7:09 PM Thursday2 - February 2023
ಬ್ರೇಕಿಂಗ್ ನ್ಯೂಸ್
ಸಮುದ್ರ ಗಡಿ ರಕ್ಷಣೆಯಲ್ಲಿ ಕೋಸ್ಟ್ ಗಾರ್ಡ್ ಸೇವೆ ಅನನ್ಯ: ರೈಸಿಂಗ್ ಡೇ ಸಮಾರಂಭದಲ್ಲಿ… ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ವರ್ಗಾವಣೆ: ಚನ್ನಬಸಪ್ಪ ನೂತನ ಆಯುಕ್ತ ಅಭ್ಯರ್ಥಿಗಳ ಆಯ್ಕೆ: ಇಂದು ಕಾಂಗ್ರೆಸ್ ಮಹತ್ವದ ಸಭೆ; ಶೀಘ್ರದಲ್ಲೇ 150 ಮಂದಿಯ ಪಟ್ಟಿ… ಚಿಕ್ಕಮಗಳೂರು: ಕೈ ತೊರೆದು ಕಮಲ ಹಿಡಿದ ಕಾರ್ಯಕರ್ತನ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು ಕೇಂದ್ರ ಬಜೆಟ್: ಮೀನುಗಾರಿಕೆ ಅಭಿವೃದ್ಧಿಗೆ 6 ಸಾವಿರ ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ… ರಾಜಕೀಯ ಮುತ್ಸದ್ಧಿ, ಕೇಂದ್ರ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಇನ್ನಿಲ್ಲ ದ.ಕ. ಜಿಲ್ಲಾ ಎಸ್ಪಿ ಸೋನಾವಾಣೆ ಋಷಿಕೇಷ್ ವರ್ಗಾವಣೆ: ಅಮಾಥೆ ವಿಕ್ರಂ ನೂತನ ಪೊಲೀಸ್… ದೇವೇಗೌಡ ಕುಟುಂಬ ಬಗ್ಗೆ ಅವಹೇಳನ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ವಿರುದ್ಧ ಯುವ ಜೆಡಿಎಸ್… ಸಿಡಿ ಪ್ರಕರಣ ಸಿಬಿಐಗೆ ವಹಿಸಿ: ರಮೇಶ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಅಥಣಿ… ಫಾಝೀಲ್ ಕೊಲೆ ಪ್ರಕರಣ ಮರು ತನಿಖೆಯಾಗಲಿ; ಹಿಂಸೆಗೆ ಪ್ರಚೋದಿಸುವವರ ಗಡಿಪಾರು ಮಾಡಿ: ಪ್ರತಿಪಕ್ಷದ…

ಇತ್ತೀಚಿನ ಸುದ್ದಿ

ಕಾಡಾನೆ ಸೆರೆ ಕಾರ್ಯಾಚರಣೆ 4ನೇ ದಿನಕ್ಕೆ: ಡ್ರೋನ್ ಕ್ಯಾಮರಕ್ಕೂ ಚಳ್ಳೆಹಣ್ಣು ತಿನ್ನಿಸಿದ ಮೂಡಿಗೆರೆ ಭೈರ

02/12/2022, 18:10

ಸಂತೋಪ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka.com

ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿವಿಧೆಡೆ ನರಹಂತಕ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಗೊಂಡಿದ್ದು,ಡ್ರೋನ್ ಕ್ಯಾಮರಕ್ಕೂ ಮೂಡಿಗೆರೆ ಭೈರ ಚಳ್ಳೆಹಣ್ಣು ತಿನ್ನಿಸಿದೆ.

ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಡಾನೆ ಭೀತಿ-ಹಾವಳಿ ಎಗ್ಗಿಲ್ಲದೆ ಮುಂದುವರಿದಿದೆ. ಒಂದೆಡೆ ನರಹಂತಕ ಆನೆಗಳ ಹುಡುಕಾಟ ನಡೆಯುತ್ತಿದ್ದರೆ,ಮತ್ತೊಂದೆಡೆ ಮೈಕ್ ಅನೌನ್ಸ್ ಮೆಂಟ್ ನಡೆಯುತ್ತಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಭಾಗದಲ್ಲಿ 3 ಕಾಡಾನೆಗಳು ರೌಂಡ್ಸ್ ಮಾಡುತ್ತಿದೆ. ಕಾಫಿ ತೋಟದಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳು, ಸ್ಥಳಿಯರಲ್ಲಿ ಆತಂಕ ಉಂಟು ಮಾಡಿದೆ.

ಜನ ಎಚ್ಚರಿಕೆಯಿಂದಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮೈಕ್ ನಲ್ಲಿ ಅನೌನ್ಸ್ ಮೆಂಟ್ ಮಾಡುತ್ತಿದ್ದಾರೆ. ಆದರೆ ಆನೆಗಳು ಕಾರ್ಯಚರಣೆಗೂ ಸಿಗದೆ ತಪ್ಪಿಸಿಕೊಳ್ಳುತ್ತಿವೆ.

ಡ್ರೋನ್ ಬಳಸಿ ಮೂಡಿಗೆರೆ ಬೈರಾ ಹಾಗೂ ಮತ್ತೊಂದು ಒಂಟಿ ಸಲಗಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ನಾಲ್ಕನೇ ದಿನವೂ ಕಾರ್ಯಚರಣೆ ಮುಂದುವರಿದಿದೆ.
ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕಿನ‌ ಕುಂದೂರು, ತಳವಾರ ಸುತ್ತಮುತ್ತ ಕಾರ್ಯಾಚರಣೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು