್ನು ಲೋಟಿ ಮಾಡುತ್ತಿರುವ ಬಗ್ಗೆ ದಾಖಲೆಗಳು ಇದ್ದು, ಈ ದಾಖಲೆಗಳನ್ನು ಸಿಇಒ ಹಾಗೂ ಇಒ ರವರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಆರೋಪಿಸಿದರು.

ನರೇಗಾ ಹಾಗೂ ಇತರೆ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡಲು ಸರ್ಕಾರದಿಂದ ಡ್ಯಾಂಗಲ್‌ನ್ನು ಅಧ್ಯಕ್ಷರಿಗೊಂದು , ಪಿಡಿಒ ಗೊಂದು ನೀಡಲಾಗಿದೆ . ಪಿಡಿಒ ರವರು ಅಧ್ಯಕ್ಷೆ ಅನಕ್ಷರ
ಸ್ಥರಾಗಿದ್ದು , ಪತಿಗೆ ಆಸೆ , ಆಮೀಷಗಳನ್ನು ನೀಡಿ , ಅಧ್ಯಕ್ಷರ ಡ್ಯಾಂಗಲ್‌ನ್ನು ಸಹ ಪಡೆದುಕೊಂಡು ಲಕ್ಷಾಂತರ ಹಣವನ್ನು ಡ್ರಾ ಮಾಡಿ ಸರ್ಕಾರದ ಹಣವನ್ನು ಲೋಟಿ ಮಾಡಿದ್ದಾರೆ. ಪಿಡಿಒರವರು ಸರ್ಕಾರದ ಯಾವುದೇ ಅನುದಾನ ಬಂದರೂ ಸದಸ್ಯರ ಗಮನಕ್ಕೆ ತರುವುದಿಲ್ಲ . ೧೬ ಸದಸ್ಯರು ಕಳೆದ ೬ ತಿಂಗಳಿನಿಂದ ಸಾಮಾನ್ಯ ಸಭೆ ನಡೆದಿಲ್ಲ. ವಾರ್ಡ್ ಸಭೆ , ಗ್ರಾಮಸಭೆ ನಡೆದಿಲ್ಲ.

ಅಲ್ಲದೆ ವಸತಿ ಯೋಜನೆಗೆ ಸಂಬಂದಿಸಿದಂತೆ ವಸತಿ ಹೀನರಿಗೆ ಪಕ್ಷಾತೀತವಾಗಿ ವಸತಿಯನ್ನು ಕಟ್ಟಿಕೊಳ್ಳಲು ೧೬೨ ಫಲಾನುಭವಿಗಳ ಪಟ್ಟಿ ಮಾಡಿದರೆ , ಪಟ್ಟಿಯಲ್ಲಿ ತಮಗೆ ಇಷ್ಟ ಬಂದವರನ್ನು ಪಟ್ಟಿಗೆ ಸೇರಿಸಿದ್ದಾರೆ ಎಂದು ಪಿಡಿಒ ವಿರುದ್ಧ ಆರೋಪಿಸಿದರು . ೩೪ ಗ್ರಾಮಗಳಿಗೆ ಕಾಮಾಗಾರಿಗಳಿಗೆ ೧ ಕೋಟಿ ೩೦ ಲಕ್ಷ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ ಹಣವನ್ನು ಡ್ರಾ ಮಾಡಿದ್ದಾರೆ ಎಂದು ಆರೋಪಿಸಿದರು .ಪಂಚಾಯಿತಿಗೆ ಸಂಬಂಧಿಸಿದಂತೆ ವರ್ಷಕೊಮ್ಮೆ ಪಂಚಾಯಿತಿಯ ಖರ್ಚು ವೆಚ್ಚಗಳ ಜಮಾಬಂದಿ ಕಾರ್ಯಕ್ರಮವನ್ನು ಆಯೋಜಿಸಬೇಕಾಗಿತ್ತು . ಅದ ಸಹ ನಡೆದಿಲ್ಲ . ಪಿಡಿಓ ಏಜಾಜಪಾಷರವರು ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ . ಪಂಚಾಯಿತಿಗೆ ಸಂಬಂಧಿಸಿದ ಸಾರ್ವಜನಿಕರನ್ನು ನಿಮಗೆ ಕೆಲಸ ಕೊಡುತ್ತೇನೆ ನೀವು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಮೀಷವನ್ನು ಒಡ್ಡುತ್ತಿದ್ದಾರೆ ಎಂದು ಆಪರೋಪ ವ್ಯಕ್ತಪಡಿಸಿದರು.

ಪಿಡಿಒ ಅಧಿಕಾರಿ ಕಳೆದ ೪ ತಿಂಗಳಿನಿಂದ ತಂಬ್ ಕೊಟ್ಟಿಲ್ಲ , ಇದರ ಬಗ್ಗೆ ಇಒ ಬಗ್ಗೆ ಗಮನಕ್ಕೆ ತರಲಾಗಿದೆ. ಪಿಡಿಒ ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಅನೇಕ ಬಾರಿ ಸಿಇಒ , ಇಒ ರವರು ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಪತ್ರಿಕೆ ಬಳಿ ತಮ್ಮ ಆಳಲು ತೋಡಿಕೊಂಡರು . ಜಿಲ್ಲೆಯ ಹಿರಿಯ ಅಧಿಕಾರಿಗಳು ಪಿಡಿಒ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು . ಗ್ರಾಪಂ ಸದಸ್ಯೆ ಮಂಜುಳ ಮಾತನಾಡಿ ಸರ್ಕಾರವು ಮಹಿಳೆಯರನ್ನು ಮನೆಕೆಲಸಗಳಲ್ಲಿ ಸೀಮತವಾಗಿಸದೆ , ಮಹಿಳೆಯರನ್ನು ಸಬಲರಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ . ಇಲ್ಲಿ ನಮ್ಮನ್ನು ಪರಿಗಣಿಸದೆ ೧೫ ನೇ ಕಾಸಿನ ಯೋಜನೆಡಿಯಲ್ಲಿ ಒಟ್ಟು ೯೩ ಲಕ್ಷವನ್ನು ದೂರಪಯೋಗಪಡಿಸಿಕೊಂಡಿದ್ದಾರೆ . ಪಂಚಾಯಿತಿಯಲ್ಲಿ ಇರಬೇಕಾದ ದಾಖಲೆ ಪುಸ್ತಕಗಳು ಪಿಡಿಒ ಮನೆಯಲ್ಲಿ ಇರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ .

ಮುಖಂಡ ಪದ್ಮನಾಭರೆಡ್ಡಿ ಮಾತನಾಡಿ ನನ್ನ ಹೆಂಡತಿ ರಾಧಮ್ಮ ಯರಂವಾರಿಪಲ್ಲಿ ಪಂಚಾಯಿತಿಯಲ್ಲಿ ೨೦೧೫-೨೦೨೦ ರ ಅಧ್ಯಕ್ಷರಾಗಿ ಕಾರ್ಯನಿರ್ವಹಿದ್ದರು . ಈ ೫ ವರ್ಷದ ಸಮಯದಲ್ಲಿ ಅಧ್ಯಕ್ಷರು ಸಹಿತ ಇದುವರೆಗೂ ಯಾರಿಗೂ ಗೌರವಧನ ನೀಡಿಲ್ಲವೆಂದು ದೂರಿದ್ದಾರೆ . ಗ್ರಾಪಂ ಸದಸ್ಯರಾದ ರಾಜ ,ಗೌರಿಶಂಕರ್ , ಕವಿತಾ , ಶಿವಾರೆಡ್ಡಿ ಮುಖಂಡರಾದ ಸುಧಾಕರ , ಪದ್ಮನಾಭ ರಡ್ಡಿ , ಪಾತೂರು ಬಾಬುರೆಡ್ಡಿ , ಹರ್ಷವರ್ಧನ ಇದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು